
ಮಣ್ಣ ಕಣಕಣಗಳಿಗೆ ಜೀವ ತುಂಬುವ ಪ್ರದೀಪಕುಮಾರ.

ಪರಿಸರ ಸ್ನೇಹಿ ಮಣ್ಣಿನ ಗಣಪತಿಯ ಸಿದ್ಧತೆ ಬಲು ಜೋರು ಪ್ರದೀಪಕುಮಾರ ಹುನಗುಂದ ಕಲಾವಿದನ ಕೈಯಲ್ಲಿ ಅರಳಿ ನಿಂತ ಆಕರ್ಷಕ ಗಣೇಶ ಮೂರ್ತಿಗಳು.
ವರದಿ : ಮುತ್ತು ಗೋಸಲ
ಗದಗ : ಸತ್ಯಮಿಥ್ಯ (ಜು-19).
ಭಾರತೀಯ ಸಾಂಪ್ರದಾಯಕ ಹಬ್ಬಗಳಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಪ್ರಮುಖ ಹಬ್ಬವಾಗಿರುವ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದ್ದು ಹಬ್ಬದ ವೈಶಿಷ್ಟ್ಯತೆಯಲ್ಲಿ ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿದಂತಹ ಗಣೇಶನ ಮೂರ್ತಿಯನ್ನು ಪೂಜೆ ಮಾಡುವುದರೊಂದಿಗೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು ಆಚರಣೆಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯ ಮೂರ್ತಿಗಳ ತಯಾರಿಕೆಯಲ್ಲಿ ಕಲಾವಿದರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಗಣೇಶ ಚತುರ್ಥಿ ಹಬ್ಬದ ಆರು ತಿಂಗಳ ಮುಂಚೆ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿ ತಯಾರಕರು ಮೂರ್ತಿ ತಯಾರಿಕೆಗೆ ಬೇಕಾಗುವಂತಹ ಜೇಡಿ ಮಣ್ಣು ಸೇರಿದಂತೆ ಎಲ್ಲಾ ಸಲಕರಣೆಗಳನ್ನು ಸಿದ್ದಪಡಿಸಿಕೊಂಡು ಗಣೇಶನ ಮೂರ್ತಿಯನ್ನು ವಿವಿಧ ಆಕರ್ಷಕ ಭಂಗಿಯಲ್ಲಿ ಮೂರ್ತಿಗಳನ್ನು ಮಾಡಿ ಹಬ್ಬದ ಸಮೀಪಕ್ಕೆ ಮೂರ್ತಿಗಳಿಗೆ ಬಣ್ಣ ಬಳೆದು ಸಿದ್ಧತೆಯನ್ನು ಬಲು ಜೋರು ಮಾಡಿಕೊಂಡಿದ್ದಾರೆ.
ಪರಿಸರ ಸ್ನೇಹಿ ಮಣ್ಣಿನ ಗಣಪತಿಯ ಮೂರ್ತಿ ತಯಾರಕರಾದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗಂಗಾನಗರ, ಕುಂಟನ ಹೊಸಳ್ಳಿ ರಸ್ತೆ, ಶಿಲ್ಪ ನೆಲೆ(ಜಿ, ಆರ್ಟ್ಸ್)ನ ಹಾನಗಲ್
ಯುವ ಮೂರ್ತಿ ತಯಾರಕರಾದ ಪ್ರದೀಪಕುಮಾರ್ ಹುನುಗುಂದ ಕಲಾವಿದನ ಕೈಯಲ್ಲಿ ನೋಡುಗರ ಕಣ್ಮನ ಸೆಳೆಯುವ ಆಕರ್ಷಣೀಯ ವಿವಿಧ ಭಂಗಿಯ ಗಣೇಶನ ಮೂರ್ತಿಗಳು ಅರಳಿ ನಿಂತಿದೆ.
ಪ್ರತಿವರ್ಷ ಗಣೇಶ ಚತುರ್ಥಿಯ ಆರು ತಿಂಗಳಗಳ ಮುಂಚೆತವೇ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆ ತಾಲೂಕಿನ ಜನರು ಇವರು ತಯಾರಿಸುವ ಗಣೇಶನ ಮೂರ್ತಿಗೆ ಬೇಡಿಕೆ ಇದ್ದು ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡುವ ಹಾಗೂ ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುವವರು ಇವರ ಬಳಿ ಬಂದು ಮುಂಗಡವಾಗಿ ಬರೆಸಿ ಪ್ರತಿಷ್ಠಾಪನೆಯ ದಿನ ತೆಗೆದುಕೊಂಡು ಹೋಗುತ್ತಾರೆ.
