
ಅರ್ಹ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ತಲುಪಿಸಿ – ಸಿ.ಐ.ಟಿ.ಯು.
ಕಟ್ಟಡ ನಿರ್ಮಾಣ ಕಾರ್ಮಿಕರ ರಕ್ಷಣೆಗಾಗಿ 3ನೇ ತಾಲೂಕು ಸಮ್ಮೇಳನ.
ಗಜೇಂದ್ರಗಡ:ಸತ್ಯಮಿಥ್ಯ(agust-17).
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿ.ಐ.ಟಿ.ಯು.) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದ ಶಾದಿ ಮಹಲ್ ಸಭಾಭವನದಲ್ಲಿ ತಾಲ್ಲೂಕಾ ಕಟ್ಟಡ ಕಾರ್ಮಿಕರ ಸಮಾವೇಶ ಜರುಗಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೃಷಿಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸಾಮಾಜಿಕ ಭದ್ರತೆಯಡಿ ಮಂಡಳಿ ರಚನೆಯಾಗಿ ಸೌಲಭ್ಯಗಳು ಅರ್ಹ ಕಟ್ಟಡ ಕಾರ್ಮಿಕರಿಗೆ ಸಿಗುವಂತಾಗಬೇಕು ಎಂದರು.
ಅನಕ್ಷರಸ್ಥ ಕಾರ್ಮಿಕರು ಅರ್ಜಿ ಸಲ್ಲಿಸುವಾಗ ಸಣ್ಣಪುಟ್ಟ ದೋಷಗಳ ನೆಪ ಮಾಡಿ ಅವುಗಳನ್ನು ಸರಿಪಡಿಸುವ ಅವಕಾಶ ನೀಡದೆ ಅರ್ಜಿಗಳನ್ನು ವಜಾ ಮಾಡಲಾಗುತ್ತಿರುವುದನ್ನು ತಕ್ಷಣವೇ ನಿಲ್ಲಿಸಿ ನಿಜವಾದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸೌಲಭ್ಯಗಳನ್ನು ತಲುಪಿಸಬೇಕೆಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಇಂದು ರೈತರಿಗೆ ಭೂಮಿ, ವಸತಿ, ಬೆಂಬಲ ಬೆಲೆಗಾಗಿ ಮತ್ತು ಕಾರ್ಮಿಕರ ಕೆಲಸದ ಭದ್ರತೆಗೆ ಬಲಿಷ್ಠ ಚಳುವಳಿ ಕಟ್ಟಬೇಕೆಂದು ಕರೆ ನೀಡಿದರು.ಕಾರ್ಮಿಕರು ಸಂಘಟನೆಗೆ ಸೇರಿ ತಿಳುವಳಿಕೆ ಪಡೆದು ಹೆಚ್ಚಿನ ಸೌಲಭ್ಯಗಳನ್ನು ಪಡೆಯಬೇಕೆಂದರು.
ರೈತ-ಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರ ಆದ್ಯತೆಯಲ್ಲಿ ಪರಿಹರಿಸಬೇಕು ಇದರಿಂದ ದೇಶ ಅಬಿವೃದ್ಧಿಯಾಗುತ್ತದೆ ಎಂದರು.
ಸಿ.ಐ.ಟಿ.ಯು ತಾಲ್ಲೂಕು ಸಂಚಾಲಕ ಮೈಬು ಹವಾಲ್ದಾರ್ ಮಾತನಾಡಿ, ಜಾತಿ, ಧರ್ಮದ ಭಾವನಾತ್ಮಕ ವಿಷಯಗಳಿಗಿಂತ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಜಾಪ್ರಭುತ್ವದಲ್ಲಿ ಕಾನೂನಾತ್ಮಕ ಹೋರಾಟ ನಡೆಸಬೇಕೆಂದರು.
ಕಟ್ಟಡ ಕಾರ್ಮಿಕರ ತಾಲೂಕಿನ ಅಧ್ಯಕ್ಷರಾದ ಅಂದಪ್ಪ ಕುರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಮುಖಂಡರಾದ ಹನುಮಂತಪ್ಪ ಮಾದರ ಮಾತನಾಡಿದರು.
21 ಜನರ ನೂತನ ತಾಲೂಕು ಸಮಿತಿ ರಚನೆಗೊಂಡಿತು. ಅಧ್ಯಕ್ಷರಾಗಿ ಅಂದಪ್ಪ ಕುರಿ, ಕಾರ್ಯದರ್ಶಿಯಾಗಿ ಪೀರು ರಾಠೋಡ, ಖಜಾಂಚಿಯಾಗಿ ಮೆಹಬೂಬ್ ಹವಾಲ್ದಾರ್ ಮರು ಆಯ್ಕೆಗೊಂಡರು. ಇನ್ನುಳಿದಂತೆ 18 ಜನ ಸದಸ್ಯರು ತಾಲೂಕು ಸಮಿತಿಗೆ ಸರ್ವಾನುಮತದಿಂದ ಆಯ್ಕೆಗೊಂಡರು.
ವೇದಿಕೆಯಲ್ಲಿ ತಾಲ್ಲೂಕು ಮುಖಂಡರಾದ ಅಂದಪ್ಪ ರಾಠೋಡ, ರೇವಣಪ್ಪ ರಾಠೋಡ, ಕನಕರಾಯ ಮಾದರ, ಶಂಕ್ರಪ್ಪ ಹೊಸಮನಿ, ಹನುಮಂತಪ್ಪ ಮಾದರ, ರುದ್ರಪ್ಪ ರಾಠೋಡ, ಶರಣಪ್ಪ ಬಂಡಿವಡ್ಡರ, ಈರಪ್ಪ ಬಂಡಿವಡ್ಡರ, ಸಂತೋಷ ಕುಮಾರ್, ಎಸ್ ಎಫ್ ಐ ತಾಲೂಕು ಅಧ್ಯಕ್ಷರಾದ ಅನಿಲ ರಾಠೋಡ ಹಾಜರಿದ್ದರು.
ವರದಿ : ಸುರೇಶ ಬಂಡಾರಿ.