ವಿದ್ಯಾರ್ಥಿಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ ತಡೆದು ಪ್ರತಿಭಟನೆ
ಸಮಸ್ಯೆ ಬಗೆಹರಿಸದಿದ್ದರೆ ಪಾಲಕರೊಂದಿಗೆ ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ ತಡೆದು ಪ್ರತಿಭಟನೆ
ಯಾದಗಿರಿ:ಸತ್ಯಮಿಥ್ಯ (ನ -29).
ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ತಾಂಡ ಕ್ರಾಸ ಬಳಿನಿನ್ನೆ ಕೆಎಸ್ಆರ್ಟಿಸಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸರಿಯಾದ ಸಮಯಕ್ಕೆ ಬಸ್ಸಗಳು ಬರವುದಿಲ್ಲ ಇದರಿಂದ ಶಾಲಾ ಕಾಲೇಜುಗಳ ತರಗತಿಗಳಿಗೆ ಹಾಜರಾಗುವದು ಆಗುತ್ತಿಲ್ಲ. ಇದರಿಂದ ನಮ್ಮ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತಿದೆ. ಬಸ್ಸುಗಳ ಸಂಚಾರದ ವೇಳೆ ಬದಲಾವಣೆಯಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಗಿದೆ ಎಂದರು.
ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಸರಿಯಾದ ಸಮಯಕ್ಕೆ ಬಸುಗಳು ಒದಗಿಸಿ ಕೊಡಿ ಸರ್ ಎಂದು ಪ್ರತಿ ವರ್ಷವೂ ಕೆ ಎಸ್ ಆರ್ ಟಿ ಸಿ ಯವರಿಗೆ ಮನವಿ ಮಾಡುತ್ತಲೇ ಬರುತ್ತಿದ್ದೇವೆ.
ಅದರೆ ಯಾರು ಇದರ ವಿಚಾರವಾಗಿ ಘಂಬಿರ ನಿರ್ಧಾರವೇ ತಗೆದುಕೊಳ್ಳುತ್ತಿಲ್ಲ ಇದು ನಮ್ಮ ಕೊನೆಯ ಮಾನವಿ .
ವಿದ್ಯಾರ್ಥಿಗಳು ಹಾಗೂ ಪಾಲಕರು ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡುವಂತಾಗುತ್ತದೆ. ಎಂದು ಕೆಎಸ್ಆರ್ಟಿಸಿ ಸುರಪುರ್ ಘಟಕದ ಮೇಲಧಿಕಾರಿಗಳಿಗೆ ದೂರವಾಣಿ ಮುಖಾಂತರ ವಿದ್ಯಾರ್ಥಿಗಳು ಅಳಿಲನ್ನು ತೋರಿಕೊಂಡರು ಅದನ್ನು ಆಲಿಸಿದ ಮೇಲಾಧಿಕಾರಿಯು ಖಂಡಿತ ಸರಿಯಾದ ಸಮಯಕ್ಕೆ ತಮಗೆ ಬಸ್ಸು ಒದಗಿಸುವುದಾಗಿ ಭರವಸೆಯನ್ನು ನೀಡಿದರು .
ಇದೇ ಸಂದರ್ಭದಲ್ಲಿ ಕೊಡೆಕಲ್ ಹೋಬಳಿಯ ಉಪ ತಹಶೀಲ್ದಾರ್ರಾದ ಕಲ್ಲಪ್ಪ ಜಂಜಿಗಡ್ಡಿ ನಾರಾಯಣಪುರ ಸಂಚಾರಕ ನಿಯಂತ್ರಕರಾದ ಅಶೋಕ್ , ನಾರಾಯಣಪುರ ಪೊಲೀಸ್ ಠಾಣೆ ಎ.ಎಸ್.ಐ ಸುಭಾಷ್ ಚಂದ್ರ, ರಿಯಾಜ್ ಸಿಬ್ಬಂದಿ ಹಾಗೂ ಕೊಡೆಕಲ್ ಪೊಲೀಸ್ ಠಾಣೆ ಎ.ಎಸ್.ಐ ಸಂಗಪ್ಪ, ಸಿಬ್ಬಂದಿ, ಬಂದೋಬಸ್ತಾ ವಾದಗಿರಿದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