ಜಿಲ್ಲಾ ಸುದ್ದಿ

ಉತ್ತರ ಕರ್ನಾಟಕ ಪ್ರಮುಖ ಸಮಸ್ಯೆಗಳ ಚರ್ಚೆಗೆ ಸಾಕ್ಷಿಯಾದ ಎಸ್ ಎಫ್ ಐ ನ 5 ನೇ ಗದಗ ಜಿಲ್ಲಾ ಸಮ್ಮೇಳನ.

Share News

ಉತ್ತರ ಕರ್ನಾಟಕ ಪ್ರಮುಖ ಸಮಸ್ಯೆಗಳ ಚರ್ಚೆಗೆ ಸಾಕ್ಷಿಯಾದ ಎಸ್ ಎಫ್ ಐ ನ 5 ನೇ ಗದಗ ಜಿಲ್ಲಾ ಸಮ್ಮೇಳನ.

ಗದಗ:ಸತ್ಯಮಿಥ್ಯ (ಸ -23)

ಸೆಪ್ಟೆಂಬರ್ 23 ರಂದು ನಗರದ ಎಸ್ ಎಫ್ ಐ ಆಫೀಸ್ ನಲ್ಲಿ ಸಾರ್ವತ್ರಿಕ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಸಾಮರಸ್ಯ, ಭಾವೈಕ್ಯತೆ ಮತ್ತು ಬಹುತ್ವ ಪರಂಪರೆಯ ಸಂರಕ್ಷಣೆಗಾಗಿ ಎಸ್ ಎಫ್ ಐ ನ 5 ನೇ ಗದಗ ಜಿಲ್ಲಾ ಸಮ್ಮೇಳನ ನಡೆಯಿತು.

ಸಮ್ಮೇಳನವನ್ನು ಉದ್ಘಾಟಿಸಿ ಎಸ್ ಎಫ್ ಐನ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ ಮಾತನಾಡಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಶೈಕ್ಷಣಿಕ ವಲಯವನ್ನು ಹದಗೆಸುತ್ತಿದ್ದು ಗೊಂದಲದ ಗೂಡಾಗಿದೆ. ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ಗಲಾಟೆ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ ಹಾಗೆ ಪಠ್ಯ ಪುಸ್ತಕದ ಬದಲಾವಣೆ ಮೂಲಕ ಸರ್ಕಾರವೇ ಕೇಸರಿಕರಣಕ್ಕೆ ಇಳಿದಿದ್ದು ಖೇಧಕರವಾಗಿತ್ತು. ಎಲ್ಲಾವನ್ನು ಸಹಿಸಿಕೊಂಡು ಬಂದ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಕಲಿಸಿದ್ದಾರೆ ಹಾಗೇ ಇಂದಿನ ಸರ್ಕಾರವು ಸರಿಯಾದ ನೀತಿ ಇಲ್ಲದೇ ಹೆಣಗುತ್ತಿವೆ.

ಜಿಲ್ಲೆಗೊಂದು ನರ್ಸಿಂಗ್ ಕಾಲೇಜುಗಳು ಪ್ರಾರಂಭಿಸಲು ಒತ್ತಾಯಿಸಬೇಕಿದೆ ಜೊತೆಗೆ ಹಾಸ್ಟೆಲ್ ಕೊರತೆ, ಬಸ್ ಸಮಸ್ಯೆ, ಶಿಕ್ಷಕರ, ಉಪನ್ಯಾಸಕರ, ಮೂಲಭೂತ ಸೌಕರ್ಯಗಳ ಕೊರತೆ ನಿರಂತರವಾಗಿ ಇದ್ದು ಸರಿದೂಗಿಸಲು ಸರ್ಕಾರಗಳು ಮುಂದಾಗುತ್ತಿಲ್ಲಾ ಎಲ್ಲಾ ಸಮಸ್ಯೆಗಳ ಮಧ್ಯ ವಿದ್ಯಾರ್ಥಿ ಸಮ್ಮೇಳನ ನಡೆಯುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಿ ಜನ ಜಾಗೃತಿ ಮೂಡಿಸುವ ಕಾರ್ಯ ಮತ್ತು ಹೋರಾಟ ಮಾಡಿ ಹಕ್ಕುಗಳನ್ನು ಪಡೆದುಕೊಳ್ಳವ ಕಾರ್ಯಕ್ಕೆ ಮುಂದಾಗಬೇಕೆಂದರು.

