
ಬಿ.ಎಫ್.ದಂಡಿನ ಕಾನೂನು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಸ್ಮರಣೆ.

ಗದಗ:ಸತ್ಯಮಿಥ್ಯ(ಸೆ -11)
ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣದ 132ನೇ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಬಿ.ಎಫ್. ದಂಡಿನ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಕರಾಗಿ ಭಾಗವಹಿಸಿ ಮಾತನಾಡಿದ ಪ್ರೊ. ದತ್ತಪ್ರಸನ್ ಪಾಟೀಲ್. ವಿದ್ಯಾರ್ಥಿ ದೆಸೆಯಲ್ಲಿ ವಿವೇಕಾನಂದರ ವಿಚಾರಧಾರೆಗಳನ್ನು ಅಳವಡಿಕೊಳ್ಳುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ನೂರುಜನ ಸದೃಢ ಯುವಕರನ್ನು ನನಗೆ ಕೊಡಿ ಭಾರತಾಂಬೆಯನ್ನು ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆಗೊಳಿಸುತ್ತೇನೆ ಎಂದಿದ್ದ ಸ್ವಾಮಿವಿವೇಕಾನಂದರು.1893 ಸೆಪ್ಟೆಂಬರ್ 11 ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ನನ್ನ ಪ್ರೀತಿಯ ಸಹೋದರ ಸಹೋದರಿಯರೇ ಎಂದು ಭಾಷಣ ಪ್ರಾರಂಭ ಮಾಡುವ ಮೂಲಕ ಸರ್ವ ಧರ್ಮದವರ ಮನ ಗೆಲ್ಲುವ ಮತ್ತು ಹಿಂದೂ ಧರ್ಮ ಎಲ್ಲ ಧರ್ಮದ ವಿಚಾರಗಳನ್ನು ತೆಗೆದುಕೊಳ್ಳುತ್ತದೆ ಆದರೆ ಯಾವುದೇ ಧರ್ಮದ ಮೇಲೆ ತನ್ನತನವನ್ನು ಹೇರುವ ಪ್ರಯತ್ನವನ್ನು ಮಾಡುವದಿಲ್ಲ ಎಂದು ಪ್ರತಿಪಾದಿಸುವ ಮೂಲಕ ಹಿಂದುಸ್ತಾನವನ್ನು ಪ್ರಪಂಚದ ಮುಂದೆ ಅನಾವರಣಗೊಳಿಸಿದರು. ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕೆ ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಆದರೆ ಶತಶತಮಾನಗಳಿಂದ ಆಗುವ ದಾಳಿಯನ್ನು ತಡೆದುಕೊಂಡಿರುವ ಹಿಂದೂಗಳಿಗೆ ಇದು ಹೊಸದಲ್ಲ ಎಂದರು.
ಕಾರ್ಯಕ್ರಮವನ್ನು ಸ್ವಾಮಿವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲಾ ಕೊಳ್ಳಿ ವಹಿಸಿಕೊಂಡು ಮಾತನಾಡುತ್ತ. ಸ್ವಾಮಿವಿವೇಕಾನಂದರ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುತ್ತವೆ.ವಿವೇಕಾನಂದರು ಸರ್ವಸ್ವವನ್ನು ದೇಶಕ್ಕೆ ದೇಶದ ಬಡ ಜನರ ಉದ್ದಾರಕ್ಕಾಗಿ ಸಮರ್ಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ಅನಿಲ ಅಬ್ಬಿಗೇರಿ, ಸ್ವಾತಿ ಅಕ್ಕಿ, ಪ್ರಾಚಾರ್ಯರಾದ ನಾಗರಾಜ ಕುಲಕರ್ಣಿ,ವಿಜಯಲಕ್ಷ್ಮಿ ಮಾನ್ವಿ,ಸೌಮ್ಯ ಹಿರೇಮಠ ಸೇರಿದಂತೆ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಚನ್ನು. ಎಸ್.