ಲೋಕಸಭೆ : ರಾಹುಲ್ ಅಸ್ತ್ರಕ್ಕೆ – ಮೋದಿ ಪ್ರತ್ಯಸ್ತ್ರ.
ಲೋಕಸಭೆ - ವಿರೋಧ ಪಕ್ಷ ಕಾಂಗ್ರೇಸ್ ಪ್ರತಿಭಟನೆ ನಡುವೆ ಗುಡುಗಿದ ಮೋದಿ.
ನವದೆಹಲಿ – ಸತ್ಯಮಿಥ್ಯ ( ಜು -02).
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೆನ್ನೆ ಸೋಮವಾರ ಲೋಕಸಭೆಯಲ್ಲಿ ಭರ್ಜರಿ ಭಾಷಣ ಮಾಡುವ ಮೂಲಕ ಆಡಳಿತ ರೋಡ ಬಿಜೆಪಿ ಪಕ್ಷಕ್ಕೆ ಟಕ್ಕರ್ ನೀಡಿದ್ದರು ಇದಕ್ಕೆ ಪ್ರತ್ಯುತ್ತರ ನೀಡಿದ ಮೋದಿ ಸುಧೀರ್ಗ ಮಾತುಗಳ ಮೂಲಕ ಕಾಂಗ್ರೇಸ್ ತನ್ನ ಆಡಳಿತದಲ್ಲಿ ದಲಿತರಿಗೆ ಮಾಡಿದ ಮೋಸ, ಭ್ರಷ್ಟಾಚಾರ, ಲೋಕಸಭಾ ಚುನಾವಣೆಯಲ್ಲಿ ಜನತೆ ನೀಡಿದ ತೀರ್ಪು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್ ಮೇಲೆ ನೇರವಾಗಿ ದಾಳಿ ಮಾಡಿದರು.
ಹಿಂದುತ್ವ ಬಿಜೆಪಿ,ಆರ್ ಎಸ್ ಎಸ್, ಮೋದಿ ಸ್ವತ್ತಲ್ಲ ಎಂಬುವುದನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಜನತೆ ತಿಳಿಸಿದ್ದಾರೆ. ರಾಮಮಂದಿರ ನಿರ್ಮಾಣ ಸ್ಥಳದಲ್ಲಿ ಬಿಜೆಪಿಗೆ ಸೋಲು, ನೀಟ್ ಪರೀಕ್ಷೆ ವ್ಯಾಪಾರಿಕರಣವಾಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಗಿದೆ, ಅಗ್ನಿಪಥ್ ಯೋಜನೆ ಸೇರಿದಂತೆ ಹಲವು ವಿಷಯಗಳನ್ನು ಎತ್ತಿಕೊಂಡು ಆಡಳಿತ ಪಕ್ಷ ಬಿಜೆಪಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿಗೆ ನೇರವಾಗಿ ಮೋದಿ ಉತ್ತರ ನೀಡಿದರು .
ಇಂದು ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ಹೀಗಿವೆ .
* ದೇಶದ ಜನತೆ ಮೂರನೇ ಬಾರಿ ನಮ್ಮ ಮೇಲೆ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಇಟ್ಟು ಆಶೀರ್ವಾದ ಮಾಡಿದ್ದಾರೆ.
* ಲೋಕಸಭಾ ಚುನಾವಣೆಯೊಂದಿಗೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಜರುಗಿದವು ಅದರಲ್ಲಿ ಆಂಧ್ರಪ್ರದೇಶದಲ್ಲಿ ಎನ್ ಡಿ ಎ ಕ್ಲೀನ್ ಸ್ವೀಪ್ ಮಾಡಿದೆ. ಓಡಿಸವರಲ್ಲಿ ನಮ್ಮದೇ ಬಿಜೆಪಿ ಸರ್ಕಾರ ಆಗಿದೆ. ಅರುಣಾಚಲ ಪ್ರದೇಶ ಮತ್ತೆ ನಮ್ಮದಾಗಿದೆ.
* ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುವ ಮೂಲಕ ಹೊಸ ಇತಿಹಾಸ ಬರೆದಿದ್ದೆವೆ.
* ತಮಿಳುನಾಡಿನಲ್ಲಿ ಅನೇಕ ಕಡೆ ನಾವು ಪ್ರಬಲರಾಗಿದ್ದೇವೆ.
* ಕರ್ನಾಟಕ ರಾಜಸ್ಥಾನ ಉತ್ತರ ಪ್ರದೇಶದಲ್ಲಿ ತೆಗೆದುಕೊಂಡ ಮತಗಳ ಪ್ರಮಾಣ ಹೆಚ್ಚಾಗಿದೆ.
