ಜಿಲ್ಲಾ ಸುದ್ದಿ

ಸಮರ್ಪಕ ಬಸ್ ಸಂಚಾರಕ್ಕೆ ಎಸ್ ಎಫ್ ಐ ಒತ್ತಾಯ – ಸಮಸ್ಯೆ ಸರಿಪಡಿಸದೆ ಇದ್ದರೆ ಉಗ್ರಹೋರಾಟದ ಎಚ್ಚರಿಕೆ.

Share News

ಸಮರ್ಪಕ ಬಸ್ ಸಂಚಾರಕ್ಕೆ ಎಸ್ ಎಫ್ ಐ ಒತ್ತಾಯ – ಸಮಸ್ಯೆ ಸರಿಪಡಿಸದೆ ಇದ್ದರೆ ಉಗ್ರಹೋರಾಟದ ಎಚ್ಚರಿಕೆ.

ಸಮರ್ಪಕವಾಗಿ ಸಮಯಕ್ಕೆ ಸರಿಯಾಗಿ ನೆಲ್ಲೂರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಎಸ್ ಎಫ್ ಐ ಸಂಘಟನೆಯಿಂದ ಮನವಿ.

ಗಜೇಂದ್ರಗಡ: ಸತ್ಯಮಿಥ್ಯ (ಜು-26).

ಇಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಗಜೇಂದ್ರಗಡ ತಾಲೂಕ ಸಮಿತಿ ವತಿಯಿಂದ ಗಜೇಂದ್ರಗಡ ತಾಲೂಕಿನ ಕಟ್ಪ ಕಡೆಯ ಗ್ರಾಮವಾದ ನೆಲ್ಲೂರು ಗ್ರಾಮಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಬಸ್ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ರಾಜ್ಯ ಸರ್ಕಾರ ಶಕ್ತಿ ಯೋಜನೆ ಮಾಡಿ ಎಲ್ಲರಿಗೂ ಉಚಿತ ಬಸ್ ವ್ಯವಸ್ಥೆ ಘೋಷಣೆ ಮಾಡಿದೆ ಆದರೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲ ಹೊಸ ಬಸ್ಸಗಳು ಖರೀದಿಯಾಗಿಲ್ಲ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಒದಗಿಸದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಡೆಗಣಿಸುತ್ತಿದ್ದೆ. ಊರಿನಿಂದ ಸುಮಾರು 100 ಜನ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಗಜೇಂದ್ರಗಡ ನಗರಕ್ಕೆ ದಿನ ನಿತ್ಯ ಬರುತ್ತಿದ್ದಾರೆ ಆದರೆ ಅವರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಸಮಯಕ್ಕೆ ಸರಿಯಾಗಿ ತರಗತಿ ಹಾಜರಾಗಲು ಆಗುತ್ತಿಲ್ಲ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶೈಕ್ಷಣಿಕ ವರ್ಷ ಆರಂಭವಾಗಿ ಸುಮಾರು ಎರಡೂವರೆ ತಿಂಗಳು ಕಳೆದರೂ ಕೂಡ ಸರ್ಕಾರಿ ಶಾಲಾ ,ಕಾಲೇಜುಗಳಲ್ಲಿ ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಕಲ್ಪಿಸಿಲ್ಲ, ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಹಾಸ್ಟೆಲ್ ಸಿಗಬೇಕು ಅಂತ ಎಸ್ ಎಫ್ ಐ ಸಂಘಟನೆ ಒತ್ತಾಯಿಸುತ್ತದೆ. ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಶಾಸಕರು ಈ ಕೂಡಲೇ ಗಜೇಂದ್ರಗಡ ತಾಲೂಕಿನ ನೆಲ್ಲೂರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಮತ್ತು ಬಸ್ ಸಂಪರ್ಕ ವಿಳಂಬವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಲೇಜು ವಿದ್ಯಾರ್ಥಿನಿಯಾದ ಅನುಷಾ ಹೀರೇಮಠ ಮಾತನಾಡಿ ನಮ್ಮ ಊರಿಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ನಾವು ದಿನನಿತ್ಯ ಸುಮಾರು 4ಕೀ.ಮಿ ನಡೆದುಕೊಂಡು ಹೋಗಿ ಕಾಲೇಜುಗಳಿಗೆ ಹಾಜರಾಗಬೇಕು, ಮಳೆಗಾಲ ಆರಂಭವಾಗಿದೆ ಮುಶೀಗೇರಿ ಕ್ರಾಸ್ ನಿಂದ ನೆಲ್ಲೂರ ವರೆಗೆ ಮಳೆಯಲ್ಲಿ ನೆನೆದು ಹೋಗಬೇಕು ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಬಸ್ ವ್ಯವಸ್ಥೆ ಕಲ್ಪಿಸಬೇಕು ಮನವಿ ಮಾಡಿದರು.

ತಾಲೂಕ ಅಧ್ಯಕ್ಷರಾದ ಅನಿಲ್ ಆರ್. ಮಾತನಾಡಿ ಗಜೇಂದ್ರಗಡ ತಾಲೂಕಿನಲ್ಲಿ ಬರುವ ಸಾಕಷ್ಟು ಹಳ್ಳಿಗಳಿಗೆ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಶಾಸಕರು ಹಾಗೂ ಅಧಿಕಾರಿಗಳು ಸಮಸ್ಯೆ ಸರಿಪಡಿಸಲು ಮುಂದಾಗಬೇಕು.

ಹೋರಾಟದ ಸ್ಥಳಕ್ಕೆ ಶಾಖಾ ವ್ಯವಸ್ಥಾಪಕರು ಬಂದು ಮನವಿ ಸ್ವೀಕರಿಸಿದರು ಬಸ್ ಸಮಸ್ಯೆಯನ್ನು ಒಂದು ವಾರದ ಒಳಗೆ ಸರಿಪಡಿಸುತ್ತೆವೆ ಎಂದು ಹೇಳಿ ಮನವಿ ಪತ್ರ ಸ್ವಿಕರಿಸಿದರು ಈ ಸಂದರ್ಭದಲ್ಲಿ ಚಂದ್ರು ರಾಠೋಡ, ಅನಿಲ್ ರಾಠೋಡ, ಬಸವರಾಜ, ಅನುಷಾ ಹೀರೆಮಠ, ಜ್ಯೋತಿ ಬೇಣಹಾಳ, ಸವಿತಾ ಬೇವಿನಗಿಡದ, ಲಕ್ಷ್ಮಿ ಪೂಜಾರಿ,ಪಾರವ್ವ ಹೀರೆಮಠ,ಪೂಜಾ ದೋಡ್ಡಮನಿ, ಸಂತೋಷ ಮಡಿವಾಳ,ಆನಂದ ಬೆಲ್ಲಪ್ಪನವರ, ಮಂಜುಳಾ ಬೆಳವಣಕಿ, ಕವಿತಾ ಚನ್ನಗೌಡರ, ಸಂಗಮೇಶ ಹೀರೆಮಠ, ರೇಣುಕಾ ಅಂಗಡಿ, ವಿಜಯಲಕ್ಷ್ಮಿ ಚಂಪನಗೌಡರ, ಮಹಾಂತೇಶ ಹೀರೆಮಠ, ಗಣೇಶ ಮಾಸ್ತಕಟ್ಟಿ ,ಕಾರ್ಮಿಕ ಸಂಘಟನೆ ಮುಖಂಡರಾದ ಮೈಬೂಬ ಹವಾಲ್ದಾರ, ಕನಕರಾಯ ಹಾದಿಮನಿ ಇದ್ದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!