ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ || 68ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ.
ಪಿಕೆಪಿಎಸ್ ₹1 ಕೋಟಿ 34 ಲಕ್ಷ ಲಾಭ ಗಳಿಸಿದೆ’: ಪರಮಗೌಡ
ಸಾವಳಗಿ:ಸತ್ಯಮಿಥ್ಯ(ಸೆ-22)
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಬ್ಯಾಂಕ್ 2023 – 24ನೇ ಸಾಲಿನಲ್ಲಿ ₹ 134.93 ಲಕ್ಷ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಅದ್ಯಕ್ಷ ಬಸವರಾಜ ಪರಮಗೌಡ ಹೇಳಿದರು.
ನಗರದ ಹರಿ ಮಂದಿರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಸನ 2023-2024 ನೇ ಸಾಲಿನ 68ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸನ್ 2023 24ನೇ ಸಾಲಿನ ಸ್ವಂತ ಬಂಡವಾಳ 1583.38 ಲಕ್ಷ. ಠೇವಣಿ 6666.67 ಲಕ್ಷ ಇದ್ದು. ಸಂಘದ ದುಡಿಯು ಬಂಡವಾಳ 10513.13 ಲಕ್ಷ ಇರುತ್ತದೆ. 4162.46 ಲಕ್ಷ ಸಾಲ ವಿತರಣೆ ಮಾಡಿದೆ ವರ್ಷಾಂತಕ್ಕೆ 6165.08 ಲಕ್ಷ ವಾಗಿರುತ್ತದೆ. 0% ಬಡ್ಡಿ ರಿಯಾಯಿತಿಯಲ್ಲಿ 2362 ಜನ ರೈತರಿಗೆ 1384.19 ಲಕ್ಷ ಸಾಲವನ್ನು ವಿತರಿಸಲಾಗಿದೆ. ಹೈನುಗಾರಿಕೆಗಾಗಿ 3% ರಿಯಾಯಿತಿಯಲ್ಲಿ ಸಾಲ ವಿತರಿಸಲಾಗಿದೆ. ಸಂಘದಿಂದ ಅವಶ್ಯವಿರುವ ಗೊಬ್ಬರ ಬೀಜ ಕೈನಾಶಕ ಔಷಧಿಗಳನ್ನು ಹಾಗೂ ಪಶು ಆಹಾರ ಮಾರಾಟ ಮಾಡಲಾಗುವುದು ಇಲಿ ಕಡಿಮೆ ಬೆಲೆಯಲ್ಲಿ ಸಿಗುವ ವ್ಯವಸ್ಥೆ ಮಾಡಲಾಗಿದೆ.
2023-24ನೇ ಸಾಲಿನಲ್ಲಿ ಸಂಘವು 134.93 ಲಕ್ಷ ಲಾಭಗಳಿಸಿರುತ್ತದೆ ಇದಕ್ಕೆ ಎಲ್ಲಾ ಸದಸ್ಯರು ಸಾಲ ಮರು ಪಾರ್ವತಿ ಮಾಡಿ ಸಹಕರಿಸಬೇಕು, ಶ್ರೀ ಬಸವೇಶ್ವರ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ 2151 ರೈತರನ್ನು ವೈಯಕ್ತಿಕ ಅಪಘಾತ ವಿಮಾ ಯೋಜನೆಯಲ್ಲಿ ಅಳವಡಿಸಲಾಗಿದೆ. ಸಂಘದಿಂದ 10ನೇ ತರಗತಿ 12ನೇ ತರಗತಿ ಅಂತಿಮ ವರ್ಷದಲ್ಲಿ ಹೆಚ್ಚು ಒಂದು ಗಳಿಸಿದ ವಿದ್ಯಾರ್ಥಿಗಳಿಗೆ ಸಂತತಿಯಿಂದ ಬಹುಮಾನ ಹಾಗೂ ಸನ್ಮಾನವನ್ನು ಮಾಡಿದ ಗೌರವಿಸಲಾಯಿತು. ರೈತರ ಹಿತ ದೃಷ್ಟಿಯಿಂದ ಕೋಲ್ಡ್ ಸ್ಟೋರೇಜ್ ಸಂಘವು ಮುಂದಿನ ವರ್ಷ 2024 -25 ನೇ ಸಾಲಿಗೆ 76 ಕೋಟಿ 66 ಲಕ್ಷ ಠೇವು ಸಂಗ್ರಹಣೆಯನ್ನು ಗುರಿ ಹೊಂದಿದ್ದು ಇದಕ್ಕೆ ಎಲ್ಲಾ ಸದಸ್ಯರು ಶೇರುದಾರರು ಸಹಕರಿಸಬೇಕು.
ಸಭೆಯಲ್ಲಿದ್ದ ಸಂಘದ ಮುಖ್ಯ ವ್ಯವಸ್ಥಾಪಕ ಎಮ್ ಎಸ್. ಜಾಧವ್ ಅವರು ಸ್ವಾಗತಿಸಿದರು ಸಭೆಯಲ್ಲಿ ಶೇರುದಾರರು ಸಂಘದ ಬೆಳವಣಿಗೆಗೆ ಸಲಹೆ ಸೂಚನೆ ನೀಡಿದರು, ಸಂಸ್ಥೆಯ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಸತ್ಕರಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಶ್ರೀಮತಿ ಅಂಬವ್ವಾ ಬಾಪಕರ, ಸದಸ್ಯರಾದ ಲವ್ ಮಾಳಿ, ಶ್ರೀಕಾಂತ್ ಗೌಳಿ, ಬಸವರಾಜ್ ಶೇಗುಣಸಿ, ಶ್ರೀಮತಿ ಶೋಭಾ ವಜ್ರವಾಡ, ರಾಜಕುಮಾರ್ ತಳವಾರ್, ಸುರೇಶ್ ಯಕ್ಸಂಬೆ, ಭರತೇಶ್ ಕವಟೇಕರ, ಸಂಗಪ್ಪ ಜಾದವ್ (ಆಲಗೂರ), ಚೇತನ್ ಗೌಳಿ, ಅಶೋಕ್ ಮಾಂಗ, ಹಿರಿಯರಾದ ಮಲ್ಲನಗೌಡ ನ್ಯಾಮಗೌಡ, ಅರ್ಜುನ್ ಬಾಪಕರ, ಬಾಪು ಗೌಡ ಬುಲಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಸಂಘದಲ್ಲಿ ರೈತರು ಹೆಚ್ಚು ಹೆಚ್ಚು ಹಣವನ್ನು ಠೇವಣಿ ಇಡುವುದು ಮಾಡಬೇಕು, ಸಂಘದಿಂದ ಬರುವ ಯೋಜನೆಗಳನ್ನು ಸುತ್ತಮುತ್ತಲಿನ ರೈತರು ಇದರ ಸದುಪಯೋಗ ಪಡೆಯಬೇಕು, ಸಂಘಕ್ಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಹಕರಿಸಬೇಕು”
ಬಸವರಾಜ ಪರಮಗೌಡ- ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಸಾವಳಗಿ
ವರದಿ : ಸಚಿನ್ ಜಾದವ್.