
ಕಾನೂನು ಉಲ್ಲಂಘನೆ ಮಾಡಿದ 130 ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಜಿಲ್ಲಾ ಪೊಲೀಸರು.
ಗದಗ:ಸತ್ಯಮಿಥ್ಯ (ಜು-12).
ನಗರದಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಮೇಲೆ ಜಿಲ್ಲಾ ಪೂಲೀಸ ಇಲಾಖೆಯ ವತಿಯಿಂದ ವಿಶೇಷ ಅಭಿಯಾನ ಕಾರ್ಯಾಚರಣೆ ಮಾಡುವುದರ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಕಾನೂನಿನ ಬಿಸಿ ಮುಟ್ಟಿಸಲಾಯಿತು.
ನಗರದಲ್ಲಿ ಭಾರತೀಯ ಮೋಟಾರ ವಾಹನ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡಲಾಗಿ, ತಪಾಸಣೆ ಕಾಲಕ್ಕೆ, ನೋಂದಣಿ ಸಂಖ್ಯೆ ಅಳವಡಿಸದೇ, ದೋಷಪೂರಿತ ನೊಂದಣಿ ಸಂಖ್ಯೆ ಅಳವಡಿಸಿಕೊಂಡು ವಾಹನ ಚಲಾವಣೆ. ನೊಂದಣಿ ಸಂಖ್ಯೆ ಮೇಲೆ ಸ್ಟಿಕ್ಕರ್ ಅಂಟಿಸಿದ ವಾಹನಗಳ ಮೇಲೆ ವಿಶೇಷ ಕಾರ್ಯಾಚರಣೆ ಮಾಡಿ ಸಂಚರಿಸಿದ ಒಟ್ಟು 130 ದ್ವಿಚಕ್ರ ವಾಹನಗಳನ್ನು ತಡೆ ಹಿಡಿದಿದ್ದು ಅದರಲ್ಲಿ ನೋಂದಣಿ ಸಂಖ್ಯೆ ಅಳವಡಿಸದೆ ವಾಹನ ಚಾಲನೆ ಮಾಡಿದ ಒಟ್ಟು 53 ವಾಹನಗಳನ್ನು, ದೋಷಪೂರಿತ ನೊಂದಣಿ ಸಂಖ್ಯೆ ಇರುವ ವಾಹನಗಳು ಒಟ್ಟು 65. ಮತ್ತು ಸ್ಟಿಕ್ಕರ್ ಅಂಟಿಸಿ ವಾಹನ ಚಾಲನೆ ಮಾಡಿದ ಒಟ್ಟು 12 ವಾಹನಗಳ ಮೇಲೆ ಥರ್ಢಐ ಪ್ರಕರಣಗಳು ಇರುವ ಬಗ್ಗೆ ಪರೀಶೀಲನೆ ಮಾಡಿ ಒಟ್ಟು 75 ಥರ್ಢಐ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡ ಹಾಕಲಾಯಿತ್ತು.
ಅಭಿಯಾನ ಕಾರ್ಯಚರಣೆಯನ್ನು ಮಾನ್ಯ ಶ್ರೀ ಬಿ ಎಸ್ ನೇಮಗೌಡ, ಐಪಿಎಸ್ ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಮಾನ್ಯ ಶ್ರೀ ಮುರ್ತುಜಾ ಖಾದ್ರಿ ಡಿ.ಎಸ್.ಪಿ ಗದಗ ಉಪವಿಭಾಗ ಗದಗರವರ ನೇತೃತ್ವದಲ್ಲಿ ಶ್ರೀ ಧೀರಜ್ ಶೀಂಧೆ ಸಿಪಿಐ ಬೆಟಗೇರಿ ರವರ ಮಾರ್ಗದರ್ಶನದಲ್ಲ, ಶ್ರಿ ಕಿರಣಕುಮಾರ ಪಿ ಎಸ್ ಐ ಗದಗ ಸಂಚಾರ ಪೊಲೀಸ್ ಠಾಣೆ ಹಾಗೂ ಸಂಚಾರ ಠಾಣೆಯ ಸಿಬ್ಬಂದಿ ವರ್ಗದವರು ಸೇರಿ ಹಮ್ಮಿಕೊಳ್ಳಲಾಯಿತು.
” 130 ದ್ವಿಚಕ್ರ ವಾಹನಗಳ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಕೊಂಡು ಸವಾರರಿಗೆ ತಿಳಿವಳಿಕೆ ಹೇಳಿ ಮುಂದೆ ದ್ವೀ ಚಕ್ರ ವಾಹನ ಸವಾರರು ವಾಹನಗಳ ನೊಂದಣಿ ಸಂಖ್ಯೆಅಳವಡಿಸದೇ, ದೋಷಪೂರಿತ ನಂಬರ ಪ್ಲೇಟ್ ಅಳವಡಿಸಿರುವುದು ಕಂಡು ಬಂದಲ್ಲಿ ಹಾಗೂ ಸ್ಟಿಕ್ಕರ್ ಅಂಟಿಸಿಕೊಂಡು ವಾಹನ ಚಲಾಯಿಸಿದ್ದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳುತ್ತೇವೆ”
– ಮುರ್ತುಜಾ ಖಾದ್ರಿ ಡಿ.ಎಸ್.ಪಿ
ವರದಿ : ಮುತ್ತು ಗೋಸಲ.