
ಸಾಹಿತಿ ಎ.ಎಸ್.ಮಕಾನದಾರ
ರವರಿಗೆ ರಾಜ್ಯ ಸರ್ವೋತ್ತಮ ಸೇವಾ ಪುರಸ್ಕಾರ.
ಗದಗ:ಸತ್ಯಮಿಥ್ಯ (ಎ-20).
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇಪ್ಪತ್ತು ಜನ ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಗದಗ ಜಿಲ್ಲೆಯ ಹಿರಿಯ ಪ್ರಧಾನ ದಿವಾಣಿ ವ, ಸಿ ಜೆ ಎಂ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಹಿತಿ ಎ.ಎಸ್. ಮಕಾನದಾರ ಅವರು ರಾಜ್ಯ ಸರ್ವೋತ್ತಮ ಸೇವಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕರ್ನಾಟಕ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ )ಬೆಂಗಳೂರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ದಿ.21ರ ಸೋಮವಾರ ಬೆಳಿಗ್ಗೆ 11ಗಂಟೆ ಗೆ ಬೆಂಗಳೂರು ವಿಧಾನ ಸೌಧದ
ಬ್ಯಾಂ ಕ್ವೆಟ್ ಹಾಲ್ ನಲ್ಲಿ
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡುವರು.
ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಗೌರವ ಉಪಸ್ಥಿತರಿರುವರು.
ಶಿವಾಜಿ ನಗರದ ವಿಧಾನ ಸಭಾ ಸದಸ್ಯ ರಿಜ್ವಾನ್ ಹರ್ಷದ್ ಅವರು ಸಮಾರಂಭದ ಅಧ್ಯಕ್ಷತೆವಹಿಸುವರು.
ಹಿರಿಯ ಕವಿ ಎ.ಎಸ್. ಮಕಾನದಾರಅವರು ಸೇರಿದಂತೆ
ರಾಜ್ಯದ ವಿವಿಧ ಇಲಾಖೆಗಳ 30 ವಿಶೇಷ ಸಾಧಕರಿಗೆ . ಇಲಾಖಾ ವಾರು ಆಯ್ಕೆ ಗೊಳಿಸಿದ್ದು ಪ್ರತಿ ಸಾಧಕರಿಗೂ 50 ಸಾವಿರ ರೂಪಾಯಿ ಪ್ರಶಸ್ತಿ ಮೊತ್ತ, ಪ್ರಶಸ್ತಿ ಫಲಕ, ಹಾರ ಶಾಲು ಗಳೊಂದಿಗೆ ಗೌರವಿಸಲಾಗುವದು. ಇಲಾಖೆಯ ಸೇವೆಯ ಜೊತೆ ಜೊತೆಗೆ 35 ಅಪರೂಪದ
ಸ್ವತಂತ್ರ ಹಾಗೂ ಸಂಪಾದಿತ ಕೃತಿ ಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಸಾಹಿತಿ ಮಕಾನದಾರ ಅವರು ಹೊಸ ಕಾವ್ಯ ಪ್ರಯೋಗ ಮತ್ತು ಹೊಸ ದಿಕ್ಕಿನೆಡೆಗೆ
ಹೊರಳಿರುವುದನ್ನು ಅವರ ಸಾಹಿತ್ಯ ರಚನೆಯಲ್ಲಿ ಓದುಗರು ಕಂಡಿದ್ದಾರೆ.
ಕರ್ತವ್ಯದ ಹೊಣೆಗಾರಿಕೆಯ ಜೊತೆಗೆ ಸಾಮಾಜಿಕ ಕಳಕಳಿ,ಜೀವನ ಪ್ರೀತಿ ಸೌಹಾರ್ದ ಬದುಕಿಗೆ ತಮ್ಮನ್ನೇ ತಾವು ಅರ್ಪಣೆ ಮಾಡಿಕೊಂಡ ಕಾರಣದಿಂದಲೆ ಅವರ ಕವಿತೆಗಳು ಹಿಂದಿ, ಇಂಗ್ಲೀಷ್, ಮಲಯಾಳಂ, ತಮಿಳು, ತೆಲಗು ಬ್ಯಾರಿ, ಕೊಂಕಣಿ ಮುಂತಾದ ಭಾಷೆಗಳಿಗೆ ಅನುವಾದ ಗೊಂಡಿದ್ದು ಮಾತ್ರವಲ್ಲ, ವಿಶ್ವ ವಿದ್ಯಾಲಯದ ಪಠ್ಯ ಪುಸ್ತಕಗಳಲ್ಲೂ ಕವಿತೆ ಸೇರ್ಪಡೆಗೊಂಡಿವೆ
ಕಾನೂನು ಇಲಾಖೆಯವತಿಯಿಂದ ಮೊಟ್ಟ ಮೊದಲ ಬಾರಿಗೆ ಮಕಾನದಾರ ಅವರು ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಗದಗ ಜಿಲ್ಲೆ ನ್ಯಾಯಾಂಗ ಇಲಾಖೆ ನೌಕರರ ಸಂಘ ಮತ್ತು ನ್ಯಾಯಾಂಗ ಇಲಾಖೆ ನೌಕರರ ಸಹಕಾರಿ ಪತ್ತಿನ ಸಂಘದ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಚನ್ನು. ಎಸ್.