
ಬಾಲ್ಯ ಭರತ ನಾಟ್ಯ ಕಲಾವಿದೆಗೆ ಸನ್ಮಾನ
ಗದಗ:ಸತ್ಯಮಿಥ್ಯ(ಸೆ-12).
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಯುಷ್ಮಾಕಂ ಸಂಸ್ಕೃತಂ, ಸಂಸ್ಕೃತ ಶ್ರಾವಣಿ ಸಮಾರೋಪ ಸಮಾರಂಭದಲ್ಲಿ ಕು.ಶ್ರೀಯಾ ಗಣೇಶ. ಸುಲ್ತಾನಪುರ ಇವಳು ಭರತ ನಾಟ್ಯವನ್ನು ಪ್ರಸ್ತುತ ಪಡಿಸಿದ ನಿಮಿತ್ತವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕು.ಶ್ರೀಯಾ ಚಿಕ್ಕ ವಯಸ್ಸಿನಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಿತೈಷಿಗಳು ಶಿಕ್ಷಕರು ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾದಿಪತಿಗಳು ಪೂಜ್ಯ ಕಲ್ಲಯ್ಯಜ್ಜನವರು ಸಂಸ್ಕೃತ ಶಿಕ್ಷಕರು ವಿವಿಧ ಗಣ್ಯರು ಭಾಗವಹಿಸಿದ್ದರು.
ವರದಿ :ಮುತ್ತು ಗೋಸಲ.