
ಏರಿದ ಕೃಷ್ಣಾ ನದಿ ನೀರಿನ ಮಟ್ಟ: ಟಕ್ಕೋಡ- ಜಮಖಂಡಿ ರಸ್ತೆ ಬಂದ್ ಆಗುವ ಆತಂಕ.
ಪೋಟೋ ವಿವರ: ಜಮಖಂಡಿ ಸಾವಳಗಿ ಸಂಚಾರ ಕಲ್ಪಿಸುವ ರಸ್ತೆ ಮಾರ್ಗ ಮಧ್ಯೆ ಟಕ್ಕೋಡ ಕ್ರಾಸ ಹತ್ತಿರ ನೀರು ಬಂದಿರುವುದು.
ಸಾವಳಗಿ:ಸತ್ಯಮಿಥ್ಯ (ಆ-24).
ಕೃಷ್ಣಾ ನದಿಯ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರಲ್ಲಿ ಜಮಖಂಡಿ ತಾಲೂಕಿನ ಮುತ್ತೂರು, ಕಂಕಣವಾಡಿ, ಗ್ರಾಮವೇ ಜಲಾವೃತವಾಗಿವೆ. ಹಲವಾರು ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು, ಮನೆಗಳು ಜಲಾವೃತಗೊಂಡಿವೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಜಮಖಂಡಿ ತಾಲೂಕಿನ ಸಾವಳಗಿ ಜಮಖಂಡಿ ಸಂಚಾರ ಕಲ್ಪಿಸುವ ರಸ್ತೆ ಇದ್ದಾಗಿದ್ದು, ಮಾರ್ಗ ಮಧ್ಯೆ ಟಕ್ಕೋಡ ಕ್ರಾಸನಲ್ಲಿ ರಸ್ತೆಯ ಮೇಲೆ ನೀರು ಬಂದಿರುವುದು. ಇನ್ನಷ್ಟು ಪ್ರವಾಹ ಬಂದರೆ ಜಮಖಂಡಿ ಸಾವಳಗಿ ಸಂಚಾರ ಬಂದ್ ಆಗುವ ಸಾದ್ಯತೆ ಇದೆ.
ಕೃಷ್ಣಾ ನದಿಯು ಪ್ರವಾಹ ಭೀಕರವಾಗಿದೆ ಅದರಲ್ಲೂ ಸಾಕಷ್ಟು ಮನೆಗಳು ಗ್ರಾಮಗಳು ಜಲಾವೃತಗೊಂಡಿವೆ ಇದರಿಂದ ಜನರು ಕಾಳಜಿ ಕೇಂದ್ರದ ಸ್ಥಾಪಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
ವರದಿ :ಸಚಿನ್ ಜಾದವ್.