
ಪೂರ್ವಸಿದ್ಧತೆ ಇಲ್ಲದ ಜಾತಿಗಣತಿ/ನಾಚಿಗೆಗೇಡು – ಉಮೇಶ ಚನ್ನು ಪಾಟೀಲ್ ಆಕ್ರೋಶ.
ಗಜೇಂದ್ರಗಡ/ಸತ್ಯಮಿಥ್ಯ (ಸೆ-27).
ರಾಜ್ಯ ಕಾಂಗ್ರೆಸ್ ಸರ್ಕಾರ ಯಾವದೇ ಪೂರ್ವಸಿದ್ಧತೆ ಇಲ್ಲದೆ ದುಂದುವೆಚ್ಚ ಮಾಡಿ ತರಾತುರಿಯಲ್ಲಿ ಜಾತಿ ಗಣತಿ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ ಅಂತ ಬಿಜೆಪಿ ಯುವ ಮುಖಂಡ ಉಮೇಶ ಚೆನ್ನು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಜಾತಿಗಣತಿ ಆರಂಭಗೊಂಡು ಸರಿಯಾಗಿ 5 ದಿನಗಳು ಕಳೆದರೂ ಕೂಡಾ ಇನ್ನೂ ರಾಜ್ಯಾಧ್ಯಂತ ಸರ್ವರ್ ಸಮಸ್ಯೆ, ಜಾತಿಗಣತಿ ಅಪ್ಲಿಕೇಶನ್ ಡೌನ್ಲೋಡ್ ಆಗದೆ ಇರುವದು, UHID ನಂಬರ್ ಗಳಲ್ಲಿ ಸಮಸ್ಯೆ, ಮನೆಗಳ ಲೊಕೇಶನ್ ತಪ್ಪಾಗಿ ತೋರಿಸುತ್ತಿರುವುದು ಜಾತಿಗಣತಿ ಮಾಡಲು ನಿಯೋಜನೆ ಮಾಡಿರುವ ಶಿಕ್ಷಕರನ್ನ ಹೈರಾಣಾಗಿಸಿವೆ.
ರಾಜ್ಯ ಸರ್ಕಾರದ ಈ ನಡೆಯಿಂದ ಜಾತಿಗಣತಿ ಹೋದ ಶಿಕ್ಷಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ, ದಿನಕ್ಕೆ 10 ಲಕ್ಷ ಮನೆಗಳನ್ನು ಗಣತಿ ಮಾಡಬೇಕು ಎಂದು ಟಾರ್ಗೆಟ್ ಇಟ್ಟುಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ 1 ಲಕ್ಷ ಮನೆಗಳನ್ನು ಕೂಡಾ ಗಣತಿ ಮಾಡಲು ಆಗುತ್ತಿಲ್ಲ ಇದು ಸರ್ಕಾರದ ಆಡಳಿತ ಯಂತ್ರ ಕುಸಿದಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಕಿಡಿಕಾರಿದ ಅವರು ಜಾತಿಗಳನ್ನ ಒಡೆಯುವ ಉದ್ದೇಶದಿಂದಲೇ ಜಾತಿಗಣತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ/ಸಂ.