ರಾಷ್ಟ್ರೀಯ ಸುದ್ದಿ

ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಬಸವರಾಜ ಬೊಮ್ಮಾಯಿ.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಸದಾ ಚಿರಋಣಿ: ಬಸವರಾಜ ಬೊಮ್ಮಾಯಿ

Share News

*ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಬಸವರಾಜ ಬೊಮ್ಮಾಯಿ*

*ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಸದಾ ಚಿರಋಣಿ: ಬಸವರಾಜ ಬೊಮ್ಮಾಯಿ*

ದೆಹಲಿ:ಸತ್ಯ ಮಿಥ್ಯ ( ಜೂ -25)

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಬಸವರಾಜ ಬೊಮ್ಮಾಯಿಯವರು ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ಬೀಕರಿಸಿದರು.

ನೂತನ ಸಂಸತ್ ಭವನದಲ್ಲಿ ನಡೆದ ನೂತನ ಸಂಸದರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹಾವೇರಿ ಗದಗ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಭತೃಹರಿ ಮಹತಾಭ್ ಪ್ರಮಾಣ ವಚನ ಬೊಧಿಸಿದರು.

ತಮ್ಮ ಪ್ರಮಾಣ ವಚನದ ಕುರಿತು ಎಕ್ಸ್ ಮಾಡಿರುವ ಸಂಸದ ಬಸವರಾಜ ಬೊಮ್ಮಾಯಿಯವರು, ಇದು ನನ್ನ ರಾಜಕೀಯ ಜೀವನದ ಅತ್ಯಂತ ಹೆಮ್ಮೆಯ ಹಾಗೂ ಮಹತ್ವದ ಕ್ಷಣ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಜನರ ಪ್ರತಿನಿಧಿಯಾಗಿ 18 ನೇ ಲೋಕಸಭಾ ಸದಸ್ಯನಾಗಿ ಇಂದು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದೆ‌.

ಭಾರತದ ಪ್ರಜಾಪ್ರಭುತ್ವದ ಸನ್ನಿಧಿಯಲ್ಲಿ ಕರ್ನಾಟಕ ಹಾಗೂ ಕನ್ನಡದ ಧ್ವನಿಯಾಗಲು ಸಹಕರಿಸಿದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ನಾನು ಸದಾ ಚಿರಋಣಿ.

ಭಾರತ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನನ್ನ ಪ್ರಯತ್ನ ನಿರಂತರವಾಗಿರಲಿದ್ದು, ಸರ್ವಾಂಗೀಣ ಅಭಿವೃದ್ಧಿಗೆ ಸದಾ ಶ್ರಮಿಸುವೆ‌ ಎಂದು ತಿಳಿಸಿದ್ದಾರೆ.

ವರದಿ : ಮುತ್ತು.

 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!