ಜಿಲ್ಲಾ ಸುದ್ದಿ

ಕಾನೂನು ಬಾಹಿರ ಲೆಕ್ಕಪರಿಶೋದನೆ ಸಭೆ. ಲೆಕ್ಕಪರಿಶೋದನಾಧಿಕಾರಿ ಸಿದ್ದನಗೌಡ ವಿರುದ್ದ ಕ್ರಮಕ್ಕೆ ಶಿವು ರಾಠೋಡ್ ಆಗ್ರಹ.

Share News

ಕಾನೂನು ಬಾಹಿರ ಲೆಕ್ಕಪರಿಶೋದನೆ ಸಭೆ. ಲೆಕ್ಕಪರಿಶೋದನಾಧಿಕಾರಿ ಸಿದ್ದನಗೌಡ ವಿರುದ್ದ ಕ್ರಮಕ್ಕೆ ಶಿವು ರಾಠೋಡ್ ಆಗ್ರಹ.

ಯಾದಗಿರಿ: ಸತ್ಯಮಿಥ್ಯ (ಡಿ -09).

ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿಯ ಸಾಮಾಜಿಕ ಪರಿಶೋಧನೆ ವರದಿಯು ಸರ್ಕಾರದ ನಿಯಮಗಳನ್ನು ಪಾಲಿಸದೆ ಇರುವುದನ್ನು ಖಂಡಿಸಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಹುಣಸಗಿ ತಾಲೂಕು ಅಧ್ಯಕ್ಷರಾದ ಶಿವು ರಾಠೋಡರವರಿಂದ ಯಾದಗಿರಿ ಜಿಲ್ಲೆ ಯೋಜನಾ ನಿರ್ದೇಶಕರಾದ ( DRDA) ಜಿಲ್ಲಾ ಪಂಚಾಯತಿ ಯಾದಗಿರಿಯವರಾದ ಚೆನ್ನಬಸವರಾಜ ದೇವರಮನಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇದುವರೆಗೂ ಲೆಕ್ಕಪರಿಶೋಧನೆ ನಡೆದ ಗ್ರಾಮ ಪಂಚಾಯಿತಿಗಳಾದ ನಾರಾಯಣಪುರ, ಬರದೇವನಾಳ, ಬೈಲಕುಂಟಿ, ಕಾಮನಟಗಿ, ಹಾಗೂ ಬೈಚಬಾಳ ಈ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಸರಕಾರ ಹೊರಡಿಸಿರುವ ನಿಯಮಗಳನ್ನು ಒಂದು ಪಾಲಿಸದೆ ತಮ್ಮ ಮನಸೊ ಇಚ್ಛೆ ಬಂದಂತೆ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನ ಗ್ರಾಮ ಸಭೆಗಳನ್ನು ಮಾಡಿರೋದು ಕಾನೂನು ಬಾಹಿರ ಚಟುವಟಿಕೆಯಾಗಿದೆ ಎಂದು ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವು ರಾಠೋಡ ಆರೋಪಿಸಿದ್ದಾರೆ.

ಈ ಮೇಲ್ಕಂಡ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನ ಗ್ರಾಮ ಸಭೆಯ ಸರಕಾರದ ನಿಯಮ ಅನುಸಾರ ಲೈವ್ ಯೂಟ್ಯೂಬ್ ವಿಡಿಯೋ ಹಾಗೂ ಜಿ.ಪಿ.ಎಸ್. ಫೋಟೋ ಸಮೇತ ಮಾಡುವುದು ಒಂದು ನಿಯಮವಾಗಿದೆ. ಆದರೆ ಇಲ್ಲಿರುವ ಅಧಿಕಾರಿಗಳಾದ ಪಿಡಿಓ ಹಾಗೆ ನೋಡಲ್ ಅಧಿಕಾರಿಗಳು ಅದರ ಜೊತೆಯಲ್ಲಿ ಹುಣಸಗಿ ತಾಲೂಕು ಲೆಕ್ಕ ಪರಿಶೋಧನಾ ವರದಿಯ ಅಧಿಕಾರಿಗಳಾದ ಸಿದ್ದನಗೌಡನವರು ಸರಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಖಂಡನೆ ಮತ್ತು ಅಪರಾಧವಾಗಿದೆ.

