ದಿ. ಲಕ್ಷ್ಮಿ ಅರ್ಬನ್ ಬ್ಯಾಂಕ್ ಚುನಾವಣೆ- ಉಮೇದುವಾರರಿಂದ ಸುದ್ದಿಗೋಷ್ಠಿ.
ಗಜೇಂದ್ರಗಡ : ಸತ್ಯಮಿಥ್ಯ (ಡಿ -27).
ಕಳೆದೊಂದು ವಾರದಿಂದ ನಗರದ ಪ್ರತಿಷ್ಠಿತ ದಿ. ಲಕ್ಷ್ಮಿ ಅರ್ಬನ್ ಕೋ-ಆಫ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಕ್ಷೇತ್ರದ ಚುನಾವಣೆ ಪ್ರಕ್ರಿಯೇ ಭರ್ಜರಿಯಾಗಿ ನಡೆಯುತ್ತಿದೆ.ನಾಳೆ ರವಿವಾರ ಅಂತಿಮ ಹಂತ ಮತದಾನ ಪ್ರಕ್ರಿಯೇ ನಡೆಯಲಿದ್ದು. ಸಿದ್ದಣ್ಣ ಬಂಡಿ ಸೇರಿದಂತೆ ಡಾ. ಬಿ. ವ್ಹಿ. ಕಂಬಳ್ಯಾಳ, ಪವಾಡೆಪ್ಪ ಮ್ಯಾಗೇರಿ, ಕಲ್ಲಪ್ಪ ಸಜ್ಜನರ, ವಿರೇಶ ನಂದಿಹಾಳ, ಶಿದ್ದಲಿಂಗಪ್ಪ ಕನಕೇರಿ, ಸುರೇಶ ಚೆನ್ನಿ ಸೇರಿದಂತೆ ಒಟ್ಟು ಏಳು ಮಂದಿ ಉಮೇದುವಾರರಿಂದ ಇಂದು ಬಂಡಿ ಗಾರ್ಡನನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದಪ್ಪ ಬಂಡಿ. ಬ್ಯಾಂಕಿನ ಇತಿಹಾಸದಲ್ಲಿ ಚುನಾವಣೆ ನಡೆದದ್ದು ಬಹಳಷ್ಟು ಕಡಿಮೆ. ಬ್ಯಾಂಕಿಗೆ ಸಂಬಂಧಪಟ್ಟ ಬಹಳಷ್ಟು ಹಿರಿಯರು ಮತ್ತು ಹಿತೈಷಿಗಳ ಅಭಿಪ್ರಾಯ ಅವಿರೋಧ ಆಯ್ಕೆಯೇ ಆಗಿತ್ತು. ಆದರೆ ಪ್ರಜಾಪ್ರಭುತ್ವ ಎಲ್ಲರಿಗೂ ಸ್ಪರ್ಧೆಯ ಅವಕಾಶ ಕಲ್ಪಿಸಿದೆ ಆದ್ದರಿಂದ ಚುನಾವಣೆ ನಡೆಯುತ್ತಿದೆ.
ನಮ್ಮ ಬ್ಯಾಂಕ 35 ಲಕ್ಷ ರೂಪಾಯಿ ಬಂಡವಾಳದಿಂದ ಪ್ರಾರಂಭಗೊಂಡು ಇಂದು ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದೆ. ಇದಕ್ಕೆಲ್ಲ ಹಿರಿಯರ ಶ್ರಮ ಅನನ್ಯ.ಹಿರಿಯರ ಮಾರ್ಗದರ್ಶನದೊಂದಿಗೆ ಈಗಾಗಲೇ ನಾವೆಲ್ಲ ಉತ್ತಮ ಆಡಳಿತ ನೀಡಿದ್ದೇವೆ.ಊರಿನ ಅನೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸ್ಮಾರ್ಟ್ ಕ್ಲಾಸ್ ವಿತರಣೆ, ಬ್ಯಾಂಕ ಸದಸ್ಯರು ನಿಧನ ಹೊಂದಿದರೆ ಈಗಾಗಲೇ 5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ ಅದನ್ನು 10 ಸಾವಿರ ರೂಪಾಯಿಗೆ ಏರಿಸುವ ಗುರಿಹೊಂದಿದ್ದೇವೆ.ಈಗಾಗಲೇ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಅಲ್ಲದೇ ಪ್ರತಿ ವರ್ಷ ಇಬ್ಬರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುಲಾಗುತ್ತಿದೆ ಅದನ್ನು ಹೆಚ್ಚಿಗೆ ಮಾಡುವ ಉದ್ದೇಶ ಹೊಂದಿದ್ದೇವೆ.ಕೊರೋನ ಸಂದರ್ಭದಲ್ಲಿ ಬ್ಯಾಂಕಿನ ಬಡ ಸದಸ್ಯರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಪುರಸಭೆ ಸಿಬ್ಬಂದಿಗಳಿಗೆ ಸೇರಿದಂತೆ ಅನೇಕರಿಗೆ ಕಿಟ್ ಗಳನ್ನು ವಿತರಿಸುವ ಮೂಲಕ ಬ್ಯಾಂಕ್ ಸಹಕಾರಿಯಾಗಿದೆ. ಬ್ಯಾಂಕಿನ ಸಿಬ್ಬಂದಿಯ ಬದುಕಿನ ಭದ್ರತೆಗಾಗಿ 1ಲಕ್ಷ ರೂಪಾಯಿ ಬರುವಹಾಗೆ ಮಾಡಲಾಗಿದೆ. ಅದನ್ನು 5 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ.ಆದ್ದರಿಂದ ಪ್ರತಿ ಮತದಾರ ತಮ್ಮ ಹಕ್ಕು ಚಲಾಯಿಸಬೇಕು. ಬ್ಯಾಂಕಿನ ಉತ್ತಮ ಆಡಳಿತಕ್ಕಾಗಿ ನಮ್ಮ ಪ್ಯಾನಲ್ಲಿನೆ ಎಲ್ಲ ಏಳು ಸದಸ್ಯರಿಗೆ ಮತ ನೀಡುವ ಮೂಲಕ ಆಯ್ಕೆ ಮಾಡಲು ಕೋರಿಕೊಂಡರು.
ಡಾ. ಬಿ. ವ್ಹಿ. ಕಂಬಳ್ಯಾಳ ಮಾತನಾಡಿ. ಉತ್ತರಕರ್ನಾಟಕದಲ್ಲಿಯೇ ಶತಮಾನ ಕಂಡದ್ದು ನಮ್ಮ ಬ್ಯಾಂಕ್ ಎನ್ನಲು ಹೆಮ್ಮೆ ಎನಿಸುತ್ತದೆ. ಹಿಂದಿನ ಹಿರಿಯರು ಸ್ವಂತ ಬಂಡವಾಳ ಹಾಕಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ. ಈಗಾಗಲೇ ಉತ್ತಮ ಪಾರದರ್ಶಕ ಆಡಳಿತ ನೀಡುತ್ತಿರುವ ನಮ್ಮ ತಂಡವನ್ನು ಮತದಾರ ಬೆಂಬಲಿಸಲು ಕೋರಿಕೊಂಡರು.
ಎಸ್. ಕೆ. ಚೆನ್ನಿ ಮಾತನಾಡಿ. ನಮ್ಮ ಬ್ಯಾಂಕ್ ರಾಷ್ಟ್ರಿಯ ಬ್ಯಾಂಕಗಳಿಂತ ಕಡಿಮೆ ಇಲ್ಲಾ. ಈಗಾಗಲೇ ಎಟಿಎಂ, ಫೋನ್ ಫೆ, ಸ್ಕ್ಯಾನರ್ ಸೇವೆಯನ್ನು ಒದಗಿಸುವ ಮೂಲಕ ಆದುನಿಕ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ನಮ್ಮ ಬ್ಯಾಂಕ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಮುನ್ನಡೆಯುತ್ತಿದೆ ಅದಕ್ಕೆ ಆಡಳಿತ ಮಂಡಳಿ ಶ್ರಮವು ಇದೆ ಎಲ್ಲವನ್ನು ಮನಗಂಡು ಮತದಾರ ನಮ್ಮನ್ನ ಬೆಂಬಲಿಸಬೇಕು. ಒಟ್ಟು 13 ಸದಸ್ಯರಲ್ಲಿ ಈಗಾಗಲೇ 6 ಜನರ ಆಯ್ಕೆ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನೂ 7 ಸ್ಥಾನಗಳಿಗೆ 8 ಜನ ಸ್ಪರ್ಧೆ ಇದೆ ಇದರಲ್ಲಿ ನಮ್ಮ 7 ಜನರ ತಂಡಕ್ಕೆ ಮತ ನೀಡಲು ಕೋರಿಕೊಂಡರು.
ಈ ಸಂದರ್ಭದಲ್ಲಿ ಬಿ. ಎಂ. ಸಜ್ಜನರ, ಚಂಬಣ್ಣ ಚವಡಿ, ಈಶಣ್ಣ ಮ್ಯಾಗೇರಿ, ಪ್ರಬಣ್ಣ ಚವಡಿ, ಬಿ. ವಿ. ವಾಲಿ, ಟಿ ಎಸ್. ರಾಜೂರ, ಸುಗೀರಯ್ಯ ಸುಗಿರಯ್ಯನಮಠ, ಶಿವುಕುಮಾರ ಕೊರಧಾನ್ಯಮಠ, ಉಮೇಶ ಮೆಣಸಗಿ, ನಾಗಯ್ಯ ಗೊಂಗಡಶಟ್ಟಿ, ಬಸವರಾಜ ಸೂಡಿ, ಅಂಬರೀಶ್ ಅರಳಿ,ಮೋಹನ್ ಕನಕೇರಿ,ಬಸವರಾಜ ಪುರ್ತಗೇರಿ,ರಾಜು ಸಾಂಗ್ಲಿಕರ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದರು.
ವರದಿ : ಚನ್ನು. ಎಸ್.