ಜಿಲ್ಲಾ ಸುದ್ದಿ

ವಿಶೇಷ ಅಂಗನವಾಡಿ ರೂಪಿಸುವಲ್ಲಿ ವಿಜಯಲಕ್ಷ್ಮಿ ಪಾಟೀಲ ಪಾತ್ರ ಅನನ್ಯ.

Share News

ವಿಶೇಷ ಅಂಗನವಾಡಿ ರೂಪಿಸುವಲ್ಲಿ ವಿಜಯಲಕ್ಷ್ಮಿ ಪಾಟೀಲ ಪಾತ್ರ ಅನನ್ಯ.

ಗ್ರಾಮದ ಮಕ್ಕಳ ಭವಿಷ್ಯವನ್ನು ರೂಪಿಸುವ ಅಂಗನವಾಡಿ ಶಿಕ್ಷಕಿ ವಿಜಯಲಕ್ಷ್ಮಿ ಪಾಟೀಲ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ

ವ್ಯಾಸನಂದಿಹಾಳ : ಸತ್ಯಮಿಥ್ಯ (ಆ-03)

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತೆ ಪ್ರತಿಯೊಬ್ಬ ವ್ಯಕ್ತಿಯ ಶಿಕ್ಷಣವು ಪ್ರಾರಂಭವಾಗುವುದು ಅಂಗನವಾಡಿ ಶಾಲೆಗಳಿಂದ.  ಅಂಗನವಾಡಿ ಶಾಲೆಯಲ್ಲಿ ಕಲಿಯುವ ಪ್ರತಿಯೊಬ್ಬ ಮಕ್ಕಳ ಭವಿಷ್ಯವನ್ನು ರೂಪಿಸುವ ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಮಹತ್ತರ ಜವಾಬ್ದಾರಿಯನ್ನು ಅಂಗನವಾಡಿ ಶಿಕ್ಷಕಿಯರ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಶಿಕ್ಷಕಿಯರಲ್ಲಿ ಒಬ್ಬರಾದ ಲಿಂಗಸೂರು ಜಿಲ್ಲೆಯ ಮುದಗಲ ತಾಲೂಕಿನ ವ್ಯಾಸನಂದಿಹಾಳದ ಗ್ರಾಮದ ಅಂಗನವಾಡಿ ಶಿಕ್ಷಕಿಯರಾದ ವಿಜಯಲಕ್ಷ್ಮಿಪಾಟೀಲ ಅವರು ಸಾಕ್ಷಿಯಾಗಿದ್ದಾರೆ.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆಯನ್ನು ಆಸಕ್ತಿಯುತವಾಗಿ ಮಾಡಲು ಹಲವಾರು ವಿನೂತನವಾದಂತ ಕ್ರಮಗಳನ್ನು ಕೈಗೊಂಡು ಮಕ್ಕಳನ್ನು ಅದರಲ್ಲಿ ಪಾಲ್ಗೊಳ್ಳುವುದರ ಮೂಲಕ ಭವಿಷ್ಯದಲ್ಲಿ ಗ್ರಾಮದ ಮಕ್ಕಳ ಶಿಕ್ಷಣ ಕಲಿಯುವಲ್ಲಿ ಆಸಕ್ತಿಯನ್ನು ಮೂಡಿಸುತ್ತಿದ್ದಾರೆ.

ಅಲ್ಲದೆ ಗ್ರಾಮದಲ್ಲಿ ಅವಿದ್ಯಾವಂತರಿಗೆ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸುವುದರ ಮೂಲಕ ಶಿಕ್ಷಣವನ್ನು ಕೊಡಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿದ್ದಾರೆ.

ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣದೊಂದಿಗೆ ಆಟ, ಹಾಡು, ಕಥೆ ಹೇಳುವ ಮೂಲಕ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಾರೆ.

ಆರೋಗ್ಯ ತಪಾಸಣೆಯನ್ನು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಗೆ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆಗಳನ್ನು ಒದಗಿಸಲು ಆರೋಗ್ಯ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿದ್ದಾರೆ ಪೌಷ್ಟಿಕಾಂಶದ ಆಹಾರ ಪೂರೈಕೆಯನ್ನು ಅಂಗನವಾಡಿ ಕೇಂದ್ರದಲ್ಲಿ ಮಾಡುವುದರ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುತ್ತಿದ್ದಾರೆ.

ಅಂಗನವಾಡಿ ಕೇಂದ್ರವನ್ನು ಜಿಲ್ಲೆಯ ಹಾಗೂ ತಾಲೂಕಿನ ಮಾದರಿ ಅಂಗನವಾಡಿ ಕೇಂದ್ರವನ್ನಾಗಿಸುವ ಮನೋಭಾವನೆಯನ್ನು ಹೊಂದಿರುವವರು ಅಂಗನವಾಡಿ ಕೇಂದ್ರದ ಗೋಡೆಗಳ ಮೇಲೆ ಪ್ರಾಣಿಗಳ ಚಿತ್ರ, ಅಕ್ಷರಮಾಲೆಗಳ ಬರವಣಿಗೆ, ಮಕ್ಕಳು ಶಿಕ್ಷಣವನ್ನು ಕಲಿಯಲು ಆಟೊಟಗಳ ಸಾಮಗ್ರಿಗಳು, ಸೇರಿದಂತೆ ಹಲವಾರು ವಿನೂತನವಾದ ಕ್ರಮಗಳನ್ನು ಕೈಗೊಂಡು ನಮ್ಮ ದೇಶದ ಮೂಲ ಬುನಾದಿಯಾಗಿರುವ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅರ್ಥಪೂರ್ಣವಾಗಿ ಮಕ್ಕಳಿಗೆ ಕಲಿಸುವುದರೊಂದಿಗೆ ಗ್ರಾಮದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪಾತ್ರವಹಿಸುತ್ತಿದ್ದಾರೆ.

ಗ್ರಾಮದಲ್ಲಿ ಮಕ್ಕಳ ಶಿಕ್ಷಣ ಕಲಿಯುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅವರು ಗ್ರಾಮದಲ್ಲಿ ಅವಿದ್ಯಾವಂತರು ಇರದ ಹಾಗೆ ಗ್ರಾಮದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು ಎಂಬುವ ಮನೋಭಾವನೆಯನ್ನು ಹೊಂದಿರುವವರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಆಸಕ್ತಿಯುತವಾಗಿ ಶಿಕ್ಷಣವನ್ನು ಕಲಿಯಲು ಭದ್ರಬುನಾದಿಯನ್ನು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ವರದಿ:ಮುತ್ತು ಗೋಸಲ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!