
ನಿವೃತ್ತ ಶಿಕ್ಷಕಿ ಕಸ್ತೂರಮ್ಮ ಹಿರೇಮಠ್ ರವರಿಗೆ “ಶಿವಶರಣೆ ಮುಕ್ತಾಯಕ್ಕ” ಪ್ರಶಸ್ತಿ.
ಗದಗ : ಸತ್ಯಮಿಥ್ಯ (ಆ-22).
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಕೊಡಮಾಡಲ್ಪಡುವ “ಶಿವಶರಣೆ ಮುಕ್ತಾಯಕ್ಕ” ಪ್ರಶಸ್ತಿಯನ್ನು ಗಜೇಂದ್ರಗಡದ ನಿವೃತ್ತ ಶಿಕ್ಷಕಿ,ಸಾಹಿತಿ ಮತ್ತು ಭಾರತ ಸ್ವತಂತ್ರ ಸೇನಾನಿ ಬಸವಕುಮಾರ ಮುಳಗುಂದಮಠರವರ ಸುಪುತ್ರಿಯಾದ ಕಸ್ತೂರೆಮ್ಮ ಹಿರೇಮಠರವರಿಗೆ ಲಭಿಸಿದೆ.

ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ 24ರ ರವಿವಾರ ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರಗುವ ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನದಲ್ಲಿ ವಿತರಿಸಲಾಗುವುದು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ನಂತರ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಉದ್ಘಾಟನಾ ಸಮಾರಂಭ,ಪ್ರಶಸ್ತಿ ಪುರಸ್ಕಾರ ಹಲವು ಚಿಂತನ ಘೋಷ್ಠಿಗಳನ್ನು ಒಳಗೊಂಡು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮತ್ತು ನಾಡಿನ ವಿವಿಧ ಭಾಗಗಳಿಂದ ಆಸಕ್ತ ಶರಣ ಶರಣೀಯರು ಆಗಮಿಸಲಿದ್ದಾರೆ.
ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ. ತಂದೆಯವರ ಸ್ವಾತಂತ್ರ್ಯದ ಕಲ್ಪನೆಗಳು ನನಗೆ ಸಾಹಿತಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಸೇವೆ ಸಲ್ಲಿಸಲು ಅಣಿಗೊಳಿಸಿದವು ಎಂದು ಪ್ರಶಸ್ತಿ ಪುರಸ್ಕೃತರಾದ ಕಸ್ತೂರೆಮ್ಮ ಹಿರೇಮಠ ಪತ್ರಿಕಾ ಪ್ರತಿನಿಧಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ವರದಿ : ಸುರೇಶ ಬಂಡಾರಿ.