* ಪಂಜಾಬ್ ನಲ್ಲಿ ಲೋಕಸಭಾ ಫಲಿತಾಂಶದಿಂದ ಪ್ರಗತಿಯಲ್ಲಿದ್ದೇವೆ.
* ಹತ್ತು ವರ್ಷದಲ್ಲಿ ಮೊಬೈಲ್ ಉತ್ಪಾದಕ ದೇಶವಾಗಿ ಹೊರಹೊಮ್ಮಿದ್ದೇವೆ.
* ಈ ಬಾರಿ ನಾವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದೇವೆ.
* ಗುಜರಾತ್, ಛತ್ತೀಸ್ಗಡ್ ಮಧ್ಯಪ್ರದೇಶದಲ್ಲಿ ಅಬುತ್ಪೂರ್ವ ಗೆಲುವು ಸಾಧಿಸಿದ್ದೇವೆ.
* ಕಾಂಗ್ರೆಸ್ ಪಕ್ಷ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದ ಹಾಗೆ ಕಾಣುತ್ತಿಲ್ಲ
* ಕಾಂಗ್ರೆಸ್ ಪಕ್ಷದ ಗೆಲವು ನಕಲಿಯಾಗಿದೆ. ಕಾಂಗ್ರೆಸ್- ಬಿಜೆಪಿ ಮುಖಾಮುಖಿಯಾದ ಕ್ಷೇತ್ರದಲ್ಲಿ ಶೇಕಡ 26ರಷ್ಟು ಗೆಲುವು ಮಾತ್ರ ವಿರೋಧ ಪಕ್ಷ ಸಾಧಿಸಿದೆ.
* ದೇಶದ ಜನತೆ ಕಾಂಗ್ರೆಸ್ ಮಿತ್ರಕೂಟಕ್ಕೆ ವಿರೋಧ ಪಕ್ಷದಲ್ಲಿ ಕೂರುವ ಜನಾದೇಶ ನೀಡಿದೆ.
* ಕಾಂಗ್ರೆಸ್ ಇತಿಹಾಸದಲ್ಲಿಯೇ ಮೂರನೆಯ ಅತ್ಯಂತ ಕೆಟ್ಟ ಸೋಲು ಈ ಲೋಕಸಭಾ ಚುನಾವಣೆಯಲ್ಲಿ ಆಗಿದೆ.
* ಕಾಂಗ್ರೆಸ್ನವರು ಹಗಲು ರಾತ್ರಿ ನಾವು ಗೆದ್ದಿದ್ದೇವೆ ನಾವು ಗೆದ್ದಿದ್ದೇವೆ ಎಂದು ಹೇಳಿಕೊಂಡು ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಯೊಬ್ಬ ನಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಅಹಂಕಾರದಿಂದ ಹೇಳುತ್ತಾ. ಜನ ಮೆಚ್ಚುಗೆಯನ್ನು ಪಡೆಯುತ್ತಿರುವಾಗ
* ಶಿಕ್ಷಕರೊಬ್ಬರು ಬಂದು ನೀನು ನೂರಕ್ಕೆ 99 ತೆಗೆದುಕೊಂಡಿಲ್ಲ 543ಕ್ಕೆ 99 ತೆಗೆದುಕೊಂಡಿದ್ದೀಯಾ ಎಂದು ಎಚ್ಚರಿಸಿದ ಹಾಗಿದೆ.
* ದೇಶದ ಪ್ರಗತಿ ಏರುತ್ತಿದೆ ಕಾಂಗ್ರೆಸ್ ಅದನ್ನು ಛಿದ್ರ ಮಾಡುವ ಪ್ರಯತ್ನದಲ್ಲಿದೆ.
* ನಾವು ದೇಶವನ್ನು ಪ್ರಪಂಚದ 5ನೆಯ ಆರ್ಥಿಕ ಪ್ರಗತಿ ಹೊಂದಿದ ರಾಷ್ಟ್ರವನ್ನಾಗಿಸಿದರೆ. ಕಾಂಗ್ರೆಸ್ ಸಾಲು ಸಾಲು ಉಚಿತ ಕೊಡುಗೆಗಳನ್ನು ನೀಡುವ ಮೂಲಕ ದೇಶದ ಆರ್ಥಿಕತೆಯನ್ನು ಛಿದ್ರ ಮಾಡುವ ಪ್ರಯತ್ನದಲ್ಲಿದೆ.
* ರಾಹುಲ್ ಗಾಂಧಿಯ ಕಟಾ ಕಟ್ ಹೇಳಿಕೆಗೆ ನೀಡಿದ ನರೇಂದ್ರ ಮೋದಿ. ನಿನ್ನೆ ದೇಶದ ಜನರು ತಮ್ಮ ಖಾತೆಯನ್ನು ಪರಿಶೀಲಿಸುತ್ತಿದ್ದರು 8500 ರೂಪಾಯಿಗಳು ಜಮಾ ಆಗಿರಲಿಲ್ಲ.
