
ನೇಕಾರರಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ – ಎಸ್ ಎಸ್ ಡೊಳ್ಳಿನ ಅಭಿಮತ.
ಗಜೇಂದ್ರಗಡ:ಸತ್ಯಮಿಥ್ಯ (ಆ-08).
ಜೇಡರ ದಾಸಿಮಯ್ಯನವರನ್ನು ಮೊದಲ ವಚನಕಾರ ಎಂದು ಇತಿಹಾದಿಂದ ತಿಳಿದುಬರುತ್ತದೆ. 12 ನೇ ಶತಮಾನದ ಸಮಕಾಲಿನರಾಗಿರುವ ದಾಸಿಮಯ್ಯ ವೃತ್ತಿಯಿಂದ ನೇಕಾರರಾಗಿದ್ದಾರು.ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ.ಈತನ ಹೆಂಡತಿ ದುಗ್ಗಲೆ ಮಹಾ ಶಿವಶರಣೆಯಾಗಿದ್ದಳು. ಎಂದು ಸಮಸ್ತ ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷರಾದ ಎಸ್. ಎಸ್. ಡೊಳ್ಳಿನ ನುಡಿದರು.
ಅವರು ನಿನ್ನೆ ಗಜೇಂದ್ರಗಡ ನಗರದಲ್ಲಿ ಜರುಗಿದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಜೇಡರ ದಾಸಿಮಯ್ಯನವರ ಚಿತ್ರಪಟಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ. ನೇಕಾರಿಕೆ ನಮ್ಮ ಕುಲಕಸಬು ಆಧುನಿಕ ಭರಾಟೆಗೆ ಸಿಕ್ಕು ಅವಸಾನದ ಅಂಚಿನಲ್ಲಿದೆ. ನೇಕಾರರಿಗೆ ಸರ್ಕಾರದ ಪ್ರೋತ್ಸಾಹ ನೀಡುವ ಮೂಲಕ ನೇಕಾರರ ಬದುಕನ್ನು ಹಸನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಬುಟ್ಟಾನವರ. ರೈತ, ಸೈನಿಕ ಜೊತೆಗೆ ನೇಕಾರ ದೇಶದ ಬೆನ್ನೆಲುಬೆಂದರೆ ತಪ್ಪಾಗಲಾರದು.ಆದರೆ ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿನ ನೇಕಾರನ ಪರಿಸ್ಥಿತಿ ಬಹಳಷ್ಟು ಶೋಚನಿಯವಾಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ನೇಕಾರರ ಪರಿಸ್ಥಿತಿ ಸುಧಾರಿಸಲು ಯೋಜನೆಗಳನ್ನು ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ಗುಗ್ಗರಿ, ಅರವಿಂದ ಕವಡಿಮಟ್ಟಿ, ಅನಿಲ ಡೊಳ್ಳಿನ, ಬಸಯ್ಯ ಗೊಂಗಡಶೆಟ್ಟಿಮಠ,ಮೋಹನ ತಟ್ಟಿ,ದೇವಣ್ಣ ಬೆನಕಲ್, ನಾಗೇಶ ಕವಡಿಮಟ್ಟಿ, ಶರಣು ಕುಂಬಾರ, ಅಂಬರೀಶ ಕವಡಿಮಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಸುರೇಶ ಬಂಡಾರಿ.