
ಪದೇ ಪದೇ ದಾಳಿಮಾಡುತ್ತಿರುವ ಚಿರತೆ. ಕ್ರಮಕೈಗೊಳ್ಳದ ಅರಣ್ಯ ಇಲಾಖೆ-ಜೀವಹಾನಿಗೆ ಯಾರು ಹೊಣೆ?.
ಗಜೇಂದ್ರಗಡ:ಸತ್ಯಮಿಥ್ಯ (ಫೆ -15).
ಗಜೇಂದ್ರಗಡ-ಕಾಲಕಾಲೇಶ್ವರ ಗುಡ್ಡದ ನಡುವೆ ಅಂಬರ ಕೊಳ್ಳದ ವ್ಯಾಪ್ತಿಯಲ್ಲಿ ಆಗಾಗ ಪ್ರತ್ಯಕ್ಷವಾಗುವ ಚಿರತೆ ದಾಳಿಗೆ ಜನರು ಭಯಗೊಂಡಿದ್ದಾರೆ.
ರಾತ್ರಿ ದಾಳಿ ಮಾಡಿರುವ ಚಿರತೆ ಒಂದು ಆಡು, ಒಂದು ಆಕಳನ್ನು ತಿಂದು ಹಾಕಿದೆ. ಮಂಜಪ್ಪ ಜೀವಲೆಪ್ಪ ಮಾಳೋತ್ತರ ಮತ್ತು ನರಸಪ್ಪ ಮಂಜಪ್ಪ ಮಾಳೋತ್ತರ ಎನ್ನುವರ ಹೊದಲ್ಲಿ ದಾಳಿ ಮಾಡಿದೆ. ಇವರಿಗೆ ಸೇರಿದ ಗೋವಿನ ಮೇಲೆ ದಾಳಿ ನಡೆಸಿದೆ ಹಾಗೂ ಗೋವು ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು.
ಆತಂಕದಲ್ಲಿ ರೈತರು. ಚಿರತೆ ಪ್ರತ್ಯಕ್ಷಗೊಂಡ ಸಮೀಪದಲ್ಲಿ ಹೊಲದಲ್ಲಿಯೇ ರೈತರು ಮನೆಮಾಡಿಕೊಂಡು ವಾಸ ಮಾಡುತ್ತಾರೆ. ಇದರ ಪಕ್ಕದಲ್ಲಿಯೇ ರಾಣಿ ಚೆನ್ನಮ್ಮ ವಸತಿ ಶಾಲೆ ಇದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ಇರುತ್ತಾರೆ. ಒಂದೇ ಸ್ಥಳದಲ್ಲಿ ಪದೆ, ಪದೆ ದಾಳಿ ಮಾಡುತ್ತಿರುವ ಚಾಲಾಕಿ ಚಿರತೆ ದಾಳಿಗೆ ಆತಂಕದಿಂದ ಜನರು, ವಿದ್ಯಾರ್ಥಿಗಳು ಇದ್ದಾರೆ. ಚಿರತೆ ಒಂದೇ ತಿಂಗಳಲ್ಲಿ ಮೂರುಬಾರಿ ದಾಳಿ ಮಾಡಿದರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಣಾಮಕಾರಿ ಕ್ರಮಕೈಗೊಳ್ಳುತ್ತಿಲ್ಲ. ಆದ್ದರಿಂದ ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯುವ ಬಗ್ಗೆ ಆಲೋಚನೆ ಮಾಡಿ ಕ್ರಮಕೈಗೊಳ್ಳುವಂತಾಗಲಿ ಎಂದು ಸಾರ್ವಜನಿಕರು ಅಗ್ರಹಿಸುತ್ತಿದ್ದಾರೆ.
ವರದಿ : ಚನ್ನು. ಎಸ್.