
ಶಾಂತಗೇರಿ ಪಂಚಾಯತ್ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಬಿಜೆಪಿ ಮಡಿಲಿಗೆ.

ರೋಣ/ಸತ್ಯಮಿಥ್ಯ (ಸೆ-29).
ರೋಣ ಮತಕ್ಷೇತ್ರದ ಶಾಂತಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಬಿಜೆಪಿ ತನ್ನದಾಗಿಸಿಕೊಂಡಿದೆ. ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಪಡಿಯಪ್ಪ ಮಾದರ ಆಯ್ಕೆಯಾಗಿದ್ದಾರೆ.
ಲಕ್ಷ್ಮಿಬಾಯಿ ಭೀಮಶಿ ಲಮಾಣಿ ರಾಜೀನಾಮೆಯಿಂದ ತೆರುವಾಗಿದ್ದ ಸ್ಥಾನಕ್ಕೆ. ಬಿಜೆಪಿ ಪಕ್ಷದಿಂದ ಹನಮಂತಪ್ಪ ಮಾದರ ಕಾಂಗ್ರೇಸ್ ಪಕ್ಷದಿಂದ ಭೀಮಪ್ಪ ರಾಮಣ್ಣ ಲಮಾಣಿ ಸ್ಪರ್ಧೆಸಿದ್ದರು. ಒಟ್ಟು 20 ಸದಸ್ಯರಲ್ಲಿ ಬಿಜೆಪಿ ಪರ 12, ಕಾಂಗ್ರೇಸ್ ಪರ 6, 1ಅಸಿಂದು 1 ಗೈರು ಆಗುವ ಮೂಲಕ ಅಂತಿಮವಾಗಿ ಬಿಜೆಪಿ ಪರ ಅಭ್ಯರ್ಥಿ ಹನಮಂತಪ್ಪ ಗೆಲುವು ಸಾದಿಸಿದರು.
ಈ ಗೆಲುವಿನ ಮೂಲಕ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರು ಆಡಳಿತದಲ್ಲಿದ್ದರು.ಶಾಂತಗೇರಿ ಗ್ರಾಮ ಪಂಚಾಯತಿಯಲ್ಲಿ ಈ ಮೊದಲು 9 ಜನ ಕಾಂಗ್ರೇಸ್ ಬೆಂಬಲಿತ ಸದಸ್ಯರಿದ್ದರು ಅಂತಿಮವಾಗಿ ಸದ್ಯ ಕಾಂಗ್ರೇಸ್ ಸದಸ್ಯರ ಬಲ 6 ಕ್ಕೆ ಇಳಿದಿರುವದು. ಬಿಜೆಪಿ ತನ್ನ ಸಂಘಟನಾ ಬಲ ಹೆಚ್ಚಿಸಿಕೊಂಡಿದೆ ಎನ್ನಲಾಗಿದೆ.
ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲು ಹಚ್ಚಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರೋಣ ಮಂಡಲದ ಅಧ್ಯಕ್ಷರಾದ ಉಮೇಶ ಮಲ್ಲಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳದ ಆರ್ ಕೆ ಚೌಹಾಣ್ ರಾಜ್ಯ ಎಸ್ ಟಿ ಮೋರ್ಚ ಕಾರ್ಯಕಾರಣಿ ಸದಸ್ಯರಾದ ಹನುಮಂತಪ್ಪ ಹಟ್ಟಿಮನಿ, ಬಾಳು ಬೋಸ್ಲೆ, ರಮೇಶ ವಕ್ಕರ್, ಶ್ರೀಶೈಲ್ ಕಾಟಿ, ಮಲ್ಲು ಕುರಿ, ಹುತ್ತಪ್ಪ ಮಾದರ, ಮಹೇಶ ಪೂಜಾರ, ಬಸನಗೌಡ ಗೌಡ ಗೌಡರ, ಭೀಮಸಿ ರಾಠೋಡ, ಬಸವರಾಜ ಮಣ್ಣೂರ, ಶಿವು ಬೊಮ್ಮಸಾಗರ, ಮುದಿಯಪ್ಪ ಹಳಗೇರಿ, ಶಾಂತಪ್ಪ ಹಟ್ಟಿಮನಿ, ಬಸನಗೌಡ ಗುಂಡನಗೌಡ್ರು,ಪಡೆಯಪ್ಪ ಹೊಸಮನಿ,ಪಡೆಯಪ್ಪ ಮಾದರ, ಮುನ್ನಸಾಬ ರಾಜಾಖಾನ್, ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಜನಪ್ರತಿನಿಧಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ಸುರೇಶ ಬಂಡಾರಿ.