
ಬೆಟಗೇರಿಯ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿ ಸುವರ್ಣ ಗಣೇಶೋತ್ಸವದ ವಿಜೃಂಭಣೆಯ ಮೆರವಣಿಗೆ.
ಗದಗ : ಸತ್ಯಮಿಥ್ಯ (ಆ-23)
ನಗರದ ಬೆಟಗೇರಿಯ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿಯ 50ನೇ ವರ್ಷದ ಸುವರ್ಣ ಗಣೇಶೋತ್ಸವದ ಪ್ರಯುಕ್ತ ವಿಜೃಂಭಣೆಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಜಾನನ ಮಂಡಳಿಯ ಅಧ್ಯಕ್ಷರಾದ ಉದಯ ವರ್ಣೇಕರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ.
ನಂತರ ಮಾತನಾಡಿದ ಅವರು ಸುವರ್ಣ ಗಣೇಶೋತ್ಸವದ ಪ್ರಯುಕ್ತ ನಗರದ ಜೆ ಟಿ ಕಾಲೇಜ್ ಹತ್ತಿರವಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕುರಹಟ್ಟಿ ಪೇಟೆಯ ನೀಲಕಂಠೇಶ್ವರ ಮಠದಿಂದ
101 ಕುಂಭಮೇಳದೊಂದಿಗೆ ಸಕಲ ವಾದ್ಯ ಮೇಳದೊಂದಿಗೆ ನಗರದ ವಿವಿಧ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ಹೊರಟು ಗಜಾನನ ಪ್ರತಿಷ್ಠಾಪನೆಯ ಮಲ್ಲಿಕಾರ್ಜುನ ರಸ್ತೆಯವರೆಗೆ ಮೆರವಣಿಗೆ ನಡೆಯಲ್ಲಿದ್ದು ಅವಳಿ ನಗರದ ಎಲ್ಲ ಜನತೆಯು ಪಾಲ್ಗೊಳ್ಳುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಮೆರವಣಿಗೆಯಲ್ಲಿ ಗಜಾನನ ಮಂಡಳಿಯ ಪದಾಧಿಕಾರಿಗಳಾದ ಪರಶುರಾಮ ಕಟ್ಟಿಮನಿ ಈರಣ್ಣ ಜ್ಯೋತಿ, ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ವಿಜೃಂಭಣೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಹೇಳಿದ್ದಾರೆ.
ವರದಿ : ಮುತ್ತು ಗೋಸಲ.