
ದರೋಡೆಮಾಡಿ ಕೊಲೆ ಮಾಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಗದಗ:ಸತ್ಯಮಿಥ್ಯ (ಮಾ-14).
ನಗರದ ಬೆಟಗೇರಿಯ ಹೆಲ್ತ್ ಕ್ಯಾಂಪ್ ನಗರದಲ್ಲಿ ಒಂಟಿ ಮಹಿಳೆ ಇರುವ ಮನೆಯಲ್ಲಿ ಒಬ್ಬಳೇ ಇರುವುದನ್ನು ಖಾತ್ರಿಪಡಿಸಿ ಆರೋಪಿತರು ಎಲ್ಲರೂ ಕೂಡಿಕೊಂಡು ದರೋಡೆ ಮಾಡಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ : ನಗರದ ಬೆಟಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಾದ ಹೆಲ್ತ್ ಕ್ಯಾಂಪ್ ನಗರದಲ್ಲಿ ಶ್ರೀಮತಿ ಸರೋಜಾ ತುಳಸಿನಾಥ ಕಬಾಡಿ ಅವಳು ಒಬ್ಬಳೇ ಇರುವುದನ್ನು ಖಾತ್ರಿಪಡಿಸಿಕೊಂಡ ಆರೋಪಿತರೆಲ್ಲರೂ ಕೂಡಿಕೊಂಡು ಕೊಲೆ ಮಾಡಿ ದರೋಡೆ ಮಾಡುವ ಉದ್ದೇಶದಿಂದ ಬಾಗಿಲದ ಬಾಜು ಇರುವ ಕಿಟಕಿಯ ಜಾಲರಿಯನ್ನು ಹರಿದು ನೋಡಲು ಯಾರೋ ಕಾಣದೇ ಇರುವುದರಿಂದ 5 ನೇ ಆರೋಪಿ ಬಾಗಿಲ ಬೋಲ್ಟ್ ಅನ್ನು ಕಬ್ಬಿಣದ ರಾಡಿನಿಂದ ಮಿಟಿ ಮುರಿದು ಆರೋಪಿತರು ಮನೆಯೊಳಗೆ ಹೋಗಿ ಒಂಟಿಯಾಗಿದ್ದ ಮಹಿಳೆಯು ಕೀರಚಾಡಿದ್ದರಿಂದಾಗಿ ಆರೋಪಿತರು ಬಾಯಿಯನ್ನು ಗಟ್ಟಿಯಾಗಿ ಹಿಡಿದು ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿ ಕೂಲೆ ಮಾಡಿರುತ್ತಾರೆ ಮನೆಯೊಳಗಿದ್ದ 260 ಗ್ರಾಂ ಅಂದಾಜು ಕಿಮ್ಮತ್ತು 9,50,000 ಮೌಲ್ಯದ ವಸ್ತುವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಾದ 1.ಶಂಕ್ರಪ್ಪ 2.ಚಂದ್ರಪ್ಪ 3.ಮಾರುತಿ 4.ಮನ್ನಪ್ಪ 6.ಉಮೇಶ್ ಆರೋಪಿತರಿಗೆ ಜೀವಾವಧಿ ಶಿಕ್ಷೆ 10,000 ರೂಪಾಯಿ ದಂಡ ವಿಧಿಸಿದೆ 7 ನೇ ಆರೋಪಿಯಾದ ಪ್ರಮೋದ್ ಮೂರು ವರ್ಷ ಶಿಕ್ಷೆ ಹಾಗೂ 3000 ದಂಡ ವಿಧಿಸಿ ತೀರ್ಪು ನೀಡಿದೆ ಹಲ್ಲೆ ಮಾಡಿ ಕೊಲೆ ಮಾಡಿರುವದ್ದು ಸಾಬೀತಾದರಿಂದ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಬಸವರಾಜ ಅವರು ಅಪರಾಧಿಗೆ ಜೀವಾವಧಿ ಕಠಿಣ ಶಿಕ್ಷೆ ದಂಡ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ.
ದೋಷಾರೋಪಣ ಪಟ್ಟಿಯನ್ನು ವೆಂಕಟೇಶ್ ಯಡಹಳ್ಳಿ ಸಿಪಿಐ ಬೆಟಿಗೇರಿ ವೃತ್ತ ಅವರು ಸಲ್ಲಿಸಿದರು.ಸರ್ಕಾರದ ಪರವಾಗಿ ವಕೀಲರಾದ ಸವಿತಾ ಎಂ ಶಿಗ್ಲಿ ವಾದ ಮಂಡಿಸಿದ್ದರು.
ವರದಿ : ಮುತ್ತು ಗೋಸಲ್.