
ವಿಷಾಹಾರ ಸೇವಿಸಿ 54ಕ್ಕೂ ಹೆಚ್ಚು ಕುರಿಗಳ ಸಾವು
ಗದಗ/ಸತ್ಯಮಿಥ್ಯ (ಅ-06)
ವಿಷಾಹಾರ ಸೇವಿಸಿ 54ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಜಮೀನಿನಲ್ಲಿ ರವಿವಾರ ತಡರಾತ್ರಿ ಜರುಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಮಣಿಗಿನಿ ಪೂಜಾರಿ ಅವರಿಗೆ ಸೇರಿದ 38 ಹಾಗೂ ಯಲ್ಲವ್ವ ಬೀರಸಿದ್ದ ಪೂಜಾರಿ ಅವರಿಗೆ ಸೇರಿದ 16 ಕುರಿಗಳು ಮೃತಪಟ್ಟಿವೆ.
ರವಿವಾರ ಸಂಜೆ ಹೊಳೆಇಟಗಿ ಹತ್ತಿರ ಶಿರಗಾಂವ ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಕುರಿಗಳು ವಿಷಾಹಾರ ಸೇವಿಸಿ ಸಾವಿಗೀಡಾಗಿದ್ದು, ಘಟನಾ ಸ್ಥಳಕ್ಕೆ ತಹಶೀಲ್ದಾರ ರಾಘವೇಂದ್ರ ರಾವ, ಜಿಲ್ಲಾ ಕುರಿ ನಿಗಮದ ನಿರ್ದೇಶಕ ಉಮೇಶ ತಿರ್ಲಾಪೂರ, ತಾಲೂಕ ಪಶು ವೈದ್ಯಾಧಿಕಾರಿ ನಿಂಗಪ್ಪ ಓಲೆಕಾರ, ಸಮಾಜದ ಮುಖಂಡರು ಮಂಜುನಾಥ ಘಂಟಿ ಸೇರಿ ಗ್ರಾಮಸ್ಥರು ಭೇಟಿ ನೀಡಿ, ಕುರಿಗಾರರಿಗೆ ಸಾಂತ್ವನ ಹೇಳುವದರ ಜೊತೆಗೆ ಸರಕಾರದಿಂದ ಪರಿಹಾರ ಕೊಡಿಸುವಂತೆ ಕ್ರಮ ವಹಿಸಲು ಒತ್ತಾಯಿಸಿದರು.
ವರದಿ : ಮುತ್ತು ಗೋಸಲ.