ಜಿಲ್ಲಾ ಸುದ್ದಿ

ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆಯಲ್ಲಿ ರೈತರಿಗೆ ನಿರಾಸೆ.

Share News

ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆಯಲ್ಲಿ ರೈತರಿಗೆ ನಿರಾಸೆ;

ಮುಂದಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಜಿಲ್ಲಾ ಸಮಿತಿ ಸಭೆಯಲ್ಲಿ ವಿಶೇಷ ಪ್ರಕರಣವಾಗಿ ಚರ್ಚೆ.

ಗಜೇಂದ್ರಗಡ/ಸತ್ಯಮಿಥ್ಯ (ಅ-10).

ಕರ್ನಾಟಕ ಪ್ರಾಂತ ರೈತ ಸಂಘಟನೆಯ ನೇತೃತ್ವದಲ್ಲಿ ಗಜೇಂದ್ರಗಡ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಹಿಂದೆ ಸುಮಾರು ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗಿತ್ತು . ಹೋರಾಟದ ಸ್ಥಳಕ್ಕೆ ಮಾನ್ಯ ತಹಶೀಲ್ದಾರರು ಭೇಟಿ ನೀಡಿ ಹದಿನೈದು ದಿನಗಳ ಒಳಗೆ ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು ನಿಮಗೆ ನ್ಯಾಯ ಒದಗಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು ಆದ ನಂತರ ಹೋರಾಟ ಹಿಂತೆಗೆದುಕೊಳ್ಳಲಾಗಿತ್ತು.

ಅ-08 ಬುಧವಾರ ಮಾನ್ಯ ತಹಶೀಲ್ದಾರರು ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು ಸಂಘಟನೆಯ ಪದಾಧಿಕಾರಿಗಳನ್ನ ಒಳಗೊಂಡು ಸಭೆ ಕರೆದಿದ್ದರು ಸಭೆಯಲ್ಲಿ ಸಮಗ್ರವಾಗಿ ಚರ್ಚೆಯಾಯಿತು ತದನಂತರದಲ್ಲಿ ಸಮಿತಿಯ ಅಧ್ಯಕ್ಷರಾದ  ಜಿ ಎಸ್ ಪಾಟೀಲ್ ಶಾಸಕರು ರೊಣ ಮಾತನಾಡಿ ಬ ಕರಾಬ್ ಲ್ಯಾಂಡ್ ಗಳನ್ನು ಕೊಡಲಾಗದು ಯಾಕೆಂದರೆ ಸರ್ಕಾರದ ಕಾನೂನಿನಲ್ಲಿ ಅವಕಾಶ ಇಲ್ಲ ಅಂತ ಹೇಳಿದರು. ತದನಂತರದಲ್ಲಿ ಹೋರಾಟಗಾರರು ಕೆಲವು ಮಾಹಿತಿ, ಲಿಖಿತ ದಾಖಲೆಗಳನ್ನು ತೋರಿಸಿ ಕೆಲವು ಸರ್ಕಾರದ ಚೌಕಟ್ಟಿನಲ್ಲಿ ಮಾಡಬಹುದು ಅಂತ ಉದಾಹರಣೆಗೆ ದಾಖಲೆಗಳನ್ನು ತೋರಿಸಿದ ಮೇಲೆ ಸಮಿತಿ ಅಧ್ಯಕ್ಷರು ಆಗಬಹುದು ಸರ್ಕಾರದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮದ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣವಾಗಿ ಚರ್ಚೆ ಮಾಡಿಸಿ ಸರ್ಕಾರದ ಕೆಲಸಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು .

Oplus_131072

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ  ಜಿ ಎಸ್ ಪಾಟೀಲ್, ಸದಸ್ಯರಾದ ಕೀರಣಕುಮಾರ ಕುಲಕರ್ಣಿ, ಶಾರದಾ ರಾಠೋಡ, ಶಶಿ ಹೂಗಾರ, ಹೊಸಮನಿ, ಹಾಗೂ ರೋಣ ತಹಶಿಲ್ದಾರರು, ರೈತ ಸಂಘಟನೆಯ ಮುಖಂಡರಾದ ಜಿ ನಾಗರಾಜ್,ಬಾಲು ರಾಠೋಡ, ಎಮ್ ಎಸ್ ಹಡಪದ, ರೂಪಲೇಶ ಮಾಳೋತ್ತರ, ಪೀರು ರಾಠೋಡ, ಚನ್ನಪ್ಪ ಗುಗಳೋತ್ತರ, ವೀರೇಶ್ ರಾಠೋಡ, ಕುಬೇರ ರಾಠೋಡ, ಚಂದ್ರು ರಾಠೋಡ, ಇದ್ದರು.

ವರದಿ /ಸಂ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!