
ಬಂಜಾರ ಸಮಾಜದ ಯುವಕರಿಂದ ಎಸ್ಪಿ ಅವರಿಗೆ ಸನ್ಮಾನ.
ಗದಗ : ಸತ್ಯಮಿಥ್ಯ (ಆ-02)
ಜಿಲ್ಲೆಗೆ ನೂತನವಾಗಿ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ರೋಹನ್ ಜಗದೀಶ – ಅವರನ್ನು ಗದಗ ತಾಲೂಕಿನ ಬೆಳಧಡಿ ತಾಂಡಾದ ಬಂಜಾರ ಸಮಾಜದ ಯುವಕರಿಂದ ಕುಲಗುರು ದಾರ್ಶನಿಕ ಮಹಾನ ಸಂತ ಶ್ರೀ ಸೇವಾಲಾಲ ಮಹಾರಾಜರ ಭಾವಚಿತ್ರವನ್ನು ನೀಡುವದರ ಮೂಲಕ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ಪಿ ಅವರು, ಯುವಕರ ಪಾತ್ರವು ಸಮಾಜ ಮತ್ತು ದೇಶದ ಪ್ರಗತಿಗೆ ಅತ್ಯಂತ ಮಹತ್ವದ್ದಾಗಿದೆ. ನೀವೆಲ್ಲರೂ ಹೊಸ ಆಲೋಚನೆಗಳು, ಉತ್ಸಾಹ ಮತ್ತು ಶಕ್ತಿಯೊಂದಿಗೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಮರ್ಥರಾಗ ಬೇಕೆಂದು ನುಡಿದರು.
ಗದಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಜನಸಾಮಾನ್ಯರ, ರೈತರ ಕುಂದುಕೊರತೆಗಳ ನಿವಾರಣೆಯ ಕುರಿತು ಯುವಕರು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ, ಮಾರ್ಗದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಸಂಘಟಕರಾದ ವೆಂಕಟೇಶ ರಾಠೋಡ, ಅನಿಲ ಮಾಳಗಿಮನಿ,ತುಳಚಪ್ಪ ಚವ್ಹಾಣ, ಸಂತೋಷ ಪೂಜಾರ,ಲಕ್ಷ್ಮಣ ತುಳಸಿಮನಿ, ಪುಂಡಲೀಕ ರಾಠೋಡ, ಸೋಮೇಶ ಪೂಜಾರ, ಅರುಣ ಪೂಜಾರ, ಅನಿಲ ಪೂಜಾರ , ಕಿರಣ ಪೂಜಾರ, ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ.