ಬಂಡವಾಳಶಾಹಿ ಕಂಪನಿಗಳ ಮೇಲಿರುವ ಸರ್ಕಾರದ ಕಾಳಜಿ ರೈತರ ಮೇಲಿಲ್ಲ-ಎಮ್ ಎಸ್ ಹಡಪದ.
ಮುಂದುವರೆದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ

ಬಂಡವಾಳಶಾಹಿ ಕಂಪನಿಗಳ ಮೇಲಿರುವ ಸರ್ಕಾರದ ಕಾಳಜಿ ರೈತರ ಮೇಲಿಲ್ಲ-ಎಮ್ ಎಸ್ ಹಡಪದ.
– ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿ: ಹಡಪದ
– ಮುಂದುವರೆದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ
ಗಜೇಂದ್ರಗಡ: ಸತ್ಯಮಿಥ್ಯ (ಸೆ -15)
ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಚೀಟಿಯನ್ನು ನೀಡಿ ತ್ವರಿತಗತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ಬಂಡವಾಳಶಾಹಿ ಕಂಪನಿಗಳ ಮೇಲಿರುವ ಸರ್ಕಾರದ ಕಾಳಜಿ ರೈತರ ಮೇಲಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎಂ ಎಸ್ ಹಡಪದ ಹೇಳಿದರು.
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ- ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ತಹಶಿಲ್ದಾರರ ಕಚೇರಿ ಮುಂಭಾಗದಲ್ಲಿ ನಡೆದ ಹಗಲು- ರಾತ್ರಿ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ನೀಡುವ ಸರ್ಕಾರ, ಬಡ ಸಾಗುವಳಿದಾರರಿಗೆ ಉಳುಮೆ ಮಾಡಲು, ಜೀವನ ನಡೆಸಲು, ಹಕ್ಕುಪತ್ರ ನೀಡದೇ ಅವರಿಗೆ ಸಾಗುವಳಿಗೆ ಅವಕಾಶ ನೀಡದೇ ಒಕ್ಕಲೆಬ್ಬಿಸುವ ತಾರತಮ್ಯ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದರು.
ಕರ್ನಾಟಕ ಕೃಷಿಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಮಾತನಾಡಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಯಾವುದೇ ಕಾರಣಕ್ಕೂ ಅವರು ಸಾಗುವಳಿ ಮಾಡುತ್ತಿರುವ ಜಮೀನುಗಳಿಂದ ಒಕ್ಕಲೆಬ್ಬಿಸಬಾರದು ರೈತರ ರಕ್ಷಣೆಗೆ ಮುಂದಾಗಿ ತಕ್ಷಣವೇ ಸಾಗುವಳಿ ಚೀಟಿ ನೀಡಬೇಕು, ಹಕ್ಕುಪತ್ರ ನೀಡುವುದಾಗಿ ಲಿಖಿತ ವಾಗಿ ಭರವಸೆ ನೀಡಬೇಕು ಎಂದರು. ಇಲ್ಲವಾದ್ರೆ ಬಗರ್ ಹುಕುಂ ಸಮಿತಿ ಅಧ್ಯಕ್ಷರು ಆಗಿರುವ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ, ಪಿಎಸ್ಐ ಡಿ ಪ್ರಕಾಶ ಪ್ರತಿಭಟನೆಕಾರರ ಮನವೋಲಿಸಲು ಪ್ರಯತ್ನಿಸಿದರು ಆದರೆ ಪ್ರತಿಭಟನೆಕಾರರು ಸ್ಥಳಕ್ಕೆ ಶಾಸಕರು ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಅಹೋರಾತ್ರಿ ಧರಣಿ ಮುಂದುವರೆಯಿತು
ಧರಣಿ ಸತ್ಯಾಗ್ರಹದಲ್ಲಿ ಮುಖಂಡರಾದ ರೂಪೇಶ ಮಾಳೋತ್ತರ, ಪೀರು ರಾಠೋಡ, ಚೆನ್ನಪ್ಪ ಗುಗಲೋತ್ತರ, ದಾವಲಸಾಬ ತಾಳಿಕೋಟಿ, ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ಗಣೇಶ ರಾಠೋಡ, ಅನಿಲ್ ರಾಠೋಡ ರತ್ನವ್ವ ಮಾಳೋತ್ತರ, ವೀರಭದ್ರಪ್ಪ ಮಾಳೋತ್ತರ, ತಿರುಪತಿ ರಾಠೋಡ, ಅಂದಪ್ಪ ರಾಠೋಡ, ಯಂಕಪ್ಪ ಮಾಳೋತ್ತರ, ಶಿವಪ್ಪ ಮಾಳೋತ್ತರ, ದೀಪಲೆಪ್ಪ ಮಾಳೋತ್ತರ, ಬದ್ಯಪ್ಪ ಮಾಳೋತ್ತರ, ರೇಣವ್ವ ಗೂಗಲೋತ್ತರ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.