
ಗುಂಡಿ ಬಿದ್ದ ರಸ್ತೆಗಳು ಕಣ್ತೆರೆದು ನೋಡದ ಅಧಿಕಾರಿಗಳು – ಜನಸಾಮಾನ್ಯರ ಆಕ್ರೋಶ.
ಜನಪ್ರತಿನಿಧಿಗಳೇ ಸಂಬಂಧಪಟ್ಟ ಅಧಿಕಾರಿಗಳೇ ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸಿ ಸಾರ್ವಜನಿಕರು ಆಕ್ರೋಶ.
ಗದಗ : ಸತ್ಯಮಿಥ್ಯ (ಜು-12)
ಗದಗ ಬೆಟಗೇರಿ ಅವಳಿ ನಗರದಲ್ಲಿ ಮಳೆಗಾಲದಲ್ಲಿ ಅನೇಕ ಅನಾಹುತಗಳಿಗೆ ದಾರಿ ಮಾಡಿಕೊಡುವ ರಸ್ತೆಗಳು ಕಳೆದ ಹಲವಾರು ವರ್ಷಗಳಿಂದ ರಸ್ತೆಯೇ ಆಗದೆ ಆಗಿರುವ ರಸ್ತೆ ದುರಸ್ತಿಯಾಗಿ ಸಾರ್ವಜನಿಕರು ಸಂಚರಿಸಲು ಹರ ಸಾಹಸ ಪಡುವ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ.
ನಗರ ಪಾಲಾ ಬಾದಾಮಿ ರಸ್ತೆಯ ಗೌರಿ ಗುಡಿ ಓಣಿಗೆ ಹೋಗುವ ಒಂದನೇ ಅಡ್ಡರಸ್ತೆ ವಾರ್ಡ್ ನಂಬರ್ 3 ರಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆಯೇ ಆಗದೆ ತೆಗ್ಗು ಗುಂಡಿಗಳಿಂದ ಕೂಡಿಕೊಂಡಿದ್ದು ಮಳೆಗಾಲದಲ್ಲಿ ಆ ತೆಗ್ಗು ಗುಂಡಿಗಳಲ್ಲಿ ನೀರು ನಿಂತು ಅಲ್ಲಿ ಸಂಚರಿಸುವ ಸಾರ್ವಜನಿಕರು ಹರ ಸಾಹಸ ಪಡುತ್ತಿದ್ದಾರೆ.
ಈ ರಸ್ತೆಯಲ್ಲಿ ವೃದ್ಧರು ಮಕ್ಕಳು ಮಹಿಳೆಯರು ಸಂಚರಿಸಲು ತೊಂದರೆಯಾಗುತ್ತಿದ್ದು ವಿವಿಧ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಬಿದ್ದು ಗಾಯಗಳಾಗಿದ್ದು ದ್ವಿಚಕ್ರ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಅನೇಕ ಅನಾಹುತಗಳಿಗೆ ಆಹ್ವಾನ ನೀಡುತ್ತಿರುವ ರಸ್ತೆಯಾಗಿದೆ.
ಆದ್ದರಿಂದ ಅಲ್ಲಿಯ ಸಾರ್ವಜನಿಕರು ಜನಪ್ರತಿನಿಧಿಗಳೇ ಸಂಬಂಧಪಟ್ಟ ಅಧಿಕಾರಿಗಳೇ ತಾವು ದಿನನಿತ್ಯ ಈ ರಸ್ತೆಯಲ್ಲಿಯೇ ಸಂಚರಿಸಿ ಕಚೇರಿ ಹಾಗೂ ಮನೆಗಳಿಗೆ ಹೋಗಬೇಕೆಂದು ಸಾರ್ವಜನಿಕರು ಆಕ್ರೋಷಿತವಾಗಿ ಹೇಳಿದ್ದಾರೆ.
” ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಹಾಗೂ ವೃದ್ಧರಿಗೆ ಗರ್ಭಿಣಿ ಮಹಿಳೆಯರಿಗೆ ಈ ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತಿದ್ದು ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು”
– ಪ್ರಕಾಶ್ ಪವಾರ ಅವರು ಹೇಳಿದ್ದಾರೆ.
” ಪಾಲಾ ಬದಾಮಿ ರಸ್ತೆಯ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿ 50ನೇಯ ಸುವರ್ಣ ಮಹೋತ್ಸವವನ್ನು ಈ ವರ್ಷದ ಗಣೇಶೋತ್ಸವದಲ್ಲಿ ಆಚರಣೆಯನ್ನು ಮಾಡುತ್ತಿದ್ದು ಆಚರಣೆಗೆ ಈ ರಸ್ತೆಯ ವ್ಯವಸ್ಥೆ ಸರಿಯಾಗಿ ಇಲ್ಲದೆ ಇರುವುದರಿಂದ ಸುವರ್ಣ ಗಣೇಶೋತ್ಸವಕ್ಕೆ ಆಗಮಿಸುವ ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಗಣೇಶೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮೂರನೇ ವಾರ್ಡಿನ ನಗರ ಸಭೆಯ ಸದಸ್ಯರು ಹಾಗೂ ಮಾನ್ಯ ಸಚಿವರು ಈ ರಸ್ತೆಯ ಕಡೆಗೆ ಗಮನಹರಿಸಿ ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಬೇಕೆಂದು.”
– ಉದಯ್ ವರ್ಣೇಕರ್.
ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.
ವರದಿ:ಮುತ್ತು ಗೋಸಲ.