
ಇನ್ಸ್ಪೈರ್ ಮಾನಕ್ ಅವಾರ್ಡ್ ಗೆ ಗೋಗೇರಿ ಶಾಲೆಯ ಕು.ಪಲ್ಲವಿ ಆಯ್ಕೆ.
ಗೋಗೇರಿ:ಸತ್ಯಮಿಥ್ಯ (ಫೆ -01).
2023-24ನೇ ಸಾಲಿನ ಇನ್ಸ್ಪೈರ್ ಮಾನಕ್ ಅವಾರ್ಡ್ ಗೆ ‘ಸ್ವಚ್ಛ ಭಾರತ’ ವಿಷಯದಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಗೇರಿಯ ವಿದ್ಯಾರ್ಥಿನಿಯಾದ ಕುಮಾರಿ ಪಲ್ಲವಿ ಮೂಲಿಮನಿ ತಯಾರಿಸಿದ “ಸ್ವಚ್ಛ ಭಾರತ್ ಮಿಷನ್” ಎಂಬ ಮಾದರಿಯು ರೋಣ ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಈ ಅವಾರ್ಡ್ ಕೊಡಲಾಗುತ್ತದೆ.
ವಿಜ್ಞಾನ ಶಿಕ್ಷಕಿ ಶ್ರೀಮತಿ ಭಾಗ್ಯಶ್ರೀ ಎಮ್ ಮುಧೋಳ್ಕರ್ ಅವರ ಮಾರ್ಗದರ್ಶನದಲ್ಲಿ ಈ ಮಾದರಿ ತಯಾರಾಗಿದ್ದು ಶಿಕ್ಷಕಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗೋಗೇರಿಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಅಂಬೋರೆ, ಪ್ರಭಾರಿ ಪ್ರಧಾನ ಗುರುಗಳಾದ ಎಸ್.ಬಿ. ಚಳಗೇರಿ,ಎನ್. ಕೆ. ಹೆಬ್ಲಿ, ಜಿ.ಜೆ. ರಾಯಬಾಗಿ, ಬಿ. ವಿ. ಅಂಗಡಿ, ಡಿ. ಎನ್. ರಾವಳ, ರಾಜೇಶ್ವರಿ, ಲಕ್ಷ್ಮಿ ದೊಡ್ಡಮನಿ, ಆಶಾಬೇಗಂ ನದಾಫ್, ಶರಣಪ್ಪ ಯಗರಿ ಹರ್ಷ ವ್ಯಕಪಡಿಸಿದರು.
ಈ ವಿಷಯ ತಿಳಿದ ಗೋಗೇರಿ ಗ್ರಾಮಸ್ಥರು ಶಾಲೆಯ ಎಲ್ಲ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ :ಸುರೇಶ ಬಂಡಾರಿ.