ಸರ್ಕಾರದಿಂದ ವಸತಿ ಶಾಲೆ ಮಕ್ಕಳಿಗೆ ಆಹಾರ ಸಪ್ಲಾಯ್ ಆಗ್ತಿಲ್ವಾ? ಸರ್ಕಾರಿ ವಸತಿ ಶಾಲೆಯಲ್ಲಿ ಊಟಕ್ಕಿಲ್ಲ ಗ್ಯಾರಂಟಿ ಭಾಗ್ಯ.

ಸರ್ಕಾರದಿಂದ ವಸತಿ ಶಾಲೆ ಮಕ್ಕಳಿಗೆ ಆಹಾರ ಸಪ್ಲಾಯ್ ಆಗ್ತಿಲ್ವಾ? ಸರ್ಕಾರಿ ವಸತಿ ಶಾಲೆಯಲ್ಲಿ ಊಟಕ್ಕಿಲ್ಲ ಗ್ಯಾರಂಟಿ ಭಾಗ್ಯ.
ಗದಗ:ಸತ್ಯಮಿಥ್ಯ (ಜು-28).
ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರು ನೋಡಲೇಬೇಕಾದ ಸುದ್ದಿ ಇದು. ಸರಿಯಾದ ಊಟ ಇಲ್ಲದೇ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗುತ್ತಿರುವ ಘಟನೆ ಜಿಲ್ಲೆಯ ಶಿರಹಟ್ಟಿಯಲ್ಲಿ ಜರುಗಿದೆ.
ಜಿಲ್ಲೆಯ ಶಿರಹಟ್ಟಿ ಹೊರವಲಯದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸರಿಯಾಗಿ ಊಟ ಸಿಗದೆ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೊರಟಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮಕ್ಕಳು ಊಟಕ್ಕಾಗಿ ಗೋಳಾಟ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸರಿಯಾಗಿ ಊಟ ನೀಡದಕ್ಕೆ ರಜೆ ನೆಪದಲ್ಲಿ ಮಕ್ಕಳು ಊರಿಗೆ ಹೊರಟಿದ್ದಾರೆ.
6 ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡ್ತಿರುವ 250 ವಿದ್ಯಾರ್ಥಿನಿಯರು ಗೋಳಾಟ ನಡೆಸಿದ್ದಾರೆ. ಗ್ಯಾರಂಟಿ ಭರ್ತಿಮಾಡಲು ಮಕ್ಕಳಿಗೆ ಅರೆ ಬರೆ ಹೊಟ್ಟೆ ತುಂಬಿಸುತ್ತಿದೆಯಾ ಸರ್ಕಾರ? ಸರ್ಕಾರದಿಂದ ವಸತಿ ಶಾಲೆ ಮಕ್ಕಳಿಗೆ ಆಹಾರ ಸಪ್ಲಾಯ್ ಆಗ್ತಿಲ್ವಾ? ಸರ್ಕಾರಿ ವಸತಿ ಶಾಲೆಯಲ್ಲಿ ಊಟಕ್ಕಿಲ್ಲ ಗ್ಯಾರಂಟಿ ಭಾಗ್ಯ ಎಂಬಂತಾಗಿದೆ. ಜನ್ರಿಗೆ ಅನ್ನ ಭಾಗ್ಯ, ವಸತಿ ಶಾಲೆ ಮಕ್ಕಳಿಗೆ ಕಣ್ಣೀರಿನ ಭಾಗ್ಯ ಎಂಬಂತಾಗಿದೆ.
ಮಕ್ಕಳನ್ನು ಅಡುಗೆ ಮಾಡಲು, ಬಡಿಸಲು ಸಿಬ್ಬಂದಿಗಳು ಬಳಸಿಕೊಳ್ಳುತ್ತಿದ್ದು, ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ಚಿಕನ್ ಇಲ್ಲ. ಕೇವಲ ಒಂದು ಚಪಾತಿ ಅಥವಾ ಒಂದು ರೊಟ್ಟಿ, ಹಾಫ್ ರೈಸ್ ನೀಡುತ್ತಿರುವ ಆರೋಪ ಕೇಳಿಬಂದಿದೆ. ಒಂದು ಮೊಟ್ಟೆಯಲ್ಲಿ ಅರ್ಧ ಮೊಟ್ಟೆ ಮಾತ್ರ ವಿತರಣೆ ಆರೋಪ ಕೇಳಿ ಬಂದಿದೆ. ಆಹಾರ ವೇಳಾಪಟ್ಟಿಯಂತೆ ಶಾಲಾ ಸಿಬ್ಬಂದಿಗಳು ಆಹಾರ ನೀಡಿಲ್ಲ. ಬಿಸಿ ನೀರು, ಶುಚಿ ತರಕಾರಿ, ಸರಿಯಾದ ವ್ಯವಸ್ಥೆ ಇಲ್ಲದೆ ಮಕ್ಕಳು ಪರದಾಟ ನಡೆಸಿದ್ದಾರೆ.
ಇಷ್ಟೆಲ್ಲಾ ಕಂಡರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಶಿರಹಟ್ಟಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಹೇಳೋರ ಕೇಳೋರು ಯಾರು ಇಲ್ಲವಾ? ವಿದ್ಯಾರ್ಥಿಗಳ ಅರ್ಧ ಹೊಟ್ಟೆ ತುಂಬಿಸುತ್ತಿರುವ ವಸತಿ ಶಾಲೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಸರ್ಕಾರ, ಪ್ರಾಂಶುಪಾಲರು ಹಾಗೂ ವಾರ್ಡನ್ ವಿರುದ್ಧ ಪಾಲಕರು ಆಕ್ರೋಶ ಹೊರ ಹಾಕಿದ್ದಾರೆ.
ವರದಿ:ಮುತ್ತು ಗೋಸಲ