ಇದುವರೆಗೂ ನಡೆದ ಪ್ರತಿಯೊಂದು ಗ್ರಾಮ ಸಭೆಯಲ್ಲಿ ನಮ್ಮ ವರದಿಗಾರರು ಅವರ ಗಮನಕ್ಕೆ ತಂದರು ಮನ-ಇಚ್ಛೆ ಬಂದಂತೆ ಕೆಲಸ ಮಾಡುತ್ತಾರೆ. ಹಾಗೆ  ಪರಿಶೋಧನಾ ಲೆಕ್ಕಾಧಿಕಾರಿ ಸಿದ್ದನಗೌಡನವರು ರಾಜಕೀಯ ಅನುವಾಯಿಗಳಿಂದ ನಮ್ಮ ವರದಿಗಾರರಿಗೆ ಜಂಗಮ ವಾಹಿನಿಗಳ ಮೂಲಕ ಮಾತನಾಡಿಸುತ್ತಾರೆ. ಆದರೆ ಇದುವರೆಗೂ ನಮ್ಮಗೆ ತಿಳಿದು ಬರುತ್ತಿಲ್ಲ ಇವರು ಸರ್ಕಾರ ಕೆಲಸ ಮಾಡುತ್ತಾರಾ ಇಲ್ಲ ರಾಜಕೀಯವಾಗಿ ಕೆಲಸ ಮಾಡುತ್ತಿದ್ದರೋ ಒಂದು ತಿಳಿಯುತ್ತಿಲ್ಲ ಅದರ ಜೊತೆಯಲ್ಲಿ ಇದುವರೆಗೂ ಒಟ್ಟು ನಾಲ್ಕು ಪಂಚಾಯ್ತಿಗಳ ಲೆಕ್ಕ ಪರಿಶೋಧನೆ ವರದಿಯ ಗ್ರಾಮ ಸಭೆಯನ್ನು ನಮ್ಮ ವರದಿಗಾರರು ಹಾಗೂ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವು ರಾಠೋಡ ಈ ಎಲ್ಲಾ ಗ್ರಾಮಸಭೆಗಳನ್ನು ಕಾನೂನು ನಿಯಮ ಪಾಲಿಸದೆ ಇರುವದರಿಂದ ಕೊರಂಗಳು ಇಲ್ಲಾ ಎಂದು ನೆಪ ಒಡ್ಡಿ ಗ್ರಾಮ ಸಭೆಗಳನ್ನು ಮುಂದುಡಿದ್ದನ್ನು ವಿರೋದಿಸುತ್ತಾರೆ .

ಇಷ್ಟೆಲ್ಲಾ ಆದರೂ ಬರದೇನಾಳ ಗ್ರಾಮ ಸಭೆಯ ನೂಡಲ್ ಅಧಿಕಾರಿಗಳು ( ಸಹಿ ) ವರದಿ ದೃಡೀಕರಿಸದೆ ಇರುವುದು ನಮ್ಮ ವರದಿಗಾರ ಗಮನಕ್ಕೆ ಬಂದಿರುತ್ತದೆ ಆದರೂ ಬರೆದನಾಳ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನಾ ವರದಿಯು ಸಿದ್ದನಗೌಡರವರು ಸರಕಾರಿ ವೆಬ್ ಸೈಟ್ ನಲ್ಲಿ ವರದಿಯನ್ನು ಮಂಡಿಸಿರುತ್ತಾರೆ ಇದನ್ನು ಸಹ ಹುಣಸಗಿ ತಾಲೂಕಿನ ಪಟ್ಟಣ್ಣ ಪಚಾಯತಿಯ ಮೇಲಧಿಕಾರಿಗಳಾದ E .O ಬಸಣ್ಣ ನಾಯಕವರಿಗೂ ನಮ್ಮ ವರದಿಗಾರರು ಗಮನಕ್ಕೆ ತರೋದರ ಜೊತೆಗೆ ಬೈಲಕುಂಟಿ ಹಾಗೂ ಕಾಮನಟಗಿ ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸದೆ ಇರುವುದನ್ನು ಸಾಕ್ಷಿ ಹಾಗೂ ವರದಿ ಪ್ರಕಟಣೆ ಮಾಡಿರುವ ಪ್ರತಿಯನ್ನು ಸಹ ಅವರಿಗೆ ನೀಡಿರುತ್ತಾರೆ.