ಮೂರ್ತಿ ತಯಾರಕರಾದ ಪ್ರದೀಪಕುಮಾರ ಹುನಗುಂದ ಅವರ ಕುಟುಂಬ ಪರಿವಾರವು ಅವರು ತಯಾರಿಸುವ ಪರಿಸರಸ್ನೇಹಿ ಮಣ್ಣಿನ ಗಣಪತಿಗೆ ಸಹಾಯವನ್ನು ಮಾಡುವುದಲ್ಲದೆ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಪ್ರದೀಪಕುಮಾರ ಹುನಗುಂದ ಕಲೆಯಲ್ಲಿಯೇ ವೃತ್ತಿ ಬದುಕನ್ನು ಕಂಡಕೊಳ್ಳುವ ಪ್ರಯತ್ನ ಮಾಡುತ್ತಿರುವ ಅವರು , ಮಣ್ಣು, ಕಲ್ಲು, ಸಿಮೆಂಟ್ ಹಾಗೂ ಕಲಾಕೃತಿಗಳನ್ನು ತಯಾರಿ ಸಿದ್ದಾರೆ. ಅಲ್ಲದೇ, ಕ್ರೀಡೆ, ಪೇಂಟಿಂಗ್. ರಂಗಭೂಮಿ . ಚಟುವಟಿಕೆಯಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ಮನೆಯಲ್ಲಿಯೇ ಒಂದು ಶೆಡ್ ನಿರ್ಮಿಸಿಕೊಂಡಿದ್ದು, ಸಿಮೆಂಟ್‌ನಿಂದ ಬೆದರುವ ಹೋರಿಗಳು ಹಾಗೂ ಮಣ್ಣು ಮತ್ತು ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗೆ ನಿಷೇಧ ಬಿದ್ದ ಬಳಿಕ, ಇವರು ತಯಾರಿಸುವ ಮಣ್ಣಿನ ಹಾಗೂ ಸಿಮೆಂಟ್ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 15 ವರ್ಷಗಳಿಂದ ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಪ್ರದೀಪಕುಮಾರ ಹುನಗುಂದ ಅವರ ಪ್ರತಿಭೆಗೆ ವಿವಿಧ ಸಂಘ ಸಂಸ್ಥೆಯವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ದೊರೆತಿವೆ
“ಕೇಂದ್ರ ಹಾಗೂ ರಾಜ್ಯ ಸರ್ಕಾರವು ಪಿಓಪಿ ಗಣೇಶನ ಮೂರ್ತಿ ತಯಾರಿಕೆಯನ್ನು ನಿಷೇಧಿಸಲಾಗಿದ್ದರು ರಾಜ್ಯದ ಕೆಲವೆಡೆ ಪಿಓಪಿ ಗಣೇಶನ ಮೂರ್ತಿಗಳನ್ನು ತಯಾರು ಮಾಡುತ್ತಿದ್ದು ಅಂಥವರ ವಿರುದ್ಧ ಕಠಿಣ ಕಾನೂನಿನ ಕ್ರಮವನ್ನು ಕೈಗೊಳ್ಳಬೇಕೆಂದು ಸಂಬಂಧಪಟ್ಟ ಸಚಿವರಿಗೆ ಹೇಳುವುದರ ಮೂಲಕ ರಾಜ್ಯದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯ ಕಲಾವಿದರಿಗೆ ಗುರುತಿನ ಚೀಟಿ ಹಾಗೂ ಹಿರಿಯ ಕಲಾವಿದರಿಗೆ ಸರ್ಕಾರದಿಂದ ಗುರುತಿಸಿ ರಾಷ್ಟ್ರೀಯ ಹಬ್ಬಗಳಲ್ಲಿ ಸನ್ಮಾನಿಸಬೇಕೆಂದು ಹಾಗೂ ಯುವ ಕಲಾವಿದರಿಗೆ ತರಬೇತಿಗಳನ್ನು ಬಡ ಹಾಗೂ ಮಾಧ್ಯಮ ವರ್ಗದ ಕಲಾವಿದರಿಗೆ ಸರಕಾರದಿಂದ ಸಾಲ ಸೌಲಭ್ಯ ಹಾಗೂ ವಿವಿಧ ಯೋಜನೆಗಳನ್ನು ಮಾಡುವುದರ ಮೂಲಕ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ತಯಾರಕರನ್ನು ಪ್ರೋತ್ಸಾಹಿಸುವ ಕೆಲಸವು ಸರ್ಕಾರದಿಂದ ಆಗಬೇಕೆಂದು ಹೇಳಿದರು”
ಗಣೇಶನ ಮೂರ್ತಿ ತಯಾರಕರು : ಪ್ರದೀಪ ಕುಮಾರ್ ಹುನಗುಂದ ಮೊಬೈಲ್ ನಂಬರ್ :7259509104