
ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮತ್ತೊಮ್ಮೆ ರಾಜು ಕುರಡಗಿ ಆಯ್ಕೆ
ಗದಗ:ಸತ್ಯಮಿಥ್ಯ (ಮಾ-13).
ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡುವೆ ನಿಕಟಪೂರ್ವ ಅಧ್ಯಕ್ಷರಾಗಿದ್ದ ರಾಜು ಕುರಡಗಿಯವರನ್ನೇ ಮರು ಆಯ್ಕೆ ಮಾಡುವ ಮೂಲಕ ಕಮಲ ಪಾರ್ಟಿಯಲ್ಲಿ ಹೊಸ ದಾಖಲೆ ಬರೆದಂತಾಗಿದೆ.
ಹಲವು ಪ್ರಭಾವಿ ಆಕಾಂಕ್ಷಿಗಳ ಪೈಪೋಟಿ ನಡೆಸಿದಾಗಲು ಸಹ ಅಂತಿಮವಾಗಿ ರಾಜ್ಯಬಿಜೆಪಿ ಘಟಕದಿಂದ ರಾಜು ಕುರಡಗಿ ಅವರನ್ನ ಆಯ್ಕೆ ಮಾಡಲಾಗಿದೆ. ರಾಜು ಕುರಡಗಿ, ಮಾಜಿ ಸಚಿವ ಕಳಕಪ್ಪ ಬಂಡಿ ಹಾಗೂ ನಾಗರಾಜ ಕುಲಕರ್ಣಿ ಸೇರಿ ಮೂರು ಆಕಾಂಕ್ಷಿಗಳ ಪಟ್ಟಿ ಜಿಲ್ಲಾ ಘಟಕಕ್ಕೆ ರವಾನೆ ಆಗಿತ್ತು.
ಈ ಮೂರು ಆಕಾಂಕ್ಷಿಗಳಲ್ಲಿ ಯಾರ ಹೆಸರು ಘೋಷಣೆಯಾಗುತ್ತೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.
ಈ ಮಧ್ಯೆ ಕಳೆದ ಒಂದು ವರ್ಷದಿಂದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ರಾಜು ಕುರುಡುಗಿ ಇದೀಗ ಪೂರ್ಣಾವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ನೂತನ ಅಧ್ಯಕ್ಷರ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ, ಪಕ್ಷದ ಚುನಾವಣಾ ಪ್ರಮುಖ ಶಶಿಮೌಳಿ ಕುಲಕರ್ಣಿ ನೂತನ ಅಧ್ಯಕ್ಷರ ಹೆಸರನ್ನ ಘೋಷಿಸಿದರು.
ಈ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ, ಮುಖಂಡರಾದ ಎಂ.ಎಸ್.ಕರಿಗೌಡ್ರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಮುತ್ತು ಗೋಸಲ್.