
ಅರಣ್ಯ ಇಲಾಖೆ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣ.
ಸಾವಳಗಿ:ಸತ್ಯಮಿಥ್ಯ (ಆ-23).
ಪಟ್ಟಣದಲ್ಲಿ ಮರಗಳ್ಳರ ಮತ್ತು ವನ್ಯ ಜೀವಿಗಳಾದ ಮೊಲ, ಕೌಜಗಗಳ ಕಳ್ಳರ ಉಪಟಳ ಹೆಚ್ಚಾಗಿದೆ. ಇಂಥವರನ್ನು ಹಿಡಿಯಬೇಕಾದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳ ಅನುಕೂಲಕ್ಕಾಗಿ ಸರ್ಕಾರದಿಂದ ಸುಸಜ್ಜಿತವಾದ ವಸತಿ ಗೃಹಗಳು ನಿರ್ಮಾಣ ಮಾಡಿದ್ದಾರೆ ಆದರೂ ಯಾವುದೇ ಸಿಬ್ಬಂದಿಗಳ ಅದರ ಸದುಪಯೋಗ ಪಡಿದುಕೊಳ್ಳದೆ. ಸರಕಾರದ ಹಣವನ್ನು ವ್ಯರ್ಥ ಮಾಡಿದಂತಾಗಿದೆ.ಈ ಕಟ್ಟಡ ರಾತ್ರಿ ಆದರೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ಆದರೆ ಅಕ್ರಮ ಚಟುವಟಿಕೆಯ ಸ್ಥಳವಾಗಿ ಪರಿವರ್ತನೆ ಯಾಗಿದೆ.
ಸಿಬ್ಬಂದಿಗಳು ತಮಗೆ ಇಷ್ಟ ಬಂದಾಗ ಬರುವುದು ಹೋಗುವದು ಮಾಡುತಿದ್ದಾರೆ. ಹೊದ ವರ್ಷ ಸರಕಾರ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಅನುದಾನ ಬಿಡುಗಡೆ ಮಾಡಿದ್ದು ಅದರಂತೆ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನೇಡು ತೋಪಗಳನ್ನು ನಿರ್ವಹಣೆ ಮಾಡಿದ್ದು ಆದರೆ ಈಗ ಹೂಸದಾಗಿ ಬಂದಂತಹ ಸಿಬ್ಬಂದಿಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಸಾವಳಗಿಯ ಅರಟಾಳ ಕೆರೆ,ತುಂಗಳ ಗ್ರಾಮದ ಮಾಳಿಂಗರಾಯ ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಯಾವುದೇ ತರಹದ ನಿರ್ವಹಣೆ ಇಲ್ಲದೆ ಗಿಡಗಳು ಹಾಳು ಆಗುತ್ತಿದ್ದು. ಹಳೆಯ ಸಿಬ್ಬಂದಿಗಳು ಶ್ರಮವಹಿಸಿ ಮಾಡಿದ ಕೆಲಸ ಹಾಳು ಮಾಡಿದಂತಾಗುತ್ತದೆ.
ಇನ್ನಾದರು ಸಿಬ್ಬಂದಿಗಳು ಅರಣ್ಯ ಬೆಳೆಸಲು ಶ್ರಮವಹಿಸಿ ಕೆಲಸ ಮಾಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ವರದಿ :ಸಚಿನ್ ಜಾದವ್.