ಎಸ್ ಎಫ್ ಐ ನಂತಹ ನಮ್ಮ ಸಂಘಟನೆ ಒಂದು ವಿಶ್ವವಿದ್ಯಾಲಯ ಇದ್ದ ಹಾಗೆ ಇಲ್ಲಿನ ವಿದ್ಯಾರ್ಥಿ ನಾಯಕರು ಯಾವಾಗಲೂ ಪರಿಪೂರ್ಣ ವಿದ್ಯಾರ್ಥಿಗಳಾಗಿ ಹೋರಹೊಮ್ಮುತ್ತಾರೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ಆಶಯ ಹೊತ್ತು ನಡೆಯುತ್ತಿರುವ ಎಸ್ ಎಫ್ ಐ ಸಂಘಟನೆಯ ಸಮ್ಮೇಳನಕ್ಕೆ ಬಹಳ ಮಹತ್ವ ಇದ್ದು ಇಂದು ಗದಗ ಜಿಲ್ಲೆಯ 5ನೇ ಜಿಲ್ಲಾ ಸಮ್ಮೇಳನವನ್ನು ನಾನು ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಷಯ. ಇದಕ್ಕೂ ಮುನ್ನ ಘಟಕ ಸಮ್ಮೇಳನ, ವಲಯ, ತಾಲ್ಲೂಕು ಸಮ್ಮೇಳನ ಮಾಡಿ ನಂತರ ಜಿಲ್ಲಾ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಆಯ್ಕೆಗೊಂಡು ಬಂದಿರುವ ನಿಮ್ಮ ಮೇಲೆ ನನಗೆ ನಂಬಿಕೆ ಇದೆ. ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಈ ಸಮ್ಮೇಳನ ನಿರ್ಣಯ ತೆಗೆದುಕೊಂಡು ಕಾರ್ಯ ರೂಪಸಲಿದೆ. ಈ ಸಮ್ಮೇಳನ ಆಯ್ಕೆ ಮಾಡುವ ಹೊಸ ಸಮಿತಿಯು ಮಹತ್ತರವಾದ ಜವಾಬ್ದಾರಿಯಿಂದ ಕಾರ್ಯನಿರ್ಹಿಸುತ್ತದೆ ಎಂದು ಆಶಿಸುತ್ತನೆ.

ಎಸ್ ಎಫ್ ಐ ಸಮ್ಮೇಳನಗಳು ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಮಟ್ಟದ ತನಕ 2 ವರ್ಷಗಳಿಗೊಮ್ಮೆ ನಡೆಯುತ್ತದೆ. ಇನ್ನೂ ಕೆಳ ಹಂತದ ಕಮಿಟಿಗಳಲ್ಲಿ ಪ್ರತಿವರ್ಷ ಸಮ್ಮೇಳನ ನಡೆಯುತ್ತದೆ ಎಂದರು.

ಈ ಸಮ್ಮೇಳನದಲ್ಲಿ ಕಳೆದ ಸಮ್ಮೇಳನದಿಂದ ಇಲ್ಲಿಯ ಸಮ್ಮೇಳನದ ತನಕ ಎನೆಲ್ಲಾ ಆಯಿತು, ಚರ್ಚೆ, ವಿಮರ್ಶೆ ಮಾಡಿಕೊಂಡು ಮತ್ತೆ ಹೊಸ ನಾಯಕತ್ವದ ಜೊತೆಗೆ ಸಾಗಬೇಕು ಹಾಗಾಗಿ ನಮ್ಮ ಸಂಘಟನೆಯ ಸಮ್ಮೇಳನಕ್ಕೆ ಬಹಳ ಮಹತ್ವದ ಇದೆ ಎಂದರು.

ಈ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮುಂದಿನ ನೂತನ ಸಮಿತಿ ಜಾರಿಗೆ ತರಲಿ ಎಂಬ ಆಶಯದೊಂದಿಗೆ ಸಂತೋಷದಿಂದ ಈ ಸಮ್ಮೇಳನ ಉದ್ಘಾಟನೆ ಮಾಡಿದ್ದೆನೆ ಎಂದರು.

ನಂತರ ಸಮ್ಮೇಳನದ ಕಾರ್ಯ ಕಲಾಪ ನಡೆಯಿತು ಜಿಲ್ಲೆಯ ಕರಡು ವರದಿ ಮಂಡನೆ ನಂತರ ಅದರ ಮೇಲೆ ತಾಲ್ಲೂಕುವಾರು ಚರ್ಚೆ ಆನಂತರ ಜಿಲ್ಲೆಯ ಹೊಸ ಸಮಿತಿ ರಚನೆ ಮಾಡಲಾಯಿತು.

ಸಮ್ಮೇಳನದಲ್ಲಿ ಆಯ್ಕೆಯಾದ ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಚಂದ್ರು ರಾಠೋಡ, ಕಾರ್ಯದರ್ಶಿಯಾಗಿ ಸುದೀಪ್ ಹೂಗಾರ್, ಉಪಾಧ್ಯಕ್ಷರಾಗಿ ಗಣೇಶ ಛಲವಾದಿ, ಅನೀಲ್ ರಾಠೋಡ, ಸಹಕಾರ್ಯಾದರ್ಶಿಗಳಾಗಿ ಕಿರಣ, ಪ್ರದೀಪ್ ಎಂ. ಸದಸ್ಯರು: ಶರಣು ಎಂ, ಮಾಂತೇಶ ಪೂಜಾರ, ರಾಜು, ವಿನೋದ ಮುಂಡರಗಿ, ಮಂಜುನಾಥ್ ಗದಗ, ಕಾರ್ತಿಕ ಲಕ್ಷ್ಮೇಶ್ವರ, ದೇವರಾಜು, ಡೇನಿಷ, ನವೀನ, ಕವಿತಾ ಮೇಟಿ ಒಟ್ಟು 17 ಜನರ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು.

ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯ.

1) ಕೃಷ್ಣ ಬಿ ಸ್ಕೀಮ್ ಯೋಜನೆ ಜಾರಿಗೆ ಒತ್ತಾಯಿಸಿ.

2) ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ.

3)ಕಳಸಾ ಬಂಡೂರಿ ಯೋಜನೆ ಜಾರಿಗಾಗಿ, ಕಪ್ಪದಗುಡ್ಡ ಸಂರಕ್ಷಣೆಗಾಗಿ,

4) ಜಿಲ್ಲೆಗೆ ವಿಶ್ವವಿದ್ಯಾಲಯ ನೀಡಬೇಕೆಂದು ಒತ್ತಾಯಿಸಿ

5)ಜಿಲ್ಲೆಗೊಂದು ಸರ್ಕಾರಿ ನರ್ಸಿಂಗ್ ಕಾಲೇಜು ನೀಡಲು ಒತ್ತಾಯ.

6) ಖಾಲಿಯಿದ್ದ ಶಿಕ್ಷಕರ, ಉಪನ್ಯಾಸಕರ ಮತ್ತು ಇತರೆ ಎಲ್ಲಾ ವರ್ಗದ ಸಿಬ್ಬಂದಿಗಳ ನೇಮಕಾತಿಗಾಗಿ

7) ಅರ್ಜಿ ಹಾಕಿದ ಎಲ್ಲರಿಗೂ ಹಾಸ್ಟೆಲ್ ನೀಡಬೇಕು.

ಹೀಗೆ ಹಲವಾರು ನಿರ್ಣಯವನ್ನು ಸಮ್ಮೇಳನ ಮಾಡಿದೆ.

ನಂತರ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದ ಚಂದ್ರು ರಾಠೋಡ ಮಾತನಾಡಿ ಸಮ್ಮೇಳನ ಮಹತ್ತರವಾದ ಜವಾಬ್ದಾರಿ ನೀಡಿದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೆನೆ ಎಂದರು.

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಗಜೇಂದ್ರಗಡ ತಾಲ್ಲೂಕು ಅಧ್ಯಕ್ಷರಾದ ಅನಿಲ್ ರಾಠೋಡ, ಮುಂಡರಗಿ ತಾಲ್ಲೂಕು ಮುಖಂಡರಾದ ಗಣೇಶ ಛಲವಾದಿ, ರೋಣ ತಾಲೂಕು ಮುಖಂಡರಾದ ಸುದೀಪ್ ಹೂಗಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಾದ ಸುದೀಪ್ ಹುಬ್ಬಳ್ಳಿ, ಮುಪ್ಪಯ್ಯ, ಶರಣು, ಮಾಂತೇಶ, ರಾಜು, ವಿನೋದ, ಮಂಜುನಾಥ, ಕಾರ್ತಿಕ, ದೇವರಾಜ, ಅಪ್ಪು, ಡೆನೀಷ, ನವೀನ, ಕವಿತಾ, ಕಿರಣ, ಆಕಾಶ, ಪ್ರವೀಣ್ ಹಾಗೂ ಇತರರು ಹಾಜರಿದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!