* ಕಾಂಗ್ರೆಸ್ ಪ್ರಾರಂಭದಿಂದಲೂ ದಲಿತ ಹಿಂದುಳಿದ ವರ್ಗದವರಿಗೆ ಮೋಸ ಮಾಡುವ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದೆ.
* ಕಾಂಗ್ರೆಸ್ ಸುಳ್ಳುಗಳ ರಾಜನೀತಿಯ ಸೃಷ್ಟಿಕರ್ತ.
* ದೇಶದಲ್ಲಿ ಇಂದಿರಾಗಾಂಧಿ ಒನ್ ರಾಂಕ್ ಒನ್ ಪೆನ್ಷನ್ ಜಾರಿಗೆ ತಂದಿದ್ದರು. ಇಂದಿನ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ.
* ರಫೆಲ್ ವಿಚಾರದಲ್ಲಿ ಹುಡುಗ ಬುದ್ದಿ ತೋರಿಸಿರುವ ಕಾಂಗ್ರೆಸ್, ಅಗ್ನಿವೀರ ಪ್ರಸ್ತಾಪಿಸುವ ಮೂಲಕ ದೇಶದ ಸೈನಿಕನ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ.
* ಪ್ರತಿಯೊಬ್ಬ ಬಡವರಿಗೆ ಮನೆ ನಿರ್ಮಾಣದ ದೃಢಸಂಕಲ್ಪ ಹೊಂದಿದ್ದೇವೆ.
* ನೀಟ್ ಅಕ್ರಮದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ.ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರ ಬಹಳಷ್ಟು ಕಾಳಜಿ ಹೊಂದಿದೆ.
* ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯುತ್ತಾರೆ ಎನ್ನುವ ಹೇಳಿಕೆಗೆ ತಿರುಗೇಟು ನಡೆದ ಮೋದಿ. ಜವಾಹರ್ ಲಾಲ್ ನೆಹರು ಮೀಸಲಾತಿಯ ವಿರೋಧಿಯಾಗಿದ್ದರು.
* ನಾವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಣಿಯಾಗುತ್ತಿದ್ದೇವೆ.
* ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆಯಿಂದ ದಲಿತ ನಾಯಕರಾದ ಅಂಬೇಡ್ಕರ್, ಬಾಬು ಜಗಜೀವನ್ ರಾಮ್, ಸೀತಾರಾಮ್ ಕೇಸರಿಯವರಿಗೆ ಅನ್ಯಾಯ ಮಾಡಿದ್ದರು.
* ಇವಿಎಂ ಯಂತ್ರದ ಬಗ್ಗೆ ಸುಳ್ಳು ಹಬ್ಬಿಸುವ ಕೆಲಸ ಕಾಂಗ್ರೇಸ್ ಮಾಡುತ್ತಿದೆ.
* ಡಿಜಿಟಲ್ ಇಂಡಿಯಾ ಡೆವಲಪ್ ಮಾಡುವ ಮೂಲಕ ಜಿ 20 ಶೃಂಗಸಭೆಯಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದೇವೆ.
* ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಡಿಜಿಟಲ್ ಪೇಮೆಂಟ್ ಬಳಕೆ ಮಾಡುತ್ತಿದ್ದಾರೆ.
* 13 ರಾಜ್ಯಗಳಲ್ಲಿ ಶೂನ್ಯ ಸ್ಥಾನ ಸಂಪಾದನೆಯ ಮೂಲಕ ಕಾಂಗ್ರೆಸ್ ಸೋಲಿನಲ್ಲಿ ಇತಿಹಾಸ ರಚಿಸಿದೆ.
ಈ ನಡುವೆ ಮೋದಿ ಮಾತನಾಡಲು ಪ್ರಾರಂಬಿಸಿದ ಸಂದರ್ಭದಿಂದ ಮಾತು ಮುಗಿಸುವವರೆಗೂ ಬಿಜೆಪಿ ವಿರುದ್ಧ ಘೋಷಣೆಗಳು ಕೇಳಿಬಂದವು. ನಡುವೆ ಎರಡು ಭಾರಿ ಸಭಾಪತಿ ಓಂ ಬಿರ್ಲಾ ಕೋಪಗೊಂಡು ವಿರೋಧ ಪಕ್ಷವನ್ನು ಎಚ್ಚರಿಸಿದ ಘಟನೆಗಳು ಜರುಗಿದವು. ಮೋದಿ ಭಾಷಣ ನಂತರ ಎನ್ ಡಿ ಎ ಸಂಸದರು ಮೋದಿಗೆ ಅಭಿನಂದಿಸಿದರು.
ವರದಿ : ಚನ್ನು. ಎಸ್.