
ವಸತಿ ನಿಲಯ ದುರಸ್ಥಿ – ಆತಂಕದಲ್ಲಿ ವಿದ್ಯಾರ್ಥಿಗಳು : ವ್ಯವಸ್ಥೆ ಸರಿಪಡಿಸಲು ಎಸ್ ಎಫ್ ಐ ಆಗ್ರಹ.
ಗದಗ: ಸತ್ಯಮಿಥ್ಯ (ಆ-18).
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಡಿ ದೇವರಾಜ ಅರಸು ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 75 ಜನ ವಿದ್ಯಾರ್ಥಿಗಳ ಸಂಖ್ಯಾಬಲವಿದ್ದು ವಸತಿ ನಿಲಯದಲ್ಲಿ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವಿದ್ಯಾರ್ಥಿ ಸಂಘಟನೆಯಿಂದ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಎಮ್ ಎಮ್ ತುಂಬರಮಟ್ಟಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಸತಿ ನಿಲಯಗಳನ್ನು ಪ್ರಾರಂಭಿಸಲಾಗಿದೆ ಆದರೆ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ಕಾಟ್ ಬೇಡ್, ಕೊಠಡಿ ಸೋರಿಕೆ, ಪೆನ್ನು ಪುಸ್ತಕ, ಶೂ ಸಾಕ್ಸ್, ಶೌಚಾಲಯ ಇಲ್ಲದೆ ಇರುವುದು ಖೇದಕರ. ಇವೇಲವೂ ಕೂಡ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳು ಇದನ್ನು ಅಧಿಕಾರಿಗಳು ಕಲ್ಪಿಸದೆ ಕೇವಲ ಹಣ ಲೂಟಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ವಸತಿ ನಿಲಯ ಸೋರಿಕೆಯಾಗಿ ಸುಮಾರು ವರ್ಷಗಳಾದರೂ ವಸತಿ ನಿಲಯದ ಕಡೆ ಮುಖಮಾಡದ ಜಿಲ್ಲಾ ಹಾಗೂ ತಾಲೂಕಾಧಿಕಾರಿಗಳು.
ವಿದ್ಯಾರ್ಥಿಗಳ ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳು ಕಾಲ ಗತಿಸಿದ ವಿದ್ಯಾರ್ಥಿಗಳಿಗೆ ಪೇನ್ನು ಪುಸ್ತಕ ಕೋಟ್ಟಿಲ್ಲ ಸರಿಯಾದ ದಿನ ಬಳಕೆಗೆ ನೀರು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಆದಷ್ಟು ಬೇಗಜಿಲ್ಲೆಯಲ್ಲಿ ಇತರಹ ಸಾಕಷ್ಟು ವಸತಿ ನಿಲಯಗಳು ದುರಸ್ತಿ ಹಂತದಲ್ಲಿದೆ ಅವುಗಳನ್ನು ಪರಿಶೀಲಿಸಿ ದುರಸ್ತಿಗೊಳಿಸಬೇಕು, ವಿದ್ಯಾರ್ಥಿಗಳ ಸಂಖ್ಯೆಗಳ ಅನುಗುಣವಾಗಿ ಹಾಗೂ ಹಾಸ್ಟೆಲ್ ಬಯಸಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಸತಿ ನಿಲಯ ಕಲ್ಪಿಸಬೇಕು. ಎಲ್ಲಾ ಸಮಸ್ಯೆಗಳನ್ನೂ ಮಾನ್ಯ ಅಧಿಕಾರಿಗಳು ಒಂದು ವಾರದಲ್ಲಿ ಸರಿಡಿಸಲು ಮುಂದಾಗಬೇಕೆಂದು ಹೇಳಿದರು .
ತಾಲೂಕ ಅಧ್ಯಕ್ಷರಾದ ಅನಿಲ್ ಆರ್ ಮಾತನಾಡಿ ತಾಲೂಕಿನಲ್ಲಿ ಇತರಹ ಸಾಕಷ್ಟು ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೋರತೆಯಿಂದ ಹಾಸ್ಟೆಲ್ ಗಳು ನರಳುತ್ತಿವೆ ಆದಷ್ಟು ಬೇಗ ಎಲ್ಲಾ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಎಮ್ ಎಮ್ ತುಂಬರಮಟ್ಟಿ ಜಿಲ್ಲಾಧಿಕಾರಿಗಳು. ಸಮಸ್ಯೆ ಗಮನಕ್ಕೆ ಬಂದಿಲ್ಲ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೆವೆ ಎಂದು ಹಾರಿಕೆ ಉತ್ತರ ಕೊಟ್ಟು ಹೊರಟು ಹೋದರು, ಅದಕ್ಕೆ ಪ್ರತಿಕ್ರಿಯೆಯಾಗಿ ಸಂಘಟನೆ ಮುಖಂಡರು ಇತರಹ ಅನವಶ್ಯಕ ಸಬೂಬು ಉತ್ತರಗಳನ್ನು ಕೊಡಬೇಡಿ , ವಿದ್ಯಾರ್ಥಿಗಳ ಜೀವಕೆ ಹೆಚ್ಚು ಕಡಿಮೆ ಆದರೆ ನೇರವಾಗಿ ನೀವೇ ಹೋಣೆಗಾರರೂ ಆಗುತ್ತಿರ ಅಂತ ಹೇಳಿ ಮುಂದಿನ ಒಂದು ವಾರದಲ್ಲಿ ಸರಿಪಡಿಸಲು ಮುಂದಾಗದೆ ಇದ್ದರೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ಅನಿಲ್ ರಾಠೋಡ, ಅಭೀಲಾಷ ಆರ್, ತಾಲೂಕು ಅಧಿಕಾರಿಗಳಾದ ಎಮ್ ಎಮ್ ಹಣಸಿ, ನಿಲಯಪಾಲಕರಾದ ಮಹಾಂತೇಶ ಗೋಡಿ, ವಿದ್ಯಾರ್ಥಿಗಳಾದ ಆದರ್ಶ, ಸಂದಿಪ,ಹುಚ್ಚಿರಪ್ಪ ಕುಂಬಾರ, ಪ್ರಜ್ವಲ್, ಸಂತೋಷ್, ವೀರೇಶ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ :ಸುರೇಶ ಬಂಡಾರಿ.