
ಮಾಳಿಂಗರಾಯ ಹಾಗೂ ಬ್ರಹ್ಮದೇವರ 8ನೇ ಬಹುತಕಾರಿ

ಸಾವಳಗಿ:ಸತ್ಯಮಿಥ್ಯ (ನ-19).
ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸುಪ್ರಸಿದ್ಧ ಶ್ರೀ ಗುರು ಮಾಳಿಂಗರಾಯ ಹಾಗೂ ಶ್ರೀ ಗುರು ಬ್ರಹ್ಮದೇವರ 8ನೇ ಬಹುತಕಾರಿಯ ಮಹೋತ್ಸವ ಐದು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನ 20 ರಿಂದ 24ರವರೆಗೆ 5 ದಿನಗಳ ಕಾಲ ಜಾತ್ರೆ ಅತಿ ವಿಜೃಂಭಣೆಯಿಂದ ಜರುಗುತ್ತದೆ, ಗುರುವಾರ 20-11-2025 ರಂದು ಹೋಮದ ಮೂಲಕ ಜಾತ್ರೆ ಪ್ರಾರಂಭವಾಗುವುದು.
*ಶುಕ್ರವಾರ 21-11-2025 ರಂದು ರುದ್ರಾಭಿಷೇಕ ಹಾಗೂ ಹೋಮ ನೇರವೆರಿಸುವುದು.
*ಶನಿವಾರ 22-11-2025 ರಂದು ನಗರದಲ್ಲಿ ಸಾಯಂಕಾಲ 5 ಗಂಟೆಗೆ 101 ಪಲ್ಲಕ್ಕಿ ಬರಮಾಡಿಕೋಳ್ಳಲಾಗುವುದು ರಾತ್ರಿ 10 ಗಂಟೆಗೆ ಡೋಳ್ಳಿನ ಕಾರ್ಯಕ್ರಮ ಜರುಗುವುದು.
*ರವಿವಾರ 23-11-2025 ರಂದು ಮುಂಜಾನೆ 9 ಗಂಟೆಗೆ ಪಲ್ಲಕ್ಕಿ ಉತ್ಸವ, ಕುಂಭಮೇಳ, ವಾಲಗ ಮೇಳ, ಕೈಪಟ್ಟ ಮೇಳ, ಝಾಂಜ ಪಥಕ, ಬ್ಯಾಂಡ್ ಮೇಳ, ಮತ್ತು ಬ್ಯಾಂಜೋ ಮೇಳ, ಹಾಗೂ ಸಕಲ ವಾದ್ಯ ವೈಭವಗಳೋಂದಿಗೆ ಗಂಗೆ ಪೂಜೆ ವಿಜ್ರಂಭಣೆಯಿಂದ ಜರುಗುವುದು, ಸಾಯಂಕಾಲ 5 ಗಂಟೆಗೆ ಧರ್ಮಸಭೆ ಹಾಗೂ 101 ಸಿದ್ದರಿಗೆ ಕಂಬಳಿ ಜಾಡಿ ದಾನದ ಕಾರ್ಯಕ್ರಮ, ಡೋಳ್ಳಿನ ಕಾರ್ಯಕ್ರಮ ಇರುತ್ತದೆ.
*ಸೋಮವಾರ 24-11-2025 ರಂದು ಮುಂಜಾನೆ 5 ಗಂಟೆಗೆ ವಾಲಗ ಮೇಳ ಪ್ರಾರಂಭ ಹಾಗೂ ನಂತರ ಕರಿ ಹರಿಯುವುದರ ಮೂಲಕ ಸಕಲ ಕಾರ್ಯಕ್ರಮ ಹಾಗೂ ಜಾತ್ರೆ ಮುಕ್ತಾಯವಾಗುಯಿತು.
*ಗುರುವಾರ 27-11-2025 ರಂದು ಗುಡಿ ತೊಳೆಯುವ ಕಾರ್ಯಕ್ರಮ ಹಾಗೂ ಮುಂಜಾನೆ 10 ರಿಂದ ಡೋಳ್ಳಿನ ಕಾರ್ಯಕ್ರಮ ಇರುತ್ತದೆ. ಈ ರೀತಿಯಾಗಿ ಜಾತ್ರೆ ಇರುತ್ತದೆ.