ಅದನ್ನು ಗಮನಿಸಿ ಅವರು ಸಂಬಂಧಪಟ್ಟ ಪಿ.ಡಿ.ಓ. ಹಾಗೂ ಪರಿಶೋಧನ ಅಧಿಕಾರಿಗಲಾದ ಸಿದ್ದನಗೌಡನವರಿಗೂ ಕಾರಣ ಕೇಳಿ ನೋಟಿಸ್ ಈ 15-11-2024 ದಿನಾಂಕದಂದು ಕೊಟ್ಟಿರುತ್ತಾರೆ ಆ ನೋಟಿಸ್ ನಲ್ಲಿ ಸ್ಪಷ್ಟವಾಗಿ ಮೂರು ದಿನಗಳ ಒಳಗಡೆ ಉತ್ತರ ಕೊಡಿ ಎಂದು ಕೇಳಿರುತ್ತಾರೆ.? ಆದರೆ ಇದುವರೆಗೂ ಅದಕ್ಕೆ ಉತ್ತರ ಕೊಡದೆ ಇರುವುದು ಎಂತಹ ಬೇಜವಾಬ್ದಾರಿ ಎಂದು ಮೇಲಧಿಕಾರಿಗಳಾದ ಯಾದಗಿರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ನೆರೆಗಾ ಸೆಕ್ಷನ್ ಚನ್ನಬಸವರಾಜ್ ದೇವರಮನಿ ಮನವಿಯ ಮೂಲಕ ಗಮನಕ್ಕೆ ತರುತ್ತಾರ.

ಜೊತೆಗೆ ನಮ್ಮ ಹುಣಸಗಿ ಭಾಗದ ಕಾರ್ಮಿಕರಿಗೆ ಬಹಳ ದೊಡ್ಡ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ನ್ಯಾಯ ಒದಗಿಸಿ ಕೊಡಿ ಎಂದು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿದರು . ನ್ಯಾಯವಾದಗಿಸದೆ ಹೋದಲ್ಲಿ ಕಾರ್ಮಿಕರು ಒಗ್ಗೂಡಿ ಹುಣಸಗಿ ತಾಲೂಕಿನ ಒಟ್ಟು 18 ಗ್ರಾಮ ಪಂಚಾಯಿತಿಗಳಿಗೆ ಹಾಗೂ ತಾಲ್ಲೂಕು ಪಚಾಯತಿಗೆ ಮುತ್ತಿಗಿ ಹಾಕಲಾಗುವುದು ಎಂದು ಯಾದಗಿರಿ ಜಿಲ್ಲೆ ಜಿಲ್ಲಾ ಪಂಚಾಯಿತಿಯ ಮೇಲಧಿಕಾರಿಗಳಾದ ಚನ್ನಬಸವರಾಜ್, ದೇವರಮನಿರಿಗೆ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವು ರಾಠೋಡ ಅವರು ಗಮನಕ್ಕೆ ತಂದರು.

2024ಸಾಲಿನಲ್ಲಿ ನಡೆಯುತ್ತಿರುವ ಸಾಮಾಜಿಕ ಪರಿಶೋಧನೆಗೆ ಗ್ರಾಮ ಪಂಚಾಯತಿ ಮತ್ತು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಯವರು ಸಂಪೂರ್ಣ ಕಾಮಗಾರಿ ಕಡತಗಳು ನೀಡುತ್ತಿಲ್ಲ ಮತ್ತು ಸಂಪೂರ್ಣ ಕಾಮಗಾರಿ ವೀಕ್ಷಣೆ ಮಾಡದೇ ಕಾಮಗಾರಿಗಳು ಮುಚ್ಚಿ ಹೋಗಿದ್ದರು,ಅಪೂರ್ಣ ಕಾಮಗಾರಿಗಳಿಗೆ 100% ಹಣ ಪಾವತಿಸಿದ್ದರು ಅದರ ಕುರಿತು ಗ್ರಾಮ ಸಭೆ ಗಳಲ್ಲಿ ವಿಷಯ ಚರ್ಚಿಸದೆ ಕಾಟಾಚಾರಕ್ಕೆ ಗ್ರಾಮ ಸಭೆ ಮಾಡುತಿದ್ದರೆ

ಇದೇ ಸಂದರ್ಭದಲ್ಲಿ ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಶಿವು ರಾಠೋಡ್ ಹಾಗೂ ಅವರ ಸಂಘಟನೆ ಎಲ್ಲಾ ಪದಾಧಿಕಾರಿಗಳು ಇದ್ದರು.

ವರದಿ. ಸಂ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!