ಪ್ರಧಾನಿ ಮೋದಿ ಮನೆಗೆ ನುಗ್ಗುವ ಮಾತು ಮತ್ತು ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ – ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತುಮಸಾಬ್ ಮುಧೋಳ್.
ಪ್ರಧಾನಿ ಮೋದಿ ಮನೆಗೆ ನುಗ್ಗುವ ಮಾತು ಮತ್ತು ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ – ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತುಮಸಾಬ್ ಮುಧೋಳ್.
ಗಜೇಂದ್ರಗಡ : ಸತ್ಯಮಿಥ್ಯ (ಅಗಸ್ಟ್ -29).
ಗಜೇಂದ್ರಗಡದಲ್ಲಿ ನಿನ್ನೆ ಕಾಂಗ್ರೇಸ್ ಪಕ್ಷದ ವತಿಯಿಂದ ನಡೆದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಜಿ. ಎಸ್. ಪಾಟೀಲ್ ಮತ್ತು ಕಾಂಗ್ರೇಸ್ ಮುಖಂಡರು ವಿವಾದಿತ ಹೇಳಿಕೆ ನೀಡಿದ್ದಾರೆ ಇನ್ನೂ ಮುಂದೆ ಈ ರೀತಿಯ ಹೇಳಿಕೆ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತುಮಸಾಬ್ ಮುಧೋಳ್ (ಸಾಗರ ) ಹೇಳಿದ್ದಾರೆ.
ನಗರದಲ್ಲಿ ನಿನ್ನೆ ನಡೆದ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ಸಭೆಯನ್ನುದ್ದೇಶಿಸಿ ಜಿ. ಎಸ್. ಪಾಟೀಲರು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಮನೆಗೆ ನುಗ್ಗಿದ ಹಾಗೆ ಭಾರತ ಪ್ರಧಾನ ಮಂತ್ರಿ ಮನೆಗೂ ನುಗ್ಗುವ ಕಾಲ ಬರುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಸೌಹಾರ್ದಯುತ ವಾತಾವರಣವನ್ನು ಕಲುಸಿತಗೊಳಿಸುವ ಮಾತನಾಡಿದ್ದಾರೆ.ಕೂಡಲೇ ಜನರಲ್ಲಿ ಕ್ಷಮೆ ಕೇಳಿ ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದರು.
ಇನೊಬ್ಬ ಕಾಂಗ್ರೇಸ್ ಮುಖಂಡ ಕುಮಾರಸ್ವಾಮಿಯವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಮೈಕ್ ಸಿಕ್ಕಿದೆ ಎಂದು ಬಾಯಿಗೆ ಬಂದಹಾಗೆ ಮಾತನಾಡುವ ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ. ಹಿಂದೆ ಕುಮಾರಸ್ವಾಮಿಯವರ ಬಳಿ ನೀವು ಹೋಗಿದ್ದು ಅಲ್ಲಿ ಏನೇನು ನಡೆದಿದೆ ಎಲ್ಲವು ಗೊತ್ತಿದೆ. ಇನ್ನೂ ಮುಂದೆ ಇದೆ ರೀತಿ ಬಾಯಿಗೆ ಬಂದ ಹಾಗೆ ಮಾತನಾಡಿದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಪರೋಕ್ಷವಾಗಿ ಎಚ್. ಎಸ್. ಸೋಂಪುರ ಕುರಿತು ಮಾತನಾಡಿದರು.
ನಿನ್ನೆ ಪ್ರತಿಭಟನೆ ಸಭೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಮನೆಗೆ ನುಗ್ಗಿದ ಹಾಗೆ ಭಾರತದ ಪ್ರಧಾನ ಮಂತ್ರಿ ಕಚೇರಿಗೂ ನುಗ್ಗುವ ದಿನಗಳು ದೂರವಿಲ್ಲ ಎಂಬ ಶಾಸಕ ಜಿ.ಎಸ್. ಪಾಟೀಲರ ಹೇಳಿಕೆಗೆ ರಾಜ್ಯಾಧ್ಯಂತ ತೀವ್ರ ವಿರೋಧವಾಗುತ್ತಿದೆ.
ವರದಿ : ಸುರೇಶ ಬಂಡಾರಿ.