
ಇಂದಿನಿಂದ ಶ್ರೀ ಜಟ್ಟಿಂಗೇಶ್ವರ ಮತ್ತು ಗ್ಯಾನಪ್ಪಮುತ್ತ್ಯಾನ ಅದ್ದೂರಿ ಜಾತ್ರೆ.

ತಾಳಿಕೋಟಿ:ಸತ್ಯಮಿಥ್ಯ (ನ-19)
ತಾಲೂಕಿನ ವನಹಳ್ಳಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಜಟ್ಟಿಂಗೇಶ್ವರ ಹಾಗೂ ಗ್ಯಾನಪ್ಪಮುತ್ಯಾನ ಜಾತ್ರಾಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 19ರಿಂದ 23 ರವರೆಗೆ ಅದ್ದೂರಿಯಾಗಿ ಜರುಗುವುದು. ನ 19 ಬುಧವಾರದಂದು ಮಧ್ಯಾಹ್ನ 2 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ನಡಹಳ್ಳಿ, ಬಳವಾಟ, ಮುದ್ದೇಬಿಹಾಳ ಹಾಗೂ ಯರಝರಿ ಗ್ರಾಮದ ಮುಖಾಂತರ ಕೃಷ್ಣಾ ನದಿಗೆ ಪಲ್ಲಕ್ಕಿಯು ಗಂಗಾಸ್ನಾನಕ್ಕೆ ಹೋಗುವುದು ರಾತ್ರಿ ಯರಝರಿ ಗ್ರಾಮದಲ್ಲಿ ಗ್ರಾಮದ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಡೊಳ್ಳಿನ ಹಾಡಕಿ ಜಾಗರಣೆ ಮಾಡುವುದು.

ನ20 ಗುರುವಾರದಂದು ಬೆಳಿಗ್ಗೆ 6 ಗಂಟೆಗೆ ಯರಝರಿ ಸಿದ್ದರಾಯ ಮುತ್ತ್ಯಾನ ಹಾಗೂ ವನಹಳ್ಳಿ ಜಟ್ಟಿಂಗೇಶ್ವರರ ಜೋಡು ಪಲ್ಲಕ್ಕಿ ಹಾಗೂ ಜೋಡು ಸತ್ತಿಗೆಯೊಂದಿಗೆ ಗಂಗೆಮಿನಿಯುವುದು.ರಾತ್ರಿ 8ಗಂಟೆಯಿಂದ ಶ್ರೀ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಶಿವಭಜನೆ.ರಾತ್ರಿ11 ಗಂಟೆಗೆ ಗುಡಿಹಾಳ,ಬಳವಾಟ,ನಡಹಳ್ಳಿ ಗ್ರಾಮಸ್ಥರಿಂದ ಪಲ್ಲಕ್ಕಿಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ.
ನ – 21 ಶುಕ್ರವಾರದಂದು ಬೆಳ್ಳಿಗ್ಗೆ 5 ಗಂಟೆಗೆ ಡೊಳ್ಳು ವಾಲಗ, ವಾದ್ಯ ವೈಭವಗಳೊಂದಿಗೆ ಹಾಗೂ ಸ್ಥಳೀಯ ಚಟ್ಟೇರ ಅವರ ಕುದುರೆ ಕುಣಿತ ದೊಂದಿಗೆ ಜೋಡು ಪಲ್ಲಕ್ಕಿ ಉತ್ಸವ ಅದ್ದೂರಿ ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಕರೆತರುವುದು.ನಂತರ ಕಳಸಾರೋಹಣ ಮತ್ತು ಹೂವು ಮುಡಿಯುವುದು.ತದನಂತರ ಪೂಜಾ ವಿದಿವಿಧಾನದೊಂದಿಗೆ ಶಿವನುಡಿ ಹೇಳುವುದು. ಮುಂಜಾನೆ 11 ಗಂಟೆಯಿಂದ ಪರ ಊರಿನಿಂದ ಬಂದ ಡೊಳ್ಳಿನ ಹಾಡಕಿ ಭಕ್ತಾದಿಗಳಿಂದ ಹಾಡಕಿ ಸೇವೆ ಜರುಗುವುದು. ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ ನಡೆಯುವುದು.
ನಂತರ ಪುರುಷರಿಂದ ಭಾರವಾದ ಕಲ್ಲು ಜಗ್ಗುವ ಸ್ಪರ್ಧೆ ಇರುತ್ತದೆ.ಒಂದನೇ ಬಹುಮಾನ 5001,ಎರಡನೇ 3001,ಮೂರನೇ 2001,ನಾಲ್ಕನೇ 1001 ರೂ ಬಹುಮಾನ ಇರುವುದು. ಅಂದೆ ಬೆಳ್ಳಿಗ್ಗೆ 9 ಗಂಟೆಗೆ ಉಚಿತವಾಗಿ ಕಣ್ಣು ಎಲುಬು ಹಾಗೂ ಕೀಲು ತಪಾಸಣೆ ಇರುವುದು. ಹಾಗೂ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಭಿರವನ್ನು ಹಮ್ಮಿಕೊಳ್ಳಲಾಗಿದೆ.
ಅಂದೆ ರಾತ್ರಿ 10 ಗಂಟೆಗೆ ಮಾಳಿಂಗೇಶ್ವರ ಡೊಳ್ಳಿನ ಗಾಯನ ಸಂಘ ಮುಗಳಿಹಾಳ ಹಾಗೂ ಶ್ರೀ ಭರಮದೇವರ ಡೊಳ್ಳಿನ ಗಾಯನ ಸಂಘ ಕರಜಗಿ ಇವರಿಂದ ಸುಪ್ರಸಿದ್ಧ ಡೊಳ್ಳಿನ ಹಾಡಕಿ ಇರುವುದು. ನ22 ಶನಿವಾರದಂದು ಬೆಳ್ಳಿಗ್ಗೆ 8 ಗಂಟೆಗೆ ದೇವಸ್ಥಾನದಲ್ಲಿ ಶಿವವಾಣಿ ಜರುಗುವುದು.
ಗುರುಶಿಷ್ಯರ ಹಾಗೂ ಲಗಮ್ಮವ್ವನ ಸತ್ತಿಗೆಯೊಂದಿಗೆ ಈರಗಾರ ಪೂಜಾರಿಗಳು ಈರಗಾರ ಆಟ ಜರುಗುವುದು.ಭಕ್ತಾದಿಗಳಿಂದ 25ಕ್ವೀಂಟಲ್ ಭಂಡಾರವನ್ನು ಪಲ್ಲಕ್ಕಿಯ ಮೆರವಣಿಗೆಯ ವೇಳೆ ಹಾರಿಸಲಾಗುವುದು. ನಂತರ ಮಧ್ಯಾಹ್ನ 12:30ಕ್ಕೆ 2ಹಲ್ಲಿನ ಟಗರಿನ ಕಾಳಗ ಪ್ರಥಮ 7001, ದ್ವೀತಿಯ 5001, ತೃತೀಯ 3001 ರೂ ಇರುವುದು. ನಂತರ 4 ಹಲ್ಲಿನ ಟಗರಿನ ಕಾಳಗ ಇರುವುದು. ಪ್ರಥಮ 11001, ದ್ವೀತಿಯ 7001, ತೃತೀಯ 5001 ರೂಪಾಯಿ ಬಹುಮಾನ ಇರುವುದು. ನಂತರ ಡೊಳ್ಳಿನ ವಾಲಗದೊಂದಿಗೆ 11ಪಲ್ಲಕ್ಕಿಗಳ ಮೆರವಣಿಗೆ ಜೋತೆಗೆ ಮೂಲಗದ್ದುಗೆಗೆ ತಲುಪುವುದು.
ನ22 ಮತ್ತು 23 ರಂದು ವನಹಳ್ಳಿ ಗ್ರಾಮದ ಲೆಜೆಂಡ್ ಕ್ರಿಕೆಟ್ ಟೀಮ್ ವತಿಯಿಂದ ಓಪನ್ ಕ್ರಿಕೆಟ್ ಟೂರ್ನಮೆಂಟ್ ಜರುಗುವುದು. ಪ್ರಥಮ 10001,ದ್ವೀತಿಯ 7001,ತೃತೀಯ5001 ರೂಪಾಯಿ ಇರುತ್ತದೆ.ಸೂಚನೆಗಳನ್ನು ಮೈದಾನದಲ್ಲಿ ತಿಳಿಸಲಾಗುವುದು ಎಂದು ಕಮೀಟಯು ತಿಳಿಸಲಾಗಿದೆ.
ವರದಿ:- ಜಿ ಎನ್ ಬೀರಗೊಂಡ.




