
ನಾಳೆ : ಗಜೇಂದ್ರಗಡ ಅಹಿಂದ ಒಕ್ಕೂಟದಿಂದ ಪ್ರತಿಭಟನೆ.
ಗಜೇಂದ್ರಗಡ : ಸತ್ಯಮಿಥ್ಯ ( ಅಗಸ್ಟ್ -26).
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡೆದುಕೊಳ್ಳಲಾಗುತ್ತಿದೆ. ಎರಡನೆಯ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಿದ್ದರಾಮಯ್ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನ್ಯಾಯವಾಧಿ ವಿ.ಆರ್. ಗುಡಿಸಾಗರ ನುಡಿದರು.
ಅವರು ಪಟ್ಟಣದ ರೋಣ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯನವರ ವಿರುದ್ಧ ನಡೆದಿರುವ ಈ ಕುತಂತ್ರ ರಾಜಕಾರಣವನ್ನು ಖಂಡಿಸಿ ಆಗಸ್ಟ್ 27 (ನಾಳೆ)ರಂದು ತಾಲೂಕಾ ಅಹಿಂದ ವರ್ಗಗಳ ಒಕ್ಕೂಟ ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ಗಜೇಂದ್ರಗಡ ನಗರದಲ್ಲಿ ಬೆಳಿಗ್ಗೆ 9.30 ಕ್ಕೆ ಪಟ್ಟಣದ ಎಪಿಎಂಸಿ ಆವರಣದಿಂದ ಮೆರವಣಿಗೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಸ್. ಸೋಂಪುರ, ರಾಜು ಸಾಂಗ್ಲಿಕರ್, ರವಿ ಗಡೇದವರ್, ಮಂಜುಳಾ ರೇವಡಿ, ರಾಮಚಂದ್ರ ಹುದ್ದಾರ, ಉಮೇಶ ರಾಠೋಡ್, ಸುಭಾನಸಾಬ್ ಆರಗಿದ್ದಿ, ವೆಂಕಟೇಶ್ ಮುದಗಲ್, ಅಶೋಕ ಬಾಗಮಾರ, ಅಂದಪ್ಪ ಬಿಚ್ಚುರ, ಅಂದಪ್ಪ ರಾಠೋಡ್, ಅರ್ಜುನ ರಾಠೋಡ್, ಸುಬ್ರಮಣ್ಯ ರೆಡ್ಡಿ, ತಾರಾಸಿಂಗ ರಾಠೋಡ್, ಸುಮಂಗಲಾ ಇಟಗಿ, ಎಫ್ ಎಸ್ ಕರಿದುರಗನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