ರಾಷ್ಟ್ರೀಯ ಸುದ್ದಿ

16 ಸಾವಿರ ಟನ್‌ ರಸಗೊಬ್ಬರ ರಾಜ್ಯಕ್ಕೆ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ

Share News

ಕೇಂದ್ರಕ್ಕೆ ಕರ್ನಾಟಕ ಬಿಜೆಪಿ ಸಂಸದರ ನಿಯೋಗ.

16 ಸಾವಿರ ಟನ್‌ ರಸಗೊಬ್ಬರ ರಾಜ್ಯಕ್ಕೆ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ

ನವದೆಹಲಿ:ಸತ್ಯಮಿಥ್ಯ (ಜು-28)

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರನ್ನು ಕರ್ನಾಟಕ ಬಿಜೆಪಿ ಸಂಸದರ ನಿಯೋಗದೊಂದಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಭೇಟಿಯಾಗಿ ರಾಜ್ಯದಲ್ಲಿ ರಸಗೊಬ್ಬರದ ವಿತರಣೆಯಲ್ಲಿ ಆಗಿರುವ ಗೊಂದಲ ಕುರಿತು ಸಚಿವರೊಂದಿಗೆ ಚರ್ಚಿಸಿದರು.

 

ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಖಾರಿಫ್ ಋತುವಿಗೆ ಕರ್ನಾಟಕ ರಾಜ್ಯ 6.30 ಲಕ್ಷ ‌ಮೆಟ್ರಿಕ್ ಟನ್ ಯೂರಿಯಾ ಪೂರೈಸಲು ಕೊರಲಾಗಿತ್ತು. ರಾಜ್ಯದ ರೈತರ‌ ಹಿತದೃಷ್ಟಿಯಿಂದ ಕೇಂದ್ರ ರಸಗೊಬ್ಬರ ಇಲಾಖೆ ಜುಲೈ ಅಂತ್ಯಕ್ಕೆ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ರಾಜ್ಯದಲ್ಲಿ‌ ಇಲ್ಲಿಯವರೆಗೆ 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಮಾರಾಟವಾಗಿದೆ. 1.65 ಲಕ್ಷ ಮೆಟ್ರಿಕ್ ಟನ್‌ ಯೂರಿಯಾ ರಾಜ್ಯದ ಗೋದಾಮಿನಲ್ಲಿ ದಾಸ್ತಾನು ಇರುವುದಾಗಿ ಮಾಹಿತಿ ನೀಡಿದರು ಜೊತೆಗೆ ಈಗಾಗಲೇ ಸುಮಾರು 16 ಸಾವಿರ ಟನ್‌ ರಸಗೊಬ್ಬರವನ್ನು ರಾಜ್ಯಕ್ಕೆ ಕಳುಹಿಸಿ ಕೊಡುತ್ತಿದ್ದೇವೆ ಎಂದು ಸಚಿವರು ನಮ್ಮ ನಿಯೋಗಕ್ಕೆ ವಿವರ ನೀಡಿದ್ದಾರೆ ಎಂದರು.

ಕರ್ನಾಟಕ ರಾಜ್ಯದ ಕಲಬುರ್ಗಿ, ಕೊಪ್ಪಳ, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರಾಜ್ಯ ಸರ್ಕಾರ ತನ್ನ ಬಳಿ ಇರುವ 1.65 ಲಕ್ಷ ಮೆಟ್ರಿಕ್ ಟನ್‌ ರಸಗೊಬ್ಬರವನ್ನು ಸರಿಯಾಗಿ ವಿತರಣೆ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.

ರಾಜ್ಯದ ಕಾಂಗ್ರೇಸ್ ಸರ್ಕಾರದಲ್ಲಿ ಉಂಟಾಗಿರುವ ಅಧಿಕಾರ ಹಂಚಿಕೆಯ ಗಲಾಟೆಯಲ್ಲಿ ರಸಗೊಬ್ಬರ ವಿತರಣೆಗೆ ಅಗತ್ಯ ಕ್ರಮಕೈಗೋಳ್ಳುವಲ್ಲಿ ವಿಫಲರಾಗಿದ್ದು ಮುಕ್ತ ಮಾರುಕಟ್ಟೆಯಲ್ಲಿ ಏಜೆಂಟರು ಯೂರಿಯಾ ರಸಗೊಬ್ಬರದ ದುರ್ಬಳಕೆ ಮಾಡಿಕೊಂಡಿದ್ದು ಅಂತವರಿಗೆ ಅವಕಾಶ ನೀಡಿ ರೈತರನ್ನು ಬೀದಿಗೆ ತಳ್ಳಿ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೊರಿಸುವುದು ಎಷ್ಟು ಸರಿ ? ರೈತರ ರಸಗೊಬ್ಬರ ವಿಷಯದಲ್ಲಿ ರಾಜಕೀಯ ಮಾಡಲಾರದೇ ಸರಿಯಾದ ವಿತರಣೆಗೆ ಕ್ರಮಕೈಗೊಂಡು ರೈತರ ನೆರವಿಗೆ ದಾವಿಸಬೇಕಾದ ಅವಶ್ಯಕತೆ ಇದೆ.

ಈ ನಿಯೋಗದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದರಾದ ಜಗದೀಶ ಶೆಟ್ಟರ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಿ.ಸಿ ಗದ್ದಗೌಡರ, ರಮೇಶ ಜಿಗಜಿಣಗಿ, ಡಾ. ಕೆ. ಸುಧಾರಕರ, ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.

ವರದಿ : ಶಿವಾನಂದ ಮುಧೋಳ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!