
ಸಾವಳಗಿ:ಸತ್ಯಮಿಥ್ಯ (ಜೂಲೈ -07)
ವಿದ್ಯಾರ್ಥಿಗಳಿಗೆ ಬಾಗಲಕೋಟೆಯ ಅಂಕಿತಾ ಮಾದರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದು. ವಿದ್ಯಾರ್ಥಿಗಳು ಶ್ರಮ ಪಡಬೇಕು ಹಾಗೂ ಪ್ರಾಮಾಣಿಕತೆ ಮತ್ತು ಪರಿಶ್ರಮ ಮಾಳಿ ಸಮಾಜದ ಗುಣಲಕ್ಷಣ. ಬುದ್ಧಿ ಬಲ ಮತ್ತು ಪ್ರತಿಭೆ ಮೂಲಕ ಮಾಳಿ ಸಮಾಜ ಸಶಕ್ತತೆ ಪಡೆಯುತ್ತಿದೆ, ಮಾಳಿ ಸಮುದಾಯದ ಭವನಕ್ಕೆ 10 ಲಕ್ಷ ರೂಪಾಯಿ ನಾನು ಶಾಸಕ ಇದ್ದ ಸಂದರ್ಭದಲ್ಲಿ ಕೊಟ್ಟಿದ್ದೇನೆ ಎಂದು ಮಾಜಿ ಶಾಸಕ ಆನಂದ್ ನ್ಯಾಮಗೌಡ ಹೇಳಿದರು.
ನಗರದ ಮಾಳಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಮಾಳಿ ಸಮಾಜ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಸಂತೋಷ್ ಬಡಕಂಬಿ ಮಾತನಾಡಿ, ಸಂಘಟನೆ ಮೂಲಕ ಸಮಾಜದ ಮಕ್ಕಳಿಗೆ ಬುದ್ಧಿಬಲ ಹಾಗೂ ಪಾಲಕರಿಂದ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಜಾಗರೂಕತೆಯಿಂದ ಜವಾಬ್ದಾರಿ ನಿರ್ವಹಿಸುವ ಕೆಲಸ ಸಂಘಟನೆ ಮೂಲಕ ಪಡೆಯಬೇಕು, ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು, ಶಿಕ್ಷಣ ಕ್ರಾಂತಿ ಮೂಡಿಸಿದ ಫುಲೆ ದಂಪತಿಗಳ ಪ್ರೇರಣೆ ಇಂದಿನ ಮಕ್ಕಳು ಹಾಗೂ ಪಾಲಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿ ರೈತ ಮುಖಂಡರು ಬಿ. ಎಸ್. ಸಿಂಧೂರ, ರಾಜು ಮೇಲಿನಕೇರಿ. ಅನೇಕರು ಮಾತನಾಡಿದರು.
ದಿವ್ಯ ಸಾನಿಧ್ಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಕಂಕಾಳೆ ಕನ್ಸ್ಟ್ರಕ್ಷನ್ ಲಿ. ವ್ಯವಸ್ಥಾಪಕ ನಿರ್ದೇಶಕ ಕಾಶಿನಾಥ್ ಕಂಕಾಳೆ, ನೌಕರರ ಸಂಘದ ಅಧ್ಯಕ್ಷ ಬಸವರಾಜ ತು. ಮಾಳಿ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಕವಿತಾ ಪಾಟೋಳ್ಳಿ, ಜಿ ಎಮ್ ಬುದ್ನಿ, ಸಿದ್ದಪ್ಪ ಮೆಂಡಿಗೇರಿ, ಬಸವರಾಜ .ಮಾ. ಮಾಳಿ, ಗಜಾನನ ಮಾಳಿ, ಮಹಾಂತೇಶ ಮಾಳಿ, ಅಭಯಕುಮಾರ ನಾಂದ್ರೇಕರ, ಸುಭಾಷ್ ಪಾಟೋಳ್ಳಿ, ಬಸವರಾಜ ಬಾಳಿಕಾಯಿ, ಬಸವರಾಜ ಪರಮಗೌಡ, ಶ್ರೀಧರ್ ಕನ್ನೂರ, ಬಸವರಾಜ .ತು .ಮಾಳಿ, ಶ್ರೀಮತಿ ಪೂರ್ಣಿಮಾ ಮಾಳಿ, ಭೀಮು ತುಳಜಪ್ಪ ಮಾಳಿ, ಗ್ರಾಮ ಪಂಚಾಯತ ಸದಸ್ಯರು, ಮಾಳಿ ಸಮಾಜದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಾಳಿ ಸಮಾಜದವರು ಇಂದಿನ ಯುಗದಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ನಮ್ಮ ಮಾಳಿ ಸಮಾಜದವರನ್ನು ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಆಯ್ಕೆ ಮಾಡೋಣ ನಮ್ಮ ನೋವುಗಳನ್ನು ಹೇಳಿಕೊಳ್ಳೋಣ,
-ಸಂತೋಷ್ ಬಡಕಂಬಿ. ವಿಶೇಷ ಉಪನ್ಯಾಸಕ ಅಥಣಿ.