ಜಿಲ್ಲಾ ಸುದ್ದಿ

ಗದಗ : ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಿಸ್ತಿನಿಂದಿರುವ ಸುಂದರ ನಗರ ನಿರ್ಮಾಣವಾಗಲಿ : ಎಚ್.ಕೆ.ಪಾಟೀಲ್

Share News

ಗದಗ : ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಿಸ್ತಿನಿಂದಿರುವ ಸುಂದರ ನಗರ ನಿರ್ಮಾಣವಾಗಲಿ : ಎಚ್.ಕೆ.ಪಾಟೀಲ್
AA

ಗದಗ – ಸತ್ಯಮಿಥ್ಯ (ಜು.29)

ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾನೂನು ನಿಯಮಗಳನ್ವಯ ,ಶಿಸ್ತು ಬದ್ಧವಾಗಿ ಸುಂದರ ಮತ್ತು ಶೋಷಣೆ ಮುಕ್ತ ನಗರ ನಿರ್ಮಾಣವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ಕೆ.ಪಾಟೀಲ್ ಅವರು ಹೇಳಿದರು.

ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಭವನದಲ್ಲಿ ಸೋಮವಾರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗದಗ ನಗರದ ನಿರ್ಮಾಣವು ತನ್ನದೆಯಾದ ಇತಿಹಾಸವನ್ನು ಹೊಂದಿದೆ ನಗರಾಭಿವೃದ್ಧಿ ಪ್ರಾಧಿಕಾರದ ಮಹತ್ವದ ಮತ್ತು ಜವಾಬ್ದಾರಿ ಕೆಲಸವನ್ನು ಹೊಂದಿದೆ ಅದನ್ನು ಶಿಸ್ತಿನಿಂದ ಪಾಲಿಸಬೇಕು.ಅಭಿವೃದ್ಧಿ ಕೆಲಸಗಳಿಗೆ ನಗರದಲ್ಲಿ ಸಾಕಷ್ಟು ಅವಕಾಶಗಳಿವೆ ಪ್ರಾಧಿಕಾರದಿಂದ ಉತ್ತಮ ಮತ್ತು ಸೂಕ್ತ ಕೆಲಸಗಳನ್ನು ಮಾಡುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರದಲ್ಲಿ ಬೃಹತ್ತಾಕಾರದ ಉದ್ಯಾನವನಗಳು ನಿರ್ಮಾಣವಾಗಬೇಕು ಅದರಿಂದ ಸಾರ್ವಜನಿಕರಿಗೆ ಉಪಯೋಗವಾಗುವಂತ ಸ್ಥಳಗಳನ್ನು ಗುರುತಿಸಿ, ಸುಂದರವಾದ ಉದ್ಯಾನವನಗಳು ನಿರ್ಮಾಣಗೊಳಿಸಿ ನಗರವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಕಾರ್ಯಪ್ರವೃತ್ತರಾಗಬೇಕು .ಕಾನೂನು ಬಾಹಿರವಾಗಿ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣಗೊಳ್ಳುವ ಕಟ್ಟಡಗಳನ್ನು ಮೊದಲ ಹಂತದಲ್ಲಿಯೇ ಗುರುತಿಸಿ ಅಂತವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅಂದಾಗ ಮಾತ್ರ ವೈಜ್ಞಾನಿಕ ವಾಗಿ ನಗರ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ ಮಾತನಾಡಿ, ನಗರದ ಭೀಷ್ಮಕೇರಿ ಬಹಳ ಪ್ರಮುಖ್ಯತೆ ಹೊಂದಿದ್ದು ಅದನ್ನು ನಿರ್ವಹಿಸುವ ಮತ್ತು ಉತ್ತಮವಾಗಿ ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು ಎಂದರು.

ಪ್ರಾಧಿಕಾರದ ಸದಸ್ಯರಾದ ಬಸವರಾಜ ಕಡೇಮನಿ ಅವರು ಸ್ವಾಗತಿಸಿದರು. ಸಭೆಯಲ್ಲಿ ಪ್ರಾಧಿಕಾರದ ಸದಸ್ಯರುಗಳಾದ ಜಾನಕಿ ಮಲ್ಲಾಪೂರ, ಚಂದ್ರಶೇಖರ ತಡಪದ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!