ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಹ್ಯಾಂಡಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ.
ಗಜೇಂದ್ರಗಡ:ಸತ್ಯಮಿಥ್ಯ(ಸೆ-19)
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನ ಬಾಲಕಿಯರು ಹ್ಯಾಂಡಬಾಲ್ ತಂಡವು ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಶಾಲಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗದಗ ನಗರದ ಜೆ ಟಿ ಕಾಲೇಜ್ ಆವರಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಬಿಪಿನ್ ಚಿಕ್ಕಟ್ಟಿ ಕಾಲೇಜಿನ ವಿರುದ್ದ ಸೆಣಸಾಡಿ ಜಯಶಾಲಿಯಾದರು.
ಬಾಲಕಿಯರ ಹ್ಯಾಂಡ್ಬಾಲ್ ತಂಡ ವಿದ್ಯಾರ್ಥಿನಿಯರು:
ಅನುಷಾ ರುದ್ರಗಂಟಿ (ತಂಡದ ನಾಯಕಿ),
ಸುನಿತಾ ಮುಸಿಗೇರಿ
ಸುಷ್ಮಿತಾ ಬೋವಿ, ವಿನೂತಾ ಹುದ್ದಾರ,
ಬಾಗ್ಯಶ್ರೀ ಬಡಿಗೇರ,ರಕ್ಷಿತಾ ಹಿರೇಮಠ,
ದೀಪಾ ಗುಂಡೆ,ಸುಹಾನ ಬಡಿಗೇರ,
ಪಲ್ಲವಿ ಕೊಡಕೇರಿ,ದೀಪಾ ಹಡಪದ
ಯಮುನಾ ಬೆನಕನಾಳ,ಸಂಗೀತ ಕಳಕಾಪೂರ
ಪೂಜಾ ನಾಯಕರ,ಶ್ರೀದೇವಿ ಶಿರಹಟ್ಟಿ,
ಸವಿತಾ ಭೋಸಲೆ,ಮೇಘಾ ಮೋಡೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಂಡದ ವ್ಯವಸ್ಥಾಪಕರು ಇತಿಹಾಸ ಉಪನ್ಯಾಸಕಿ ಸಂಗೀತ ನಾಲತ್ವಾಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು
ವಿದ್ಯಾರ್ಥಿಯರ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮ ನಿ.ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಎಸ್ ಎ ವಿ ವಿ ಪಿ ಸಮಿತಿ ನರೇಗಲ್ಲ ಆಡಳಿತಾಧಿಕಾರಿಗಳಾದ ಎನ್ ಆರ್ ಗೌಡರ. ಪ್ರಧಾನ ಕಾರ್ಯದರ್ಶಿಗಳಾದ ಆರ್ ಜೆ ದೊಡ್ಡಮೇಟಿ ಹಾಗೂ ಕಾಲೇಜಿನ ಚೆರಮನ್ನರಾದ ವಿರಯ್ಯ ವಿ ವಸ್ತ್ರದ ಹಾಗೂ ಸದಸ್ಯರಾದ ಡಾ.ಬಿ ವಿ ಕಂಬಳ್ಯಾಳ, ಸದಾಶಿವ ಕರಡಿ,ಮುದಕಪ್ಪ ತೊಂಡಿಹಾಳ.ಪ್ರಾಚಾರ್ಯರಾದ ಶ್ರೀ ವಸಂತರಾವ್ ಗಾರಗಿ ಹಾಗೂ ಸರ್ವ ಸಿಬ್ಬಂದಿ ವರ್ಗ ಶುಭಾಶಯ ಹೇಳುವುದರೊಂದಿಗೆ ರಾಜ್ಯಮಟ್ಟದಲ್ಲಿ ಭಾಗವಹಿಸಿ ಜಯಗಳಿಸುವದರೊಂದಿಗೆ ಕಾಲೇಜಿನ ಕೀರ್ತಿಯನ್ನು ಬೆಳಗಿಸಲಿ ಎಂದು ಹಾರೈಸಿದರು.
ವರದಿ:ಮುತ್ತು ಗೋಸಲ್.