ವಿದ್ಯಾನಂದ ಗುರುಕುಲ ಡಾ.ಜಿ.ಎಸ್.ಮೇಲ್ಕೋಟೆ ಪಾಲಿಟೆಕ್ನಿಕ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಮರೇಶ ಮಡ್ಡಿಕೇರಿ ಅಧಿಕಾರ ಸ್ವೀಕಾರ .

ವಿದ್ಯಾನಂದ ಗುರುಕುಲ ಡಾ.ಜಿ.ಎಸ್.ಮೇಲ್ಕೋಟೆ ಪಾಲಿಟೆಕ್ನಿಕ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಮರೇಶ ಮಡ್ಡಿಕೇರಿ ಅಧಿಕಾರ ಸ್ವೀಕಾರ .
ಕುಕನೂರ : ಸತ್ಯಮಿಥ್ಯ (ಸ -05)
ವಿಶ್ವಸ್ಥ ಮಂಡಳಿ ಪರಮಪೂಜ್ಯರು ಈ ಭಾಗವನ್ನು ಶೈಕ್ಷಣಿಕ ಕೇಂದ್ರನಾಗಿಸುವ ಸಂಕಲ್ಪ ತೊಟ್ಟಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಹೆಸರಾಗಿ ವಿದ್ಯಾನಂದ ಗುರುಕುಲ ಡಾ. ಜಿ. ಎಸ್. ಮೇಲ್ಕೋಟೆ ಪಾಲಿಟೆಕ್ನಿಕ್ ಕಾಲೇಜು ಇಂದು ಸಮಾಜದಲ್ಲಿ ಗುರುತಿಸಿಕೊಂಡಿದೆ. ಎಲ್ಲರೂ ಜತೆ ಜತೆಯಾಗಿ ಹೆಜ್ಜೆ ಹಾಕಿದರೆ ನಮ್ಮ ಸಂಸ್ಥೆ ಮತ್ತಷ್ಟು ಉನ್ನತಿಯನ್ನು ಸಾಧಿಸುವುದರಲ್ಲಿ ಅನುಮಾನವಿಲ್ಲ. ಈ ಸಂಸ್ಥೆ ನನ್ನ ಮೇಲೆ ವಿಶ್ವಾಸ ಇರಿಸಿ ಗುರುತರ ಜವಾಬ್ದಾರಿ ನೀಡಿದೆ ಇದನ್ನು ನಿರ್ವಹಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅಧಿಕಾರ ಸ್ವೀಕರಿಸಿ ಅಮರೇಶ ಮಡ್ಡಿಕೇರಿ ಮಾತನಾಡಿದರು.
1988ರಿಂದ ಇದೆ ವಿದ್ಯಾನಂದ ಗುರುಕುಲ ಡಾ. ಜಿ. ಎಸ್. ಮೇಲ್ಕೋಟೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು. 2012 ಆಯ್ಕೆ ಸಿರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಇದೆ ಆಗಸ್ಟ್ 31- 2024 ರಂದು ಎನ್. ಆರ್ ಕುಕನೂರ್ ಅವರು ಹಿಂದಿನ ಪ್ರಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿದ್ದು. ಇದೆ ಸಪ್ಟಂಬರ್ 5ನೇ ತಾರೀಕು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶೇಖ ಮಹಬೂಬ ಉಪ ಪ್ರಾಚಾರ್ಯರು, ಮನೋಹರ್ ಸುಲಾಖೆ, ದನ್ವಂತ್ರಿ.ಎಮ್, ಸುಧಾಕರ್ ದೇಸಾಯಿ, ಮಂಜುನಾಥ ಹಮ್ಮಿಗಿ, ಜಿ. ವಿ. ಜಾಗಿರದಾರ, ಶ್ರೀನಿವಾಸ್ ದೇಸಾಯಿ, ದತ್ತುರಾವ ಜಗತಾಪ,ಈರಣ್ಣ ಬಡಿಗೇರ, ಮತ್ತು ಪಾಲಿಟೆಕ್ನಿಕ್ ಸಿಬ್ಬಂದಿ ವರ್ಗದವರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.