ಕಾಂಕ್ರೀಟ್ ಕಾಡುಗಳಿಂದ ವಾತಾವರಣ ಕಲುಷಿತ – ಕಳಕಪ್ಪ ಬಂಡಿ.
ಗಿಡಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಶುದ್ಧ ಗಾಳಿಯನ್ನು ಕೊಡುಗೆಯಾಗಿ ನೀಡೋಣ.

ಗಜೇಂದ್ರಗಡ – ಸತ್ಯ ಮಿಥ್ಯ (ಜು -14).
ವನಮಹೋತ್ಸವ ಅಂಗವಾಗಿ ಮಾಜಿ ಸಚಿವ ಕಳಕಪ್ಪ ಬಂಡಿಯವರ ಗೃಹ ಕಚೇರಿಯಲ್ಲಿಂದು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾಂಕೇತಿಕವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ. ಹೆಚ್ಚುತ್ತಿರುವ ಕಾಂಕ್ರೀಟ್ ಕಾಡಿನಿಂದ ಶುದ್ಧವಾದ ಗಾಳಿಯ ಕೊರತೆಯಾಗುತ್ತಿದೆ. ಆಮ್ಲಜನಕದ ಕೊರತೆಯಿಂದ ಮನುಷ್ಯ ಅನಾರೋಗ್ಯಕ್ಕೆ ಇಡಾಗುತ್ತಿದ್ದಾನೆ. ಶುದ್ಧವಾದ ಗಾಳಿ ಸೇವನೆಗೆ ವಾಯುವಿಹಾರಕ್ಕೆ ಊರ ಹೊರಗಡೆ ಹೋದರೆ ಕೂರಲು ಒಂದು ಗಿಡದ ನೆರಳು ಸಿಗುವುದು ಕಷ್ಟ ಸಾಧ್ಯ ಆದ್ದರಿಂದ ಗಿಡಗಳನ್ನು ನೆಡುವ ಮುಖಾಂತರ ಈ ವಾತಾವರಣ ಶುದ್ಧವಾಗಿಸುವ ಕರ್ತವ್ಯ ನಮ್ಮದು ಈ ಮುಖಾಂತರ ಮುಂದಿನ ಪೀಳಿಗೆಗೆ ಒಳ್ಳೆಯ ಕೊಡುಗೆ ನೀಡೋಣ ಎಂದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ಪುರಸಭೆ ಪ್ರತಿಯೊಬ್ಬ ಬಿಜೆಪಿ ಸದಸ್ಯರಿಗೆ ಹಾಗೂ ಪ್ರಮುಖ ಮುಖಂಡರಿಗೆ ತಲಾ 10 (ಹಲಸಿನ ಹಣ್ಣಿನ )ಗಿಡಗಳನ್ನು ನೀಡಿ ಅವುಗಳನ್ನು ಬೆಳೆಸುವ ಜವಾಬ್ದಾರಿ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಅಶೋಕ ವನ್ನಾಲ, ಭಾಸ್ಕರ್ ರಾಯಬಾಗಿ, ಅರಣ್ಯಧಿಕಾರಿ ಹಕ್ಕಿ, ರವೀಂದ್ರ ಸಿಂಗ್ರಿ, ಅಂಬರೀಶ ಅರಳಿ, ಬುಡ್ಡಪ್ಪ ಮುಲಿಮನಿ, ಯಮನೂರಪ್ಪ ತೀರಕೋಜಿ, ರೂಪಲೇಶ್ ರಾಠೋಡ್, ವೀರಪ್ಪ ಪಟ್ಟಣಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಭಂಡಾರಿ.