
ಕೃಷ್ಣ ಪ್ರೇಮ ಫೌಂಡೇಶನ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ -2025.
ಗಜೇಂದ್ರಗಡ : ಸತ್ಯಮಿಥ್ಯ (ಆ -18)
ನಗರದ ರೋಣ ರಸ್ತೆಯ ಬಂಡಿ ಗಾರ್ಡನ್ ನಲ್ಲಿ. ಕಳೆದ ಶುಕ್ರವಾರ ಆಗಸ್ಟ್ 15 ರ ಸಾಯಂಕಾಲ 5 ಗಂಟೆಗೆ ಕೃಷ್ಣ ಪ್ರೇಮ ಫೌಂಡೇಶನ್ ಮತ್ತು ಆರ್ ಎಂ ರಾಯಬಾಗಿ ಕುಟುಂಬದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ – 2025 ಆಚರಿಸಲಾಯಿತು.
ಇಸ್ಕಾನ್ ನಿಂದ ಆಗಮಿಸಿದ್ದ ಎಚ್.ಜಿ. ರಾಮಪ್ರಸಾದ್ ದಾಸ್ ಪ್ರಭುಜಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ. ಕೃಷ್ಣ ಜನ್ಮಾಷ್ಟಮಿ ಎಂಬುವುದು ಪವಿತ್ರವಾದ ದಿನ. ಈ ದಿನವನ್ನು ಕೇವಲ ಹಬ್ಬವಾಗಿ ಆಚರಿಸುವುದಲ್ಲದೆ ಪ್ರತಿಯೊಬ್ಬ ಮನುಷ್ಯನು ತನ್ನನ್ನು ತಾನು ಆಧ್ಯಾತ್ಮಿಕದೊಂದಿಗೆ ಮಿಲನ ಹೊಂದುವ ಮಹೋತ್ಸವವಾಗಬೇಕು.
“ಜನ್ಮ ಕರ್ಮ ಕಾ ಮೇ ದಿವ್ಯಂ
ಏವಂ ಯೋ ವೇತ್ತಿ
ತತ್ತ್ವತಃ ತ್ಯಕ್ತ್ವ ದೇಹಂ ಪುನರ್ ಜನ್ಮ
ನೈತಿ ಮಾಮ್ ಇತಿ ಸೋ ‘ರ್ಜುನ”
ಎಂಬ ಭಗವದ್ಗೀತೆಯ ವಾಣಿಯಂತೆ.
“ನನ್ನ ನೋಟ ಮತ್ತು ಚಟುವಟಿಕೆಗಳ ಅಲೌಕಿಕ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಯಾರಾದರೂ ದೇಹವನ್ನು ತೊರೆದ ನಂತರ ಈ ಭೌತಿಕ ಜಗತ್ತಿನಲ್ಲಿ ಮತ್ತೆ ಜನ್ಮ ಪಡೆಯುವುದಿಲ್ಲ ಆದರೆ ನನ್ನ ಶಾಶ್ವತ ನಿವಾಸವನ್ನು ಪಡೆಯುತ್ತಾರೆ ” ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾನೆ.
ಐದು ಸಾವಿರ ವರ್ಷಗಳ ಹಿಂದೆ ಮಧ್ಯ ರಾತ್ರಿಯ ಕತ್ತಲೆಯಲ್ಲಿ ಶ್ರೀ ಕೃಷ್ಣನು ಮಥುರಾದ ಕಂಸನ ಸೆರೆಮನೆಯಲ್ಲಿ ಕಾಣಿಸಿಕೊಂಡನು. ಪರಮಾತ್ಮನು ಬಲವಂತ ಅಥವಾ ಕರ್ಮಕ್ಕೆ ಒಳಗಾಗದೆ ತನ್ನ ಸ್ವಂತ ಇಚ್ಛೆಯಿಂದ ಭಕ್ತರನ್ನು ಸಂರಕ್ಷಿಸಲು, ದುಸ್ಕರ್ಮಿಗಳನ್ನು ಸಂಹಾರ ಮಾಡುವ ಮೂಲಕ ಧರ್ಮವನ್ನು ಪುನಃ ಸ್ಥಾಪಿಸಲು ಬಂದನು. ಆದ್ದರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ ಎಂದರು.
ಇಂತಹ ದೈವಿಕಾರ್ಯಕ್ರಮ ಆರ್ ಎಂ ರಾಯಬಾಗಿಯವರ ನೇತೃತ್ವದಲ್ಲಿ ನಡೆಯುತ್ತಿರುವದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಗರದ ಖ್ಯಾತ ನ್ಯಾಯವಾದಿ ಆರ್. ಎಂ. ರಾಯಬಾಗಿಯವರು. ಕೃಷ್ಣನ ಮಾರ್ಗದರ್ಶನದಿಂದ ಬದುಕಿನಲ್ಲಿ ಸುಖ ಶಾಂತಿ ಸಮೃದ್ಧಿಯನ್ನು ಗಳಿಸಬಹುದಾಗಿದ್ದರಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ನಗರದ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಾಗಿ ಕೀರ್ತನೆ ಆಲಿಸಿ ಈ ಪವಿತ್ರವಾದ ಭಕ್ತಿಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ಹರೇ ಹರೇ ಎಂಬ ಭಕ್ತಿಯ ದ್ವನಿ ಮಾರ್ದನಿಸಿತು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಕ್ತಿಯ ಉಡುಗೆ ತೊಟ್ಟು ಹಣೆಯಲ್ಲಿ ಕೃಷ್ಣನಾಮ ಧರಿಸಿ ಆದ್ಯಾತ್ಮದಲ್ಲಿ ಲೀನರಾಗಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ರೋಣ ಮತಕ್ಷೇತ್ರದ ಶಾಸಕರಾದ ಜಿ. ಎಸ್. ಪಾಟೀಲ, ಇಸ್ಕಾನ್ ಎಚ್ ಜಿ ಗೋಪಿಪ್ರಾಣ ಗೋವಿಂದ ದಾಸ ಪ್ರಭುಜಿ ಮತ್ತು ಎಚ್.ಜಿ. ಗೌರಂಗಿ ಗೋಪಿನಾಥ ಪ್ರಿಯಾ ಮಾತಾಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಐ.ಎಸ್. ಪಾಟೀಲ್ , ಮಿಥುನ ಪಾಟೀಲ, ಸಿದ್ದಣ್ಣ ಬಂಡಿ, ಅಕ್ಷಯ ಪಾಟೀಲ, ಸೂಡಿಯ ಭುಜಂಗ ಭಟ್, ವೀರಣ್ಣ ಶೆಟ್ಟರ, ಕೇಶವ ರಾಯಬಾಗಿ ಸೇರಿದಂತೆ ನೂರಾರು ಶ್ರೀ ಕೃಷ್ಣನ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.