
ಜಾತಿ ಸಮೀಕ್ಷೆ ತಾಂತ್ರಿಕ ದೋಷ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ.
ಗಜೇಂದ್ರಗಡ/ಸತ್ಯಮಿಥ್ಯ (ಸೆ -28)
ಜಾತಿ ಗಣತಿ ತಾಂತ್ರಿಕ ದೋಷ ಪರಿಶೀಲನೆಗಾಗಿ ಶನಿವಾರ ಗಜೇಂದ್ರಗಡ ನಗರಕ್ಕೆ ಆಗಮಿಸಿದ ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಭೇಟಿ ನೀಡಿದರು. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ತಂತ್ರಜ್ಞಾನ ಸಮಸ್ಯೆಗಳ ಪರಿಶೀಲನೆ ನಡೆಸಿದರು ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆದೇಶದ ಹಿನ್ನೆಲೆಯಲ್ಲಿ ಗದಗ ಡಿ ಸಿ ಸರಿಯಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸೋಮಾರಿತನ ಮಾಡಿದರೆ ಅಮಾನತ್ತು ಮಾಡುವ ಖಡಕ್ ಎಚ್ಚರಿಕೆ ನೀಡಿದ್ದರು.
ನಂತರ ತಾಲೂಕಿನ ನಾಗೇಂದ್ರಗಡ ಮತ್ತು ಕಲ್ಲಿಗನೂರು ಗ್ರಾಮಗಳಿಗೆ ಭೇಟಿ ನೀಡಿದರು. ಈ ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದ್ದು ಶೀಘ್ರದಲ್ಲಿ ವೈಪೈ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯ ವರೆಗೆ ಲಕ್ಕಲಕಟ್ಟಿ ಗ್ರಾಮದಲ್ಲಿಯೇ ಈ ಎರಡು ಗ್ರಾಮದ ಜನರು ಸಮೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಸಿಇಒ ಸೇರಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.