
ಭರವಸೆಯ ಯುವ ನಾಯಕ ಕೃಷ್ಣಗೌಡ ಪಾಟೀಲ್.
ಗದಗ:ಸತ್ಯಮಿಥ್ಯ (ಎ-18).
ಭವಿಷ್ಯದ ಯುವ ನಾಯಕ ಸಾರ್ವಜನಿಕರ ಸೇವೆಯಲ್ಲಿ ನಿರಂತರ ಆಸಕ್ತಿ ಜನಪರ ಕೆಲಸಗಳಲ್ಲಿ ಸೈ ಎನ್ನುವಂತೆ ಜನಪರ ಕಾರ್ಯ ನಮ್ಮ ಹೆಮ್ಮೆಯ ಗದಗಿನ ಯುವರತ್ನ ಕೃಷ್ಣಗೌಡ ಪಾಟೀಲ್ಉತ್ತಮ ರಾಜಕಾರಣಿ ಸಾರ್ವಜನಿಕ ಸೇವೆಯಲ್ಲಿ ನಿರಂತರ ಆಸಕ್ತಿ ತೋರಿಸಬೇಕು. ಸಮಾಜ ಸೇವೆಯೇ ದೇವರ ಸೇವೆ ಎನ್ನುವ ಭಾವನೆ ಅವನ ಮನಸ್ಸಿನಲ್ಲಿರಬೇಕು ಅಂದರೆ ಮಾತ್ರ ಭವಿಷ್ಯದ ರಾಜಕಾರಣಿಗಳಾಗುತ್ತಾರೆ ಅಂತಹ ರಾಜಕಾರಣಿಗಳಲ್ಲಿ ಗದಗ ಜಿಲ್ಲೆಯ ಭವಿಷ್ಯದ ನಾಯಕರಾಗಿ ಸಾರ್ವಜನಿಕರ ಸೇವೆಯಲ್ಲಿ ನಿರಂತರ ಆಸಕ್ತಿ ಜನಪರ ಕೆಲಸಗಳಲ್ಲಿ ಸೈ ಎನ್ನುವಂತೆ ಜನಪರ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ಹೆಮ್ಮೆಯ ಗದಗಿನ ಯುವರತ್ನ ಕೃಷ್ಣಗೌಡ ಪಾಟೀಲ್ ಅವರಿಗೆ ಜನ್ಮದಿನದ ಶುಭಾಶಯಗಳು ಹೇಳುವುದರೊಂದಿಗೆ ವಿಶೇಷ ಲೇಖನವನ್ನು ಬರೆಯುತ್ತಿದ್ದೇವೆ.
ಜನನಾಯಕ ಎಂದರೆ ಪೋಸ್ಟರ್ ಶೂರರೇ ತುಂಬಿರುವ ಈ ಕಾಲದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಯನ್ನು ತನ್ನ ಸಮಸ್ಯೆ ಎಂಬಂತೆ ಬಗೆಹರಿಸುವ ನಾಯಕ ನಮ್ಮ ಹೆಮ್ಮೆಯ ಯುವ ನಾಯಕ ಕೃಷ್ಣಗೌಡ ಪಾಟೀಲ್ ಎನ್ನುತ್ತಾರೆ ಅವರ ಅಭಿಮಾನಿ ಬಳಗ.
“ತಂದೆಗೆ ತಕ್ಕ ಮಗ” ಎನ್ನುವಂತೆ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಸಂಕಲ್ಪವನ್ನು ಹೊಂದಿರುವ ಅವರು ಜನಪರ ಕಾರ್ಯ ಹಾಗೂ ಬಡವರ ದೀನದಲಿತರ ಆಶಾಕಿರಣವಾಗಿ ಕಾರ್ಯವನ್ನು ಮಾಡುತ್ತಾ ಹಲವಾರು ಯೋಜನೆಗಳನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ
ಜಿಲ್ಲೆಯ ಯುವನಾಯಕರಾಗಿ ಗದಗ್ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ ಯುವ ಜನರಿಗೆ ಆದರ್ಶ ವ್ಯಕ್ತಿಯಾಗಿ ಜಿಲ್ಲೆಯಲ್ಲಿ ಅಭಿವೃದ್ಧಿಪರ ಕೆಲಸಗಳಲ್ಲಿ ಯುವಕರನ್ನು ಪಾಲ್ಗೊಳ್ಳುವಂತೆ ಮಾಡುವುದರೊಂದಿಗೆ ತಾವು ಸಹ ಅಭಿವೃದ್ಧಿಪರ ಕೆಲಸಗಳಲ್ಲಿ ಭಾಗವಹಿಸಿ ಕೆಲಸ ಮಾಡುವುದರೊಂದಿಗೆ ಯುವಕರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವವರು ಬಡ ಮಾಧ್ಯಮ ವರ್ಗದ ಜನರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ಪೊರೆ, ಹೃದಯ ಸಂಬಂಧಿತ ಕಾಯಿಲೆಗಳಿಗೆ ಉನ್ನತ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆಯನ್ನು ಕೊಡಿಸುವುದರೊಂದಿಗೆ ಬಡವರ ಹಾಗೂ ದೀನದಲಿತರ ಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿ ಕಾರ್ಯವನ್ನು ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವಂತಹ ಟೊರ್ನಮೆಂಟ್ಗಳನ್ನು ಮಾಡಿ ಅದರಲ್ಲಿ ಯುವ ಆಟಗಾರರನ್ನು ಬೆಳೆಸುವಂತಹ ಕಾರ್ಯವನ್ನು ಹಾಗೂ ಅವರ ಕ್ರೀಡಾ ಪ್ರತಿಭೆಯನ್ನು ರಾಜ್ಯ ಅಂತರಾಜ್ಯದಲ್ಲಿ ಬೆಳೆಸಿಕೊಳ್ಳಲು ಅವಕಾಶವನ್ನು ಕಲ್ಪಿಸಿ ಕೊಡುತ್ತಿರುವ ಅವರಿಗೆ ಕ್ರೀಡಾಪಟುಗಳು ಕ್ರೀಡಾಪಟುಗಳ ಅಶಾಕಿರಣರಾಗಿದ್ದಾರೆ ಎಂದು ಯುವ ಕ್ರೀಡಾಪಟುಗಳು ಹೇಳುತ್ತಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸೇರಿದಂತೆ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಬಡ ಹಾಗೂ ಮಾಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉಚಿತ ನೋಟ್ ಬುಕ್ ವಿತರಣೆ ಬ್ಯಾಗುಗಳ ವಿತರಣೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡುವುದರೊಂದಿಗೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲೆಯಲು ದಾರಿದೀಪವಾಗಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಜಿಲ್ಲೆಯ ಪ್ರತಿಯೊಂದು ಸಮಸ್ಯೆಯ ಕುರಿತಂತೆ ಹಾಗೂ ಜನರ ಕಷ್ಟಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆಯನ್ನು ಮಾಡುವುದರೊಂದಿಗೆ ಜನರ ಕಷ್ಟಗಳನ್ನು ಅರಿಯುವ ನಾಯಕರಾಗಿ ಜಿಲ್ಲೆಯಲ್ಲಿ ಕಾರ್ಯವನ್ನು ಮಾಡುತ್ತಿದ್ದಾರೆ.
ಗದಗ ಜಿಲ್ಲೆಯ ಯುವ ಕಾಂಗ್ರೆಸ್ ಪಕ್ಷದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯುವುದರೊಂದಿಗೆ ಯುವ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಯುವಕರು ಅವರ ಮೇಲಿಟ್ಟಿರುವ ಆಶಾಭಾವನೆಯಿಂದಾಗಿ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬುದು ಯುವ ಕಾಂಗ್ರೆಸ್ ಪಕ್ಷದ ಯುವಕರ ಆಶಯವಾಗಿದೆ ಎನ್ನುತ್ತಾರೆ.
ಹೀಗೆ ಜಿಲ್ಲೆಯ ಅಭಿವೃದ್ಧಿಪರ ಕೆಲಸಗಳಲ್ಲಿ ಆಸಕ್ತಿಯನ್ನು ವಹಿಸುವುದರೊಂದಿಗೆ ಜಿಲ್ಲೆಯ ಭವಿಷ್ಯದ ನಾಯಕರಾಗಿ ಹೊರಹೊಮ್ಮುತ್ತಿರುವ ಅವರಿಗೆ ಮುಂಬರುವ ದಿನಮಾನದಲ್ಲಿ ರಾಜಕೀಯದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಅವರ ಅಭಿಮಾನವು ಆಶಾ ಮನೋಭಾವದಿಂದ ಹೇಳುತ್ತಿದ್ದಾರೆ
“ಗದಗ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ ನಮ್ಮ ಯುವ ನಾಯಕರಾದ ಕೃಷ್ಣ ಗೌಡ ಪಾಟೀಲ್ ಅವರು ಬಡವರ ಹಾಗೂ ದೀನದಲಿತರ ಕಷ್ಟಗಳಿಗೆ ಸ್ಪಂದಿಸುವ ನಾಯಕರಾಗಿ ಕಾರ್ಯಯೋನ್ಮುಖರಾಗಿ ಕೆಲಸವನ್ನು ಮಾಡುತ್ತಿದ್ದು ಮುಂದಿನ ಭವಿಷ್ಯದ ನಾಯಕರಾಗಿ ಎಂದು ಹಾರೈಸುತ್ತಾ ನಮ್ಮ ಎಲ್ಲಾ ಅಭಿಮಾನಿ ಬಳಗದಿಂದ ಅವರಿಗೆ ಜನ್ಮದಿನದ ಶುಭಾಶಯಗಳು ಹೇಳುತ್ತಿದ್ದೇವೆ “
ಯುವ ವಕೀಲರಾದ : ಯಲ್ಲಪ್ಪ ಕುರಹಟ್ಟಿ
ಲೇಖನ: ಮುತ್ತು ಗೋಸಲ