ಕೆ ಎಚ್ ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜ್ಯೂಕೇಶನ್ ಅಕ್ಯಾಡೆಮಿ.
ಗದಗ : ಸತ್ಯಮಿಥ್ಯ (ಅಗಸ್ಟ್ -23)
ಕೆ ಎಚ್ ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜ್ಯೂಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ನೆಡೆಯುತ್ತಿರುವ ಸನ್ಮಾನ್ಯ ಶ್ರೀ ಎಚ್ಕೆ. ಪಾಟೀಲ ಸಚಿವರು ಅಯೋಜಿಸಿರುವ ಪುಟ್ಬಾಲ್ ಪಂದ್ಯಾವಳಿಗಳ ನೇತೃತ್ವವನ್ನು ವಹಿಸಕೊಂಡಿರುವ ಯುವಕರ ಕಣ್ಮಣಿ ಶ್ರೀ ಕೃಷ್ಣಗೌಡ ಪಾಟೀಲ ಹಾಗೂ ಸಚೀನ ಪಾಟೀಲ ಇವರ ಉಪಸ್ಥಿತಿಯಲ್ಲಿ ಗದಗ ಬೆಟಗೇರಿ ಅವಳಿ ನಗರದ ಪುಟ್ಬಾಲ್ ಪ್ರೀಯರಿಗೆ ಹಾಗೂ ಪುಟ್ಬಾಲ್ ಆಟಗಾರರಿಗೆ ಪ್ರೋತ್ಸಾಹಿಸುತ್ತಿದ್ದು ಸಾವಿರಾರು ಜನ ವಿಕ್ಷಣೆ ಮಾಡಿದ್ದು ವಿಷೇಶವಾಗಿತ್ತು.
ನಾಲ್ಕನೇ ಕ್ವಾಟರ್ ಪೈನಲ್ ಪಂದ್ಯ ಕಿಕ್ಕರ್ಸ್ ವಿರುದ್ಧ ಹಸಲರ್ಸ್ ಪಂದ್ಯಗಳ ನಡುವೆ ನೇರ ಹಣಾಹಣಿ ನಡೆದು ಎರಡು ತಂಡಗಳು ಸಮನಾಗಿ 1-1 ಗೋಲುಗಳಿಂದ ಪಂದ್ಯ ಡ್ರಾ ಆಯಿತು. ನಂತರ ಅಂಫೈರ್‌ಗಳ ನಿರ್ಣಯದ ಪ್ರಕಾರ ಎರಡು ತಂಡಗಳ ನಡುವೆ 14 ನಿಮಿಷ ಹೆಚ್ಚು ಸಮಯ ನೀಡಲಾಯಿತು. ಎರಡು ತಂಡಗಳು ನೇರ ಪೈಪೋಟಿ ಮಾಡಿದರು ಸಹ ಯಾವ ತಂಡವು ಗೋಲನ್ನು ಹೊಡೆಯಲಿಲ್ಲ. ನಂತರ ಎರಡು ತಂಡಗಳಿಗೆ ಪೇನಾಲ್ಟಿ ನೀಡಲಾಯಿತು. ಆಗ ಹಸಲರ್ಸ್ ತಂಡ 06 ಗೋಲು ಹೊಡೆದರು. ನಂತರ ಕಿಕ್ಕರ್ಸ್ ತಂಡ 07 ಗೋಲುಗಳನ್ನು ಹೊಡೆದು ಸೆಮೀಫೈನಲ್ ಲಗ್ಗೆ ಇಟ್ಟಿತು. ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಕಿಕ್ಕರ್ಸ್ ತಂಡದ ಹ್ಯಾರಿಸ್ ಧಾರವಾಡ ಇವರು ಬಾಚಿಕೊಂಡರು.
ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜ್ಯೂಕೇಶನ್ ಅಕ್ಯಾಡಮಿಯ ಅಧ್ಯಕ್ಷರಾದ ಹಾಗೂ ಪಂದ್ಯಾವಳಿಗಳ ಆಯೋಜಕರಾದ ಸರ್ಫರಾಜ ಶೇಖ ಇವರು ಎಲ್ಲ ಪುಟ್ಬಾಲ್ ಆಟಗಾರರಿಗೆ ಹಾಗೂ ಪುಟ್ಬಾಲ್ ಪ್ರೀಯರಿಗೆ ಅಭಿನಂದನೆ ಸಲ್ಲಿಸಿದರು.
ವರದಿ : ಮುತ್ತು.