
ಚಿರತೆ ಹಾವಳಿಗೆ ಬೆಚ್ಚಿದ ಸಾವಳಗಿ ಜನತೆ
ಚಿರತೆ ಹಾಗೂ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದ ಸ್ಥಳಕ್ಕೆ ತಹಶೀಲ್ದಾರ್ ಭೇಟಿ.
ಸಾವಳಗಿ:ಸತ್ಯಮಿಥ್ಯ (agust-17)
ಮಾಳಿ ಅವರ ತೋಟದಲ್ಲಿ ಚಿರತೆಯ ಹೆಜ್ಜೆ ಹಾಗೂ ಚಿರತೆ ಕಾಣಿಸಿಕೊಂಡಿದೆ ಇದರಿಂದ ಜನರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ತಾಲೂಕಾಡಳಿತ ಹಾಗೂ ಅರಣ್ಯ ಇಲಾಖೆ ಅವರು ನಿಮ್ಮ ಜೊತೆ ಇದ್ದೇವೆ ಎಂದು ತಹಶೀಲ್ದಾರ್ ಅನಿಲ ಬಡಿಗೇರ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮಕ್ಕೆ ರವಿವಾರ ಭೇಟಿ ನೀಡಿದ ಜಮಖಂಡಿ ತಹಶಿಲ್ದಾರ ಅನೀಲ ಬಡಿಗೇರ ಅವರು ಜನರಲ್ಲಿ ಜಾಗೃತಿ ಮೂಡಿಸುವುದು ಧೈರ್ಯ ಹೇಳುವುದು ಮಾಡಿದರು.
ಜಂಬಗಿ ಗ್ರಾಮದಲ್ಲಿ ಚಿರತೆಯು ಒಂದು ಮೇಕೆ ಮೇಲೆ ದಾಳಿ ಮಾಡಿ ಕಣ್ಣು ತಪ್ಪಿಸಿಕೊಂಡು ಹೋಗಿದೆ. ಇದರ ಬೆನ್ನಲ್ಲೇ ಸಾವಳಗಿಯಲ್ಲಿ ಪ್ರತ್ಯೇಕ್ಷಗೊಂಡಿದೆ. ತುಬಚಿ ರಸ್ತೆಯ ಮಾಳಿ ವಸ್ತಿ ತೋಟದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ನಡೆದಿದೆ. ಹೊಲದಲ್ಲಿ ಕಟ್ಟಿದ್ದ ಆಕಳ ಮೇಲೆ ದಾಳಿ ಮಾಡಿ, ಮುಖಕ್ಕೆ ಪರಚಿ ಗಾಯಗೊಳಿಸಿದೆ ದನಗಳ ತೀವ್ರ ಕಿರುಚಿವ ಶಬ್ದ ಕೇಳಿ ಹೊರಗಡೆ ಬಂದು ಕೂಗಾಟಕ್ಕೆ ಭಯಗೊಂಡು ಚಿರತೆ ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರೈತರು ಚಿರತೆ ಭೀತಿಯಿಂದಾಗಿ ಹೊಲದಲ್ಲಿ ಕೆಲಸಕ್ಕೆ ಹೋಗಲು ಭಯವಾಗುತ್ತಿದೆ, ಹಾಗೂ ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲಾ, ಅರಣ್ಯ ಇಲಾಖೆಯವರು ಚಿರತೆಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಬೋನ ಅಳವಡಿಕೆ: ಚಿರತೆ ಹೆಜ್ಜೆ ಗುರುತು, ಚಿರತೆಯು ಬಂದಿದೆ ಎಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಮಾಳಿ ಅವರ ತೋಟದಲ್ಲಿ ಚಿರತೆ ಸೆರೆಗಾಗಿ ಬೋನ ಅಳವಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಪ್ರಕಾಶ್ ಪವಾರ್, ಉಮೇಶ್ ಜಾಧವ್, ಅನೀಲ ಬಡಿಗೇರ, ಉಮೇಶ್ ಮೋಹಿತೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸಚಿನ್ ಜಾದವ್.