
ಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗಿದೆ: ಶ್ರೀಮತಿ ಕೀರ್ತಿ ಕೊಟಗಿ.
ಗಜೇಂದ್ರಗಡ-ಸತ್ಯಮಿಥ್ಯ(ಎ-16).
ಪ್ರಶಸ್ತಿ ಸನ್ಮಾನಗಳು ಸನ್ಮಾನಿತರ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ ಎಂದು ವಿಜಯಕರ್ನಾಟಕ ಪತ್ರಿಕೆಯ ಶ್ರೇಷ್ಠ ಸಾಧಕರ ಪ್ರಶಸ್ತಿ ಪಡೆದಿರುವ ಕೀರ್ತಿ ಬಸವರಾಜ ಕೊಟಗಿ ನುಡಿದರು.
ಅವರು ನಗರದ ಮೈಸೂರು ಮಠದಲ್ಲಿ ರವಿವಾರ ಎಸ್ ಎಂ ಭೂಮರಡ್ಡಿ ಶಾಲೆಯ 88-89 ಸಾಲಿನ ಎಸ್ ಎಸ್ ಎಲ್ ಸಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ. ನಾನು ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ನನಗೆ ಪ್ರಶಸ್ತಿ ನೀಡಿದ್ದು ನನ್ನಲ್ಲಿರುವ ಸಮಾಜ ಸೇವಾ ಮನೋಭಾವನೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ.ಬಸವಮಾರ್ಗದೊಂದಿಗೆ ಅನೇಕ ವಚನಕಾರರ ನುಡಿಗಳು ನನ್ನನ್ನು ಸಮಾಜ ಸೇವಾ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗಿವೆ ಅದರೊಂದಿಗೆ ನನ್ನ ಕುಟುಂಬದವರು ನಿರಂತರ ಸಹಕಾರ ಮತ್ತು ಮಾರ್ಗದರ್ಶನ ನನ್ನನ್ನು ಈ ಹಂತ ತಲುಪಲು ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಸಾಹಿತಿ ಕಸ್ತೂರೆಮ್ಮ ಹಿರೇಮಠ. ಸಮಾಜಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಅದರಂತೆ ಸೇವಾ ಮನೋಭಾವ ಎಲ್ಲರಲ್ಲೂ ಕಾಣುವದು ವಿರಳ.ಬಸವರಾಜ ಕೊಟಗಿ ದಂಪತಿಗಳು ಸಮಾಜ ಸೇವಾ ಮನೋಭಾವನೆ ಹೊಂದಿದವರು. ಸತಿಪತಿಗಳಿಬ್ಬರು ಶರಣ ಪರಂಪರೆಯ ಭಾಗವಾಗಿ ನಗರದಲ್ಲಿ ಸೇವೆಗೈಯುತ್ತಿದ್ದಾರೆ. ಕೀರ್ತಿ ಕೊಟಗಿಯವರು ಸಾಧಕರ ಪ್ರಶಸ್ತಿ ಪಡೆಯುವ ಮೂಲಕ ನಾಡಿನ ಮಹಿಳೆಯರ ಸಬಲೀಕರಣದ ಗುರುತಾಗಿ ಉಳಿದಿದ್ದಾರೆ. ನನ್ನೂರಿನ ಮಹಿಳೆ ರಾಜ್ಯಮಟ್ಟದ ಪ್ರಶಸ್ತಿ ಪಡೆಯುವ ಮೂಲಕ ಗಜೇಂದ್ರಗಡಕ್ಕೆ ಮುಕುಟಪ್ರಾಯವಾಗಿದ್ದರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಜ್ಯೋತಿ ಪಾಟೀಲ. ಮಹಿಳೆ ಹಿಂದಿಗಿಂತಲೂ ಇಂದು ಪ್ರಬಲ ವಾಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತ.ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನನ್ನಲ್ಲಿದೆ ಎನ್ನುವದನ್ನು ಮಹಿಳೆಯರು ಸಾಧನೆ ರೂಪದಲ್ಲಿ ಸಾಬೀತು ಪಡಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆರ್. ಎಂ. ಪಟ್ಟೇದ, ಬಿ. ಬಿ. ಪೊಲೀಸ್ ಪಾಟೀಲ್, ಬಿ. ಸಿ. ಅಂಗಡಿ, ಬಸವರಾಜ ಕೊಟಗಿ,ಗೀತಾ ವಾಲಿ,ರೇಣುಕಾ ರಾಯಬಾಗಿ,ಯುಸೂಫ ಅತ್ತಾರ, ಹನಮಂತ ಕೆಂಚಿ,ಮಂಜುನಾಥ ಚಳಮರದ, ಸಂಗಪ್ಪ ನಡಕಟ್ಟಿನ,ಮುತ್ತಣ್ಣ ಗೌಡರ,ಪಿ. ಎನ್. ರಾಯಬಾಗಿ, ಬಸವರಾಜ ಅಡವಿ, ಹನಮಂತ ಗಾರಗಿ ಮುಂತಾದವರು ಭಾಗವಹಿಸಿದ್ದರು.
ಸ್ವಾಗತ: ಬಿ. ಎಸ್. ಅಣ್ಣಿಗೇರಿ,ನಿರೂಪಣೆ: ಎ ಜಿ ಬೂದಿಹಾಳ,ಪ್ರಾರ್ಥನೆ: ಡಾ.ವ್ಹಿ ಸಿ ಮಾಳಗಿ ಅತಿಥಿ, ಪರಿಚಯ:ಎನ್. ಎಸ್. ಸವಣೂರ,ಸನ್ಮಾನಿತ ಪರಿಚಯ:ಓ. ಎನ್. ಕಾಟ್ವಾ,ವಂದಿಸಿದವರು:ಕೇಶವ ಅರವಾ.
ವರದಿ:ಚನ್ನು. ಎಸ್.