“ಸಂಘಟನಾ ಪರ್ವ” ಮಾಜಿ ಸಚಿವ ಕಳಕಪ್ಪ ಬಂಡಿಯವರಿಂದ ಚಾಲನೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪ್ರಿಯ ಆಡಳಿತ ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರದ ದುರಾಡಳಿತ ಮತ್ತು ಹಗರಣಗಳನ್ನು ಜನರಿಗೆ ತಿಳಿಸುವ ಗುರಿ.
“ಸಂಘಟನಾ ಪರ್ವ” ಮಾಜಿ ಸಚಿವ ಕಳಕಪ್ಪ ಬಂಡಿಯವರಿಂದ ಚಾಲನೆ.
ಗಜೇಂದ್ರಗಡ : ಸತ್ಯಮಿಥ್ಯ (ನ -16).
ಯುವ ಮತದಾರರ ಸದಸ್ಯತ್ವ ಮತ್ತು ಹಳೆಯ ಮತದಾರರ ಸದಸ್ಯತ್ವ ನವೀಕರಣ ಮಾಡುವ ಮೂಲಕ ಪಕ್ಷದ ಸಂಘಟನೆ ಬಲಗೊಳಿಸಲು “ಸಂಘಟನಾ ಪರ್ವ” ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ನುಡಿದರು.
ಅವರು ನಿನ್ನೆ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ರೋಣ ಮಂಡಲದವತಿಯಿಂದ ನಡೆದ ಸಂಘಟನಾ ಪರ್ವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸದಸ್ಯತ್ವ ಅಭಿಯಾನದಲ್ಲಿ ನರೇಂದ್ರ ಮೋದಿಯವರ ಜನಪ್ರಿಯ ಆಡಳಿತದ ಅಂಶಗಳನ್ನು ಜನರಿಗೆ ಮನವರಿಕೆ ಮಾಡಬೇಕು ಮತ್ತು ಸಿದ್ದರಾಮಯ್ಯನವರ ದುರಾಡಳಿತ ಮುಡಾ, ವಾಲ್ಮೀಕಿ, ವಖ್ಫ್ ಹಗರಣಗಳನ್ನು ಯುವ ಮತದಾರರಿಗೆ ತಿಳಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಅಲ್ಲದೇ ಡಿಸೇಂಬರ್ 23 ಕ್ಕೆ ಬರುವ ರಾಜ್ಯದ ಉಪಚುನಾವಣೆ ಫಲಿತಾಂಶ ಎನ್ ಡಿ ಎ ಅಭ್ಯರ್ಥಿಗಳ ಪರ ಬರಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಮುತ್ತಣ್ಣ ಕಡಗದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಲಿಂಗರಾಜ್ ಪಾಟೀಲ್, ಶ್ರೀ ಆರ್ ಕೆ ಚೌವ್ಹಾಣ, ರಾಜ್ಯ ಎಸ್ ಟಿ ಮೋರ್ಚ ಸದಸ್ಯರಾದ ಎಚ್ ಕೆ ಹಟ್ಟಿಮನಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉಮೇಶ್ ಮಲ್ಲಾಪುರ್, ಪಕ್ಷದ ಮುಖಂಡರಾದ ಅಶೋಕ್ ನವಲಗುಂದ, ಗಜೇಂದ್ರಗಡ ನಗರ ಘಟಕ ಅಧ್ಯಕ್ಷರಾದ ಶ್ರೀ ರಾಜೇಂದ್ರ ಗೋರ್ಪಡೆ, ಸದಸ್ಯತ್ವ ಅಭಿಯಾನದ ಪ್ರಮುಖರಾದ ಬಾಲಾಜಿ ರಾವ್ ಭೋಸ್ಲೆ, ಶರಣಪ್ಪ ಪ್ಯಾಟಿ ಮೋರ್ಚಾದ ಪದಾಧಿಕಾರಿಗಳು ಶಕ್ತಿ ಕೇಂದ್ರದ